500 ಸಸಿಗಳನ್ನು ನೆಡುವ ಮೂಲಕ ಪರಿಸರ ರಾಜ್ಯ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಹುಟ್ಟು ಹಬ್ಬ ಆಚರಣೆ: ಚನ್ನಪ್ಪ ಕೆ.ಹೊಸಹಳ್ಳಿ


500 ಸಸಿಗಳನ್ನು ನೆಡುವ ಮೂಲಕ ಪರಿಸರ ರಾಜ್ಯ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಹುಟ್ಟು ಹಬ್ಬ ಆಚರಣೆ: ಚನ್ನಪ್ಪ ಕೆ.ಹೊಸಹಳ್ಳಿ

ಸಿಂಧನೂರಿನ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ವನಸಿರಿ ಫೌಂಡೇಶನ್ ಜಿಲ್ಲಾ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ಕೆ ಹೊಸಹಳ್ಳಿ ಅವರು ಮಾತನಾಡಿ ಇದೇ ದಿನಾಂಕ 08-08-2023ರಂದು ಸಿಂಧನೂರು ತಾಲೂಕಿನ ಜವಳಗೇರ ಹತ್ತಿರದ ಕೊಪ್ಪಳ ಕ್ಯಾಂಪ್ ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವನಸಿರಿ ಫೌಂಡೇಶನ್(ರಿ) ರಾಜ್ಯ ಘಟಕದ ವತಿಯಿಂದ ಪರಿಸರ ಆರಾಧಕರು,ಶಿಕ್ಷಣ ಪ್ರೇಮಿಗಳು,ಸಾಮಾಜಿಕ ಕಳಕಳಿಯ ನಾಯಕರು, ಕರ್ನಾಟಕ ಸರ್ಕಾರದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ 35 ನೇ ಹುಟ್ಟು ಹಬ್ಬದ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ.ಹುಟ್ಟು ಹಬ್ಬದ ಅಂಗವಾಗಿ 500 ಸಸಿಗಳನ್ನು ನೆಡುವ ಕಾರ್ಯಕ್ರಮ ಹಾಗೂ ವಿಶೇಷ ವ್ಯಕ್ತಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮಕ್ಕೆ ಜಿಲ್ಲೆಯ ರಾಜಕೀಯ ಮುಖಂಡರು, ಅಧಿಕಾರಿ ವರ್ಗದವರು, ಅಮರೇಗೌಡ ಮಲ್ಲಾಪೂರ ಅಭಿಮಾನಿಗಳು,ಪರಿಸರ ಪ್ರೇಮಿಗಳು,ಶಿಕ್ಷಣ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಿಂಧನೂರಿನ ಎಲ್ಲ ಪರಿಸರ ಪ್ರೇಮಿಗಳು,ವನಸಿರಿ ಫೌಂಡೇಶನ್ ಸದಸ್ಯರುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಪ್ಪದೇ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">