ಗೃಹೋಪಯೋಗಿ ವಸ್ತುಗಳ ಪ್ರದರ್ಶನ : ಮಾರಾಟ
ಕೊಪ್ಪಳ,: ನಗರದ ಮಾತಾ ಲಾಡ್ಜ್ ಎದುರಿಗಿರುವ ಎಂ.ಪಿ. ಪ್ಯಾಲೇಸ್ನಲ್ಲಿ ಎಕ್ಸಿಬಿಷನ್ ಇಂಡಿಯಾ 2023" ಗೃಹ ಉಪಯೋಗಿ ವಸ್ತುಗಳು ಹಾಗೂ ಚಿಕ್ಕ ಮಕ್ಕಳಿಗೆ ಅಂಬ್ರೆಲಾ ಸ್ಟ್ರೀಟ್, ರೋಬೋಟಿಕ್ ಎನಿಮಲ್ಸ್ ರೂಪಕದ ಆಟಿಕೆಗಳು ಸೇರಿದಂತೆ ಇತರೆ ವಸ್ತುಗಳ ಪ್ರದರ್ಶನ ಮತ್ತು ವ್ಯಾಪಾರವು ನಡೆಯಲಿದೆ ಎಂದು ಗೃಹಶೋಭೆ ಸಂಸ್ಥೆಯ ಸೈಮನ್ ಎಕ್ಸಿಬಿಟರ್ಸ್ ನಿರ್ದೇಶಕ ಎಂ.ಎಸ್. ನಾಗಚಂದ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯಾದ್ಯಂತ ಜನರ ವಿಶ್ವಾಸವನ್ನು ಗಳಿಸುವಲ್ಲಿ ಸಂಸ್ಥೆ ಹೆಸರು ಮಾಡಿದೆ. ಪ್ರತಿ ವರ್ಷವು ಒಂದೇ ಸೂರಿನಡಿ ಅತ್ಯಾಕರ್ಷಕ ಗುಣಮಟ್ಟವುಳ್ಳ ಸಾಮಗ್ರಿಗಳ ಉತ್ಪಾದನೆ ಹೆಚ್ಚಿಸುವಲ್ಲಿ ಮುನ್ನಲೆಯನ್ನು ಹೊಂದಿದೆ ಎಂದರು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದರ್ಶನ ಮತ್ತು ವಸ್ತುಗಳ ಖರೀದಿಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಸ್ವಾತಿ ಗ್ರೂಪ್ ಆಫ್ ನಿರ್ದೇಶಕ ವೆಂಕಟ ಗಿರೀಶ್, ಗಣೇಶ ರೆಡ್ಡಿ ಇದ್ದರು.
ವರದಿ : ಶಿವಕುಮಾರ್ ಹಿರೇಮಠ
