Gangavathi : ತರಬೇತಿಯಲ್ಲಿ ಅಗತ್ಯ ಮಾಹಿತಿ ಪಡೆಯಿರಿ

 

ತರಬೇತಿಯಲ್ಲಿ ಅಗತ್ಯ ಮಾಹಿತಿ ಪಡೆಯಿರಿ

ಮಹಿಳಾ ಮತ್ತು ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಗಂಗಪ್ಪ ಹೇಳಿಕೆ

ಗಂಗಾವತಿ ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಶಿಶು ಪಾಲನಾ ಕೇಂದ್ರದ ಮಹಿಳಾ ಕೇರ್ ಟೇಕರ್ಸ್ ಅವರಿಗೆ ಆಯೋಜಿಸಿರುವ ಎರಡನೇ ದಿನದ ತರಬೇತಿ ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಗಂಗಪ್ಪ ಅವರು ಭಾಗವಹಿಸಿ ಗುರುವಾರ ಅಗತ್ಯ ಮಾಹಿತಿ ನೀಡಿದರು.

ಮಹಿಳಾ ಮತ್ತು ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಗಂಗಪ್ಪ ಅವರು ಮಾತನಾಡಿ, ಹಳ್ಳಿಗಳಲ್ಲಿ ಅದೆಷ್ಟೊ ಬಡ ಕುಟುಂಬಗಳು ಮಕ್ಕಳ ಆರೈಕೆ ಮಾಡಲು ಕಷ್ಟ ಪಡುತ್ತಿವೆ. ಕೆಲಸಕ್ಕೆ ಹೋಗಬೇಕಾದರೆ ಬೇರೆಯವರ ಮನೆಯಲ್ಲಿ ಮಕ್ಕಳನ್ನು ಬಿಟ್ಟುಹೋಗುತ್ತಿದ್ದಾರೆ. ಇಂಥ ಸಮಸ್ಯೆ ತಪ್ಪಿಸಲು ರಾಜ್ಯ ಸರಕಾರ ಶಿಶು ಪಾಲನಾ ಕೇಂದ್ರ ತೆರೆಯುತ್ತಿದ್ದಾರೆ. ಆರೈಕೆದಾರರು ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳ ಲಾಲನೆ-ಪಾಲನೆ ತುಂಬಾ ಮುಖ್ಯವಾಗಿರುತ್ತದೆ ಎಂದರು.

ತಾಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಅವರು ಆರೈಕೆದಾರರ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಕನಕಗಿರಿ ಸಿಡಿಪಿಓ ವಿರೂಪಾಕ್ಷಿ,  ಮೇಲ್ವಿಚಾರಕರು ಮತ್ತು ಸಂಪನ್ಮೂಲ ವ್ಯಕ್ತಿಗಳಾದ ವಿದ್ಯಾವತಿ, ಸುಕನ್ಯಾ, ಮೂರು ತಾಲೂಕುಗಳ ಐಇಸಿ ಸಂಯೋಜಕರಾದ ಶಿವಕುಮಾರ ಕೆ, ಸೋಮನಾಥ ನಾಯಕ, ಬಾಳಪ್ಪ ತಾಳಕೇರಿ ಇದ್ದರು.

ವರದಿ : ಚನ್ನಕೇಶವ


Previous Post Next Post

Contact Form

f="https://unpkg.com/video.js/dist/video-js.css" rel="stylesheet">