Kukanuru : ರೆಸಾರ್ಟ್ ಅಕ್ರಮ ಚಟುವಟಿಕೆಗೆ ಕಡಿವಾಣ,ರಾಯರಡ್ಡಿ ದಿಟ್ಟತನಕ್ಕೆ ಶ್ರೀನಾಥ್ ಬೆಚ್ಚು : ಡಾ ಮಲ್ಲಿಕಾರ್ಜುನ ಬಿನ್ನಾಳ

 

ರೆಸಾರ್ಟ್ ಅಕ್ರಮ ಚಟುವಟಿಕೆಗೆ ಕಡಿವಾಣ,ರಾಯರಡ್ಡಿ ದಿಟ್ಟತನಕ್ಕೆ ಶ್ರೀನಾಥ್ ಬೆಚ್ಚು :  ಡಾ ಮಲ್ಲಿಕಾರ್ಜುನ ಬಿನ್ನಾಳ 

ಕುಕನೂರು   :  ಗಂಗಾವತಿ ಭಾಗದಲ್ಲಿ ಇರುವ ರೆಸಾರ್ಟ್ ಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣ ಬಗ್ಗೆ ಸದನದಲ್ಲಿ ದನಿ ಎತ್ತಿದ ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಅವರ ದಿಟ್ಟನಕ್ಕೆ ಎಚ್ ಆರ್ ಶ್ರೀನಾಥ್ ಮತ್ತು ರೆಸಾರ್ಟ್ ಮಾಲಕರು ಬೆಚ್ಚಿ ಬಿದ್ದಿದ್ದಾರೆ ಎಂದು ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ ಮಲ್ಲಿಕಾರ್ಜುನ ಬಿನ್ನಾಳ ಹೇಳಿದರು.

ಕುಕನೂರು ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಡಾ ಮಲ್ಲಿಕಾರ್ಜುನ ಬಿನ್ನಾಳ ಅವರು, ಮಾಜಿ ಸಚಿವರಾದ ರಾಯರಡ್ಡಿ ಅವರು ದೂರದೃಷ್ಟಿಯುಳ್ಳ, ಅಭಿವೃದ್ಧಿ ಚಿಂತನೆಯ ರಾಜಕೀಯ ನಾಯಕರಾಗಿದ್ದು ಯಾವುದೇ ಮುಲಾಜಿಗೆ ಒಳಗಾದವರಲ್ಲ, ರೆಸಾರ್ಟ್ ನ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ರಾಯರಡ್ಡಿ ಅವರು ಸದನದಲ್ಲಿ ಗಮನ ಸೆಳೆಯುವಂತೆ ಮಾತನಾಡಿದ್ದು ಎಚ್ ಶ್ರೀನಾಥ್  ಮತ್ತು ರೆಸಾರ್ಟ್ ಮಾಲಕರಿಗೆ  ಸಹಿಸಿಕೊಳ್ಳಲು ಆಗುತ್ತಿಲ್ಲ, ಹೀಗಾಗಿ ಗಂಗಾವತಿಯಲ್ಲಿ ರಾಯರಡ್ಡಿ ಅವರ ಬಗ್ಗೆ ಟೀಕೆ ಮಾಡಿ ಪ್ರತಿಕೃತಿ ಸುಟ್ಟಿದ್ದು ಖಂಡನಿಯ ಎಂದು ಡಾ ಮಲ್ಲಿಕಾರ್ಜುನ ಬಿನ್ನಾಳ ಹೇಳಿದರು.

ಗಂಗಾವತಿ ಭಾಗದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದು ಇದರ ನಿಯಂತ್ರಣ ಆಗಬೇಕೆಂದು ರಾಯರಡ್ಡಿ ಅವರು ಸದನದಲ್ಲಿ ಹೇಳಿದ್ದಾರೆ, ಇದನ್ನೇ ತಪ್ಪಾಗಿ ತಿಳಿದುಕೊಂಡು ಶ್ರೀನಾಥ್ ಬೆಂಬಲಿಗರು ಮಾಜಿ ಸಚಿವ ರಾಯರಡ್ಡಿ ಬಗ್ಗೆ ಹಗುರವಾಗಿ ಮಾತನಾಡಿದ್ದು ಅಕ್ಷಮ್ಯ.

ರಾಜ್ಯದ ಅಭಿವೃದ್ಧಿ ಹರಿಕಾರ, ಧೀಮಂತ ನಾಯಕ, ಹಿರಿಯ ರಾಜಕಾರಣಿ ಮಾಜಿ ಉನ್ನತ ಶಿಕ್ಷಣ ಸಚಿವ ರಾಯರಡ್ಡಿ ಬಗ್ಗೆ ಎಚ್ ಆರ್ ಶ್ರೀನಾಥ್ ಹಗುರ ಮಾತು ಸಲ್ಲದು  ಬಸವರಾಜ್ ರಾಯರಡ್ಡಿ ಅವರ ಬಗ್ಗೆ ಅಡಿರುವ ಮಾತಿಗೆ ಎಚ್ ಆರ್ ಶ್ರೀನಾಥ್ ಕೂಡಲೇ ಬೇಷರತ್ ಕ್ಷಮೆ ಕೇಳಬೇಕು ಎಂದು ಡಾ ಮಲ್ಲಿಕಾರ್ಜುನ ಬಿನ್ನಾಳ ಅಗ್ರಹಿಸಿದ್ದಾರೆ.

ವರದಿ : ಈರಯ್ಯ ಕುರ್ತಕೋಟಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">