Hubli : ಮಂಗಳಮುಖಿ ಸಾಧಕರಿಗೆ ಸನ್ಮಾನ


ಹುಬ್ಬಳ್ಳಿ: ಪ್ರತಿಭೆ ಯಾರ ಸೊತ್ತು ಅಲ್ಲಾ ಪ್ರತಿಯೊಬ್ಬರಲ್ಲೋ ಒಂದೆಲ್ಲಾ ಒಂದು ಅತ್ಯಂತ ಬಹುಮುಖ ಅಸಾಧಾರಣ ಪ್ರತಿಭೆ ಇರುತ್ತದೆ.

ನಮ್ಮಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಲ್ಲಿ ಸಾಕಷ್ಟು ಪ್ರತಿಭಾವಂ ತರಿದ್ದಾರೆ. ಅವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದು ಉದ್ಯಮಿ ವಿಜಯ ಸೈಗಲ್ ಹೇಳಿದರು.

ನವ್ಯಶ್ರೀ ಕಲಾ ಚೇತನ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೂರನೇ ಮುಖ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲಿಂಗತ್ವ ಅಲ್ಪಸಂಖ್ಯಾತರು ಸ್ವಉದ್ಯೋಗ, ಸಮಾಜಸೇವೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಸಮಾಜದಲ್ಲಿ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸರ್ಕಾರದ ಎಲ್ಲ ಸೌಲಭ್ಯಗಳು ಅವರಿಗೆ ಸಿಗಬೇಕು’ ಎಂದರು.

ಬಿಜೆಪಿ ಮುಖಂಡ ಸಂತೋಷ ವರ್ಣೇಕರ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರಲ್ಲಿರುವ ಕಲಾವಿದರನ್ನು ಗುರುತಿಸಲು ನವ್ಯಶ್ರೀ ಕಲಾ ಚೇತನ ಸಂಸ್ಥೆಯು ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 15 ಲಿಂಗತ್ವ ಅಲ್ಪಸಂಖ್ಯಾತ ಸಾಧಕರಿಗೆ ‘ಮೂರನೇ ಮುಖ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೃತ್ಯ, ಸಂಗೀತ ಹಾಗೂ ಏಕಪಾತ್ರಾಭಿನಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳನ್ನು ನಡೆಸಿಕೊಟ್ಟರು.

ಸಂಸ್ಥೆಯ ಅಧ್ಯಕ್ಷೆ ಸಂಗೀತಾ ದೇವದಾಸ, ಉಪಾಧ್ಯಕ್ಷೆ ಸ್ಮೀತಾ ಬಾಳಕೆ, ಸಮಾಜ ಸೇವಕ ರಮೇಶ ಮಹಾದೇವಪ್ಪನವರ, ಉಪನಗರ ಪೊಲೀಸ್ ಠಾಣೆಯ ಪಿಎಸ್ಐ ಕವಿತಾ ಎಸ್., ಶಿವಪ್ರಸಾದ ದೇವದಾಸ ಇದ್ದರು.

ವರದಿ : ಬಸವರಾಜ ಕಬಡ್ಡಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">