ಯಲಬುರ್ಗಾ ಪಟ್ಟಣಕ್ಕೆ ಎ ಪಿ ಎಂ ಸಿ ಉಪ ಮಾರುಕಟ್ಟೆ,ಕೃಷಿ ಮಾರಕಟ್ಟೆ ಸಚಿವರಿಂದ ಮಂಜೂರಾತಿ ಆದೇಶ.
ಕುಕನೂರು : ಯಲಬುರ್ಗಾ ತಾಲೂಕಿನಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಪಿಎಂಸಿ ಉಪ ಮಾರುಕಟ್ಟೆ ಪ್ರಾರಂಭಿಸಲು ಶಾಸಕ ಬಸವರಾಜ್ ರಾಯರಡ್ಡಿ ಅವರು ಬರೆದ ಪತ್ರಕ್ಕೆ ಕೃಷಿ ಮಾರುಕಟ್ಟೆ ಸಚಿವರು ಸ್ಪಂದಿಸಿದ್ದು ಯಲಬುರ್ಗಾ ಪಟ್ಟಣದಲ್ಲಿ ಎಪಿಎಂಸಿ ಉಪ ಮಾರುಕಟ್ಟೆ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರಿಗೆ ಅದೇಶಿಸಿದ್ದಾರೆ.
ಯಲಬುರ್ಗಾ ತಾಲೂಕಿನಲ್ಲಿ ಹೆಚ್ಚುವರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೇಂದ್ರ ಪ್ರಾರಂಭಿಸಬೇಕೆಂನ್ನುವ ಕೂಗು ತುಂಬಾ ದಿನದಿಂದ ಕೇಳಿ ಬರುತ್ತಿತ್ತು,
ಶಾಸಕರಾದ ಬಸವರಾಜ್ ರಾಯರಡ್ಡಿ ಅವರು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಎಸ್ ಪಾಟೀಲ್ ಅವರಿಗೆ ಜುಲೈ 13 ರಂದು ಪತ್ರ ಬರೆದು ಯಲಬುರ್ಗಾ ತಾಲೂಕಿನಲ್ಲಿ ಹೆಚ್ಚುವರಿ ಎಪಿಎಂಸಿ ಮಾರುಕಟ್ಟೆ ಉಪ ಕೇಂದ್ರ ಸ್ಥಾಪಿಸುವಂತೆ ಕೇಳಿಕೊಂಡಿದ್ದರು.
ಇದಕ್ಕೆ ಸ್ಪಂದಿಸಿರುವ ಕೃಷಿ ಮಾರುಕಟ್ಟೆ ಸಚಿವರು ಯಲಬುರ್ಗಾ ಪಟ್ಟಣದಲ್ಲಿ ಉಪ ಮಾರುಕಟ್ಟೆ ಕೇಂದ್ರ ವನ್ನು ಪ್ರಾರಂಭಿಸಲು ಅದೇಶಿಸಿ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರಿಗೆ ತಿಳಿಸಿದ್ದಾರೆ. ಹೀಗಾಗಿ ಯಲಬುರ್ಗಾ ತಾಲೂಕಿನ ಬಹು ದಿನದ ಎಪಿಎಂಸಿ ಕನಸು ಶೀಘ್ರದಲ್ಲಿ ನನಸಾಗುತ್ತಿದೆ.
ಸದ್ಯ ಕುಕನೂರು ಪಟ್ಟಣದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ, ಬೇವೂರು ಹೋಬಳಿ ರೈತರಿಗೆ ತುಂಬಾ ದೂರವೆನಿಸಿತ್ತು , ರೈತರು ತಮ್ಮ ಉತ್ಪನ್ನಗಳನ್ನು ಕುಕನೂರು ಕೇಂದ್ರ ಸ್ಥಾನದಲ್ಲಿರುವ ಎಪಿಎಂಸಿಗೆ ತಂದು ಮಾರಲು ಸಾಗಾಣೆ ವೆಚ್ಚ ದುಬಾರಿ ಎನಿಸುತ್ತಿತ್ತು, ತಾಲೂಕಿನ ಗಡಿ ಭಾಗದ ಹಳ್ಳಿಯ ರೈತರಿಗೆ ತುಂಬಾ ಅನಾನುಕೂಲವಾಗಿತ್ತು.
ಸದ್ಯ ಯಲಬುರ್ಗಾ ತಾಲೂಕಿನಲ್ಲಿ ನೂತನ ಉಪ ಮಾರುಕಟ್ಟೆ ಕೇಂದ್ರ ಪ್ರಾರಂಭವಾಗುತ್ತಿದ್ದೂ ಇದರಿಂದ ಆ ತಾಲೂಕಿನ ರೈತರಿಗೆ ಉಪಯುಕ್ತ, ಅನುಕೂಲವಾಗಲಿದೆ.
ವರದಿ : ಈರಯ್ಯ ಕುರ್ತಕೋಟಿ
