Vanasiri : ಪ್ರತಿಯೊಬ್ಬರೂ ನೈಸರ್ಗಿಕ ಸಂಪತ್ತು ಉಳಿಸಿ ಬೆಳಸಬೇಕು..... ಅಮರೇಗೌಡ ಮಲ್ಲಾಪೂರ


 ಪ್ರತಿಯೊಬ್ಬರೂ ನೈಸರ್ಗಿಕ ಸಂಪತ್ತು ಉಳಿಸಿ ಬೆಳಸಬೇಕು..... ಅಮರೇಗೌಡ ಮಲ್ಲಾಪೂರ

ಪರಿಸರ ಪ್ರತಿಯೊಬ್ಬರಿಗೂ ಬೇಕಾದಂತಹ ನೈಸರ್ಗಿಕ ಸಂಪತ್ತು ಅದನ್ನು ನಾವುಗಳೆಲ್ಲರೂ ಉಳಿಸಿ ಬೆಳಸಬೇಕಾಗಿದೆ ಎಂದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಅವರು ತಿಳಿಸಿದರು.



  ಸಿಂಧನೂರಿನ ಅಮರ ಶ್ರೀ ಆಲದ ಮರದ ಹತ್ತಿರ ವನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ವನಸಿರಿ ಫೌಂಡೇಶನ್ ರಾಜ್ಯ ಉಪಾಧ್ಯಕ್ಷ ಗಿರಿಸ್ವಾಮಿ ಹೆಡಗಿನಾಳ ಅವರ ಹುಟ್ಟು ಹಬ್ಬದ ಅಂಗವಾಗಿ ಸಸಿನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ,ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಅವರು ಪರಿಸರ ಪ್ರತಿಯೊಬ್ಬರಿಗೂ ಬೇಕಾದಂತಹ ನೈಸರ್ಗಿಕ ಸಂಪತ್ತು ಅದನ್ನು ನಾವುಗಳೆಲ್ಲರೂ ಉಳಿಸಿ ಬೆಳಸಬೇಕಾಗಿದೆ.ಮಾನವನ ದುಷ್ಪರಿಣಾಮಗಳಿಂದ ಪರಿಸರ ಹಾಳಾಗುತ್ತಿದೆ.ಅಧುನಿಕತೆಗೆ ಮಾನವ ಮನಸೋತು ಗಿಡಮರಗಳನ್ನು ಕಡಿದು ಹಾಕುತ್ತಿದ್ದಾನೆ.ಮಾನವನ ಹಸ್ತಕ್ಷೇಪದಿಂದ ಪರಿಸರ ಹಾಳಾಗುತ್ತಿದೆ.ಇದರಿಂದಾಗಿ ಗಿಡಮರಗಳ ಸಂಖ್ಯೆ ಇಳಿಕೆಯಾಗುತ್ತಿದೆ.ನೈಸರ್ಗಿಕ ಸಂಪತ್ತು ಕಡಿಮೆಯಾಗಿ ಪರಿಸರ ನಾಶವಾಗುತ್ತಿದೆ.ಪರಿಸರವನ್ನು ಉಳಿಸಿ ಬೆಳಸಬೇಕಾದರೆ ಪ್ರತಿಯೊಬ್ಬರೂ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಸಸಿಗಳನ್ನು ನೆಡಬೇಕು ಎಂದು ತಿಳಿಸಿದರು.

   ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ,ಅಮರಯ್ಯ ಶಾಸ್ತ್ರೀ ಪತ್ರಿಮಠ,ಶರಣೇಗೌಡ ಹೆಡಗಿನಾಳ, ರಂಜಾನ್ ಸಾಬ್,ವೀರಭದ್ರಯ್ಯಸ್ವಾಮಿ ತಿಮ್ಮಾಪೂರ,ವೆಂಕಟರಡ್ಡಿ ಹೆಡಗಿನಾಳ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್ ಇನ್ನಿತರರು ಉಪಸ್ಥಿತರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">