5ನೇ ವಾರ್ಷಿಕೋತ್ಸವಕ್ಕೆ ಪಾದಾರ್ಪಣೆ ಮಾಡಿದ ಅಭಿನಂದನ್ ಶಿಕ್ಷಣ ಸಂಸ್ಥೆ
ಮಸ್ತಿಯ ಕೀರ್ತಿಯನ್ನು ಹೆಚ್ಚಿಸಿದಂತಹ ಅಭಿನಂದನ್ ಸಂಸ್ಥೆಯ 5ನೇ ವಾರ್ಷಿಕೋತ್ಸವ ಹಾಗೂ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ರಾಮಣ್ಣ ಹಂಪರಗುಂದಿ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದಂತಹ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಸಾಧಕರಿಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದಂತಹ ಸಾಧನೆಯನ್ನು ಗುರುತಿಸಿ ಕ್ಷೇತ್ರವಾರು ಅಭಿನಂದನ್ ಸೇವಾ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಉದ್ಯಮ ಕ್ಷೇತ್ರದಲ್ಲಿ ಮಸ್ಕಿಯ ಪರಮೇಶಪ್ಪ ಸಾನಬಾಳ, ಪೋಲಿಸ್ ಇಲಾಖೆ ಕ್ಷೇತ್ರದಲ್ಲಿ ಮಸ್ಕಿಯ ಪೊಲೀಸ್ ಠಾಣೆಯ ಬಿಮದಾಸ್ ಪಿಎಸ್ಐ, ಗಾಯನ ಕ್ಷೇತ್ರದಲ್ಲಿ ಸಿಂಧನೂರಿನ ಬಸವರಾಜ್ ಗ, ಸಮಾಜ ಸೇವೆ ಕ್ಷೇತ್ರದಲ್ಲಿ ಸಿಂಧನೂರಿನ ಉಸ್ಮಾನ್ ಪಾಷಾ ಮಕಾಂದರ್, ಪೌರ ಕಾರ್ಮಿಕರ ಕ್ಷೇತ್ರದಲ್ಲಿ ಮಸ್ಕಿಯ ಭೀಮೇಶ್, ಶಿಕ್ಷಣ ಕ್ಷೇತ್ರದಲ್ಲಿ ಯಮಕನಮರಡಿಯ ನಿಜಲಿಂಗಯ್ಯ ಹಾಲದೇವರ ಮಠ, ಆಶಾ ಕಾರ್ಯಕರ್ತರ ಕ್ಷೇತ್ರದಲ್ಲಿ ಮಸ್ಕಿಯ ಆರ್ ನಗೋಮಿ, ಕಲಾ ಕ್ಷೇತ್ರದಲ್ಲಿ ಕಣ್ಣೂರಿನ ಬಸಣ್ಣ ವಿಶ್ವಕರ್ಮ, ಜಾನಪದ ಕ್ಷೇತ್ರದಲ್ಲಿ ಹಸಮಕಲ್ ನ ಜಂಬಣ್ಣ, ಕೃಷಿ ಕ್ಷೇತ್ರದಲ್ಲಿ ಸುಂಕನೂರಿನ ಸುನಿಲ್ ಕುಮಾರ್, ಕ್ರೀಡಾ ಕ್ಷೇತ್ರದಲ್ಲಿ ಮಸ್ಕಿಯ ವಿದ್ಯಾರ್ಥಿನಿ ತಮನ್ನಾ, ಆರೋಗ್ಯ ಕ್ಷೇತ್ರದಲ್ಲಿ ಮಸ್ಕಿಯ ಶಿವುಬಾಯಿ ಪಾಟೀಲ್, ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಮಟ್ಟೂರಿನ ಲಕ್ಷ್ಮಿ ಗಂಡ ಕೆಂಚಪ್ಪ ಅವರುಗಳಿಗೆ "ಅಭಿನಂದನ್ ಸೇವಾ ರತ್ನ" ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಅಭಿನಂದನ್ ಸಂಸ್ಥೆಯ ಸ್ವಚ್ಛತಾ ಅಭಿಯಾನ ಆಗಿರುವ ಸಂಡೇ ಫಾರ್ ಸೋಶಿಯಲ್ ವರ್ಕ್ ಫಲಾನುಭವಿ ಶಾಲೆಗಳಲ್ಲಿ ಈ ಅಭಿಯಾನವನ್ನು ಮುಂದುವರಿಸಿ ರೂಡಿಸಿಕೊಂಡಂತಹ ಸರಕಾರಿ ಪ್ರೌಢಶಾಲೆ ಉಟಕನೂರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೇಡರ ಕಾರಲಕುಂಟಿ, ಕೆಪಿಎಸ್ ಶಾಲೆ ಪಿಡಬ್ಲ್ಯೂಡಿ ಮಸ್ಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡದೂರು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲಗುಡ್ಡ ಈ 5 ಅತ್ಯುತ್ತಮ ಶಾಲೆಗಳಿಗೆ "ಸ್ವಸ್ಥ ಪರಿಸರ ಶಾಲೆ" ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಪ್ರಶಸ್ತಿ ಪ್ರಧಾನದ ನಂತರ ವರರುದ್ರಮುನಿ ಶಿವಾಚಾರ್ಯರು ಮಾತನಾಡಿ ಈಗಾಗಲೇ ಹಲವಾರು ಸೇವೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ನಮ್ಮ ಮಸ್ಕಿಗೆ ಕೀರ್ತಿಯನ್ನು ರಾಜ್ಯದಾದ್ಯಂತ ಸ್ಥಾಪಿಸಿರುವುದು ಒಂದು ಶ್ಲಾಘನೀಯ ಕಾರ್ಯವಾಗಿದೆ. ಈ ಸಂಸ್ಥೆಯ ಕೀರ್ತಿಯು ಇನ್ನಷ್ಟು ಬೆಳೆಯಲಿ ಎಂದು ಆಶೀರ್ವದಿಸಿದರು.
ನಂತರ ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಶಿವಪ್ರಸಾದ್ ಕ್ಯಾತ್ನಟ್ಟಿ ಟಿಯವರು ಮಾತನಾಡಿ ಅಭಿನಂದನ್ ಸಂಸ್ಥೆ ಈಗಾಗಲೇ ಹಲವಾರು ಸಾಮಾಜಿಕ, ಶೈಕ್ಷಣಿಕ, ಸ್ವಚ್ಛತೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ಹಲವಾರು ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದು ಹೊಸ ಹೊಸ ಆಯಾಮಗಳನ್ನು ಸೃಷ್ಟಿಸುವ ಮೂಲಕ ಕಾರ್ಯನಿರ್ವಹಿಸುತ್ತಿದೆ. ಅವುಗಳಲ್ಲಿ ಅಭಿನಂದನ್ ಸ್ಪೂರ್ತಿಧಾಮ, ಡಿಜಿಟಲ್ ಕರ್ನಾಟಕ ಕ್ವಿಜ್, ಸಂಡೇ ಫಾರ್ ಸೋಶಿಯಲ್ ವರ್ಕ್ ಹಾಗೂ ಇನ್ನು ಹಲವಾರು ಕಾರ್ಯಕ್ರಮಗಳ ಸಾಲಿಗೆ ಇಂದು ಹಮ್ಮಿಕೊಂಡಿರುವ ಈ ಪ್ರಶಸ್ತಿ ಪ್ರಧಾನ ಸಮಾರಂಭವು ಒಂದಾಗಿದೆ. ನಮ್ಮ ಈ ಸಂಸ್ಥೆಯ ಇಷ್ಟು ವರ್ಷಗಳ ಯಶಸ್ಸಿಗೆ ಕಾರಣಿಕರ್ತರಾದಂತಹ ಸರ್ವ ನಾಗರಿಕರಿಗೂ ಸಂಸ್ಥೆಯ ಕಡೆಯಿಂದ ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯರಾದ ಮಲ್ಲಯ್ಯ ಪಟ್ಟದೊಡೆಯರು, ಡಾ ಶಿವಶರಣಪ್ಪ ಇತ್ಲಿ, ಶಿವಶಂಕರಪ್ಪ ಹಳ್ಳಿ, ಯಲ್ಲಪ್ಪ ಮಾಸ್ಟರ್, ಅಮರಪ್ಪ ಗುಡದೂರು, ಶಂಕರೇಗೌಡ ಅಭಿನಂದನ್ ಸಂಸ್ಧೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಹಾಗೂ ಅಭಿನಂದನ್ ಸಂಸ್ಧೆಯ ಸದಸ್ಯರು ಹಾಗೂ ನೂರಾರು ಯುವಕರು ಉಪಸ್ಥಿತರಿದ್ದರು
Tags
ಟಾಪ್ ನ್ಯೂಸ್

