Koppal : ಅಪರಿಚಿತ ವ್ಯಕ್ತಿ ಮೃತ: ಪ್ರಕರಣ ದಾಖಲು


ಅಪರಿಚಿತ ವ್ಯಕ್ತಿ ಮೃತ: ಪ್ರಕರಣ ದಾಖಲು

----

ಕೊಪ್ಪಳ : ಅಪರಿಚಿತ ವ್ಯಕ್ತಿ ಮೃತಪಟ್ಟ ಬಗ್ಗೆ ಗಂಗಾವತಿ  ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್.ನಂ:14/2023 ಕಲಂ: 174 ಸಿ.ಆರ್.ಪಿ.ಸಿ  ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯು ಅಂದಾಜು 35 ರಿಂದ 40 ವರ್ಷ ವಯೋಮಾನದವರಾಗಿದ್ದು, ಸುಮಾರು 5.2  ಎತ್ತರ, ಮೈ ಮೇಲೆ ಒಂದು ಕೆಂಪು ಮತ್ತು ಕಪ್ಪು ಬಣ್ಣದ ತುಂಬು ತೋಳಿನ ಚೆಕ್ಸ್  ಅಂಗಿ ಒಂದು ಖಾಕಿ ಬಣ್ಣದ ರೀತಿ ಕಾಣುವ ತುಂಬು ತೋಳಿನ ಸ್ವೆಟರ (ಜರ್ಕಿನ್), ಒಂದು ಕಪ್ಪು ನಾಶಿ ಕಲರಿನ ಪ್ಯಾಂಟ್ ಮತ್ತು ಸೊಂಟದ ಉಡುದಾರ ಇರುತ್ತದೆ. ಮೈಮೇಲೆ ಬಲಗೈ ಮುಂಗೈ ಮೇಲೆ ಓಂ ಗುರುತಿನ ಮತ್ತು ಬಲಗೈ ರಟ್ಟೆಗೆ ಗಾಯಿತ್ರಿ ಮಾನಪ್ಪ ಅಂತಾ ಹಚ್ಚೆ ಇರುತ್ತದೆ. ಈ ಮೃತ ವ್ಯಕ್ತಿಯ ಬಗ್ಗೆ ಗುರುತು ಹಾಗೂ ವಾರಸುದಾರರ ವಿಳಾಸ ಪತ್ತೆಯಾದಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ದೂ.ಸಂ: 08533-230854, ಪಿ.ಐ ಮೊ.ಸಂ: 9480803730, ಇಲ್ಲಿಗೆ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ ಠಾಣೆಯ ಆರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಶಿವಕುಮಾರ್ ಹಿರೇಮಠ

Previous Post Next Post

Contact Form

f="https://unpkg.com/video.js/dist/video-js.css" rel="stylesheet">