ಸುತ್ತಮುತ್ತಲಿನ ವಾತಾವರಣ ಶುಚಿಯಾಗಿಟ್ಟುಕೊಳ್ಳೋಣ ಮೋದಿನ ಬೀ.
ಸಿಂಧನೂರು ತಾಲೂಕಿನ 7ನೇ ಮೈಲಿ ಕ್ಯಾಂಪ್ ನ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಯಿಂದ ಡೆಂಗ್ಯೂ ವಿರೋದಿ ಮಾಸಾಚರಣೆ ಹಮ್ಮಿಕೊಳ್ಳಲಾಯಿತು.
ನಂತರ ಮಾತನಾಡಿದ ಆರೋಗ್ಯ ಸಂರಕ್ಷಣಾಧಿಕಾರಿ ಮೋದಿನಬೀ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತುಕೊಂಡು ತಂಪಾದ ವಾತಾವರಣದಲ್ಲಿ ಸೊಳ್ಳೆಗಳು ಉತ್ಪಾನೆಯಾಗಿ ಡೆಂಗ್ಯೂ, ಮಲೇರಿಯಾದಂತಹ ರೋಗಾಣುಗಳು ಹರಡುತ್ತವೆ. ಒಬ್ಬರಿಂದೊಬ್ಬರಿಗೆ ಬರುವಂತಹ ಸಾಧ್ಯತೆ ಇರುತ್ತದೆ ಆದ್ದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುಬೇಕು ಮತ್ತು ಗರ್ಭಿಣಿ ಬಾಣಂತಿಯರು ಆಹಾರದ ಬಗ್ಗೆ,ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು, ಅಂಗನವಾಡಿ ಕೇಂದ್ರದಲ್ಲಿ ಬಂದು ಊಟ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳು ಸುರೇಶ, ಪಂಚಾಯತಿ ಸದಸ್ಯ ಕೆ.ಅಪ್ಪಾರಾವ್,ಸೋಮನಾಥ ಎಚ್, ನಿಂಗಪ್ಪ ನರೇಗಡದ, ಹನುಮಂತ,ಆಶಾಕಾರ್ಯಕರ್ತೆರೇಣುಕಾ,ಭಾಗ್ಯಮ್ಮ, ಅಂಗನವಾಡಿ ಕಾರ್ಯಕರ್ತೆ ಶಾರದಾ,ನಾಗರತ್ನ,ಜಹೀರಾ ಉಪಸ್ಥಿತರಿದ್ದರು.
ರಿಪೋರ್ಟರ್ : ಮೆಹಬೂಬ ಮೊಮೀನ.
