PM Kisan ಪಿಎಂ ಕಿಸಾನ್: 14ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ


ಪಿಎಂ ಕಿಸಾನ್: 14ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ *********************************

PM Kisan ಪಿಎಂ ಕಿಸಾನ್: 14ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 14ನೇ ಕಂತಿನ ಹಣ ಬಿಡುಗಡೆ ಆಗಿದೆ. ರಾಜಸ್ಥಾನದ ಸಿಕರ್​ನಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 14ನೇ ಕಂತಿನ ಹಣ ಬಿಡುಗಡೆ ಆಗಿರುವುದನ್ನು ಘೋಷಿಸಿದ್ದಾರೆ. 9 ಕೋಟಿಗೂ ಹೆಚ್ಚು ಮಂದಿ ರೈತರ ಖಾತೆಗಳಿಗೆ ಇಂದು ತಲಾ 2,000 ರೂ ಹಣ ವರ್ಗಾವಣೆ ಆಗುತ್ತಿದೆ. 14ನೇ ಕಂತಿನ ಹಣಕ್ಕೆ ಕೇಂದ್ರ ಸರ್ಕಾರಕ್ಕೆ 20,000 ಕೋಟಿಗೂ ಹೆಚ್ಚು ವ್ಯಯವಾಗಿದೆ. ಪ್ರಧಾನಿ ನರೇಂದ್ರ ಮೋದಿ 2023ರ ಫೆಬ್ರುವರಿ 27ರಂದು ಬೆಳಗಾವಿಯ ಸಮಾವೇಶವೊಂದರಲ್ಲಿ 13ನೇ ಕಂತಿನ ಹಣ ಬಿಡುಗಡೆ ಮಾಡಿದ್ದರು.

*ಏನಿದು ಪಿಎಂ ಕಿಸಾನ್ ಯೋಜನೆ...?*

2019ರ ಫೆಬ್ರುವರಿ 24ರಂದು ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸ್ಕೀಮ್ ಆರಂಭಿಸಿತು. ಆರಂಭದಲ್ಲಿ ಇದು 5 ಎಕರೆಯೊಳಗಿನ ಜಮೀನು ಹೊಂದಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗಲೆಂದು ಧನಸಹಾಯವಾಗಿ ಯೋಜನೆ ಆರಂಭಿಸಲಾಯಿತು. ಬಳಿಕ ಎಲ್ಲಾ ರೈತರಿಗೂ ಯೋಜನೆಯನ್ನು ವಿಸ್ತರಿಸಲಾಗಿದೆ.

ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ವರ್ಷಕ್ಕೆ 3 ಕಂತುಗಳಲ್ಲಿ ತಲಾ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತದೆ. ಡಿಸೆಂಬರ್​ನಿಂದ ಮಾರ್ಚ್, ಏಪ್ರಿಲ್​ನಿಂದ ಜುಲೈ, ಹಾಗು ಆಗಸ್ಟ್​ನಿಂದ ನವೆಂಬರ್ ಹೀಗೆ ಪ್ರತೀ 4 ತಿಂಗಳ ಅವಧಿಯಲ್ಲಿ ಸರ್ಕಾರ 2,000 ರೂ ನೀಡುತ್ತದೆ. 2018ರ ಡಿಸೆಂಬರ್​ನಿಂದ ಶುರುವಾಗಿ ಈವರೆಗೆ 14 ಕಂತುಗಳನ್ನು ರೈತರಿಗೆ ನೀಡಲಾಗಿದೆ.

ಕರ್ನಾಟಕದ ರೈತರಿಗೆ ರಾಜ್ಯ ಸರ್ಕಾರ ಇನ್ನೆರಡು ಹೆಚ್ಚುವರಿ ಕಂತುಗಳನ್ನು ಸೇರಿಸಿಕೊಡುತ್ತಿತ್ತು. ಈಗಿನ ರಾಜ್ಯ ಸರ್ಕಾರ ಈ ಸೌಲಭ್ಯ ಮುಂದುವರಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮೂಲಗಳ ಪ್ರಕಾರ ರಾಜ್ಯ ಸರ್ಕಾರ ಪಿಎಂ ಕಿಸಾನ್ ಯೋಜನೆಯಲ್ಲಿ ಹೆಚ್ಚುವರಿ ಕಂತುಗಳನ್ನು ನೀಡುವ ಸಾಧ್ಯತೆ ಇಲ್ಲ.


*ಪಿಎಂ ಕಿಸಾನ್ ಸ್ಕೀಮ್​ನ ಫಲಾನುಭವಿಗಳ ಪಟ್ಟಿ ವೀಕ್ಷಿಸಿ.*

*ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ:* pmkisan.gov.in

ಅಲ್ಲಿ ಫಾರ್ಮರ್ಸ್ ಕಾರ್ನರ್​ನಲ್ಲಿ ಬೆನಿಫಿಷಿಯರಿ ಲಿಸ್ಟ್ ಕ್ಲಿಕ್ ಮಾಡಿ

ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಊರು ಇತ್ಯಾದಿ ಆಯ್ಕೆ ಮಾಡಿ

ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ.


*ಯೋಜನೆಯ ಆರಂಭದಿಂದ ಈವರೆಗೂ ಪಿಎಂ ಕಿಸಾನ್ ಯೋಜನೆಯ ಹಣ ಪಡೆದ ರೈತರ ಸಂಖ್ಯೆ*

2018-19, ಡಿಸೆಂಬರ್​ನಿಂದ ಮಾರ್ಚ್: 3,16,14,880

2019-20, ಏಪ್ರಿಲ್​ನಿಂದ ಜುಲೈ: 6,63,58,256

2019-20, ಆಗಸ್ಟ್​ನಿಂದ ನವೆಂಬರ್: 8,76,32,318

2019-20, ಡಿಸೆಂಬರ್​ನಿಂದ ಮಾರ್ಚ್: 8,96,95,039

2020-21, ಏಪ್ರಿಲ್​ನಿಂದ ಜುಲೈ: 10,49,40,402

2020-21, ಆಗಸ್ಟ್​ನಿಂದ ನವೆಂಬರ್: 10,23,47,795

2020-21, ಡಿಸೆಂಬರ್​ನಿಂದ ಮಾರ್ಚ್: 10,23,59,684

2021-22, ಏಪ್ರಿಲ್​ನಿಂದ ಜುಲೈ: 11,16,87,398

2021-22, ಆಗಸ್ಟ್​ನಿಂದ ನವೆಂಬರ್: 11,19,47,339

2021-22, ಡಿಸೆಂಬರ್​ನಿಂದ ಮಾರ್ಚ್: 11,16,08,563

2022-23, ಏಪ್ರಿಲ್​ನಿಂದ ಜುಲೈ: 11,27,80,670

2022-23, ಆಗಸ್ಟ್​ನಿಂದ ನವೆಂಬರ್: 9,00,52,829

2022-23, ಡಿಸೆಂಬರ್​ನಿಂದ ಮಾರ್ಚ್: 8,80,28,357

2023-24, ಏಪ್ರಿಲ್​ನಿಂದ ಜುಲೈ:

ಕರ್ನಾಟಕದಲ್ಲಿ 58 ಲಕ್ಷಕ್ಕೂ ಹೆಚ್ಚು ರೈತರು ಯೋಜನೆಗೆ ನೊಂದಾಯಿಸಿದ್ದಾರೆ. ಕಳೆದ ಬಾರಿ 13ನೇ ಕಂತಿನಲ್ಲಿ ರಾಜ್ಯದ ಶೇ. 88ರಷ್ಟು ಫಲಾನುಭವಿಗಳಿಗೆ ಹಣ ಸಿಕ್ಕಿದೆ. ಇಕೆವೈಸಿ ಮಾಡದ ಇತರರಿಗೆ ಹಣ ಸಿಕ್ಕಿಲ್ಲ. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಫಲಾನುಭವಿಗಳು 13ನೇ ಕಂತಿನ ಹಣ ಪಡೆದ ಸಂಖ್ಯೆ ಶೇ. 50ಕ್ಕಿಂತಲೂ ಕಡಿಮೆ ಇದೆ. ಶೇ. 88ರಷ್ಟು ಮಂದಿ ಹಣ ಪಡೆದ ಕರ್ನಾಟಕವೇ ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">