ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಮೈತ್ರಿ ಅದ್ಯಕ್ಷೆ ಸ್ಥಾನಕ್ಕೆ ಅವಿರೋಧ ಆಯ್ಕೆಯಾದ ವರಲಕ್ಷ್ಮಿ, ಮತ್ತು ಉಪಾದ್ಯಕ್ಷೆ ಸ್ಥಾನಕ್ಕೆ ಪಲ್ಲವಿ ಭರ್ಜರಿ ಗೆಲವು
ಕೃಷ್ಣರಾಜಪೇಟೆ ತಾಲ್ಲೂಕಿನ ಮಂದಗೆರೆ ಗ್ರಾಮ ಪಂಚಾಯತಿಯ ಎರಡನೇ ಅವದಿಗೆ ಅದ್ಯಕ್ಷ ಮತ್ತು ಉಪಾದ್ಯಕ್ಷರ ಚುನಾವಣೆ ನಿಗದಿಯಾಗಿತ್ತು.
ಅಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಮೈತ್ರಿ ಅಭ್ಯರ್ಥಿಯಾಗಿ ವರಲಕ್ಷ್ಮಿ, ಹೊರತು ಪಡಿಸಿ ಮತ್ಯಾರು ನಾಮಪತ್ರ ಸಲ್ಲಿಕೆ ಮಾಡದ ಕಾರಣ ಅದ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ್ರು..
ಉಪಾದ್ಯಕ್ಷರ ಸ್ಥಾನಕ್ಕೆ ಪಲ್ಲಿವಿ ಮತ್ತು ಕಾರ್ತಿಕ್ ಇಬ್ಬರು ಸ್ಪರ್ಧಿಸಿದ್ರು ಪಲ್ಲವಿ ರವರು 11 ಮತಗಳನ್ನು ಪಡೆದುಕೊಡು ಗೆಲುವಿನ ನಗೆ ಬೀರಿದ್ರು. ಕಾರ್ತಿಕ್ ರವರು 10 ಮತಗಳನ್ನು ಪಡೆದುಕೊಂಡು ಸೋಲಪ್ಪಿಕೊಂಡ್ರು..
ಎಲ್ಲಾ ಸದಸ್ಯರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಕಿಕ್ಕೇರಿ ಸುರೇಶ್ ರವರ ನಿವಾಸಕ್ಕೆ ಆಗಮಿಸಿ ಕೃತಜ್ಞತೆ ತಿಳಿಸಿದ್ರು..ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಕಿಕ್ಕೇರಿ ಸುರೇಶ್ ರವರು ನೂತನ ಅದ್ಯಕ್ಷರಾದ ವರಲಕ್ಷ್ಮಿ, ಉಪಾದ್ಯಕ್ಷರಾದ ಪಲ್ಲವಿ ರವರಿಗೆ ಸನ್ಮಾನಿಸಿ ಮಾತನಾಡಿ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಗ್ರಾಮ ಪಂಚಾಯತಿ ಸೇರಿದ ಗ್ರಾಮಗಳಿಗೆ ಕುಡಿಯ ನೀರು ಸೇರಿದಂತೆ ಇನ್ನಿತರ ಕೆಲಸಗಳಿಗೆ ಹೆಚ್ಚು ಒತ್ತು ನೀಡಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿ ಸಿಹಿ ತಿನ್ನಿಸಿ ಶುಭ ಹಾರೈಸಿದ್ರು..
ನೂತನ ಅದ್ಯಕ್ಷರಾದ ವರಲಕ್ಷ್ಮಿ, ಉಪಾದ್ಯಕ್ಷರಾದ ಪಲ್ಲವಿ, ಸದಸ್ಯರಾದ ನಿಂಗರಾಜು, ಮಂಜೇಗೌಡ, ಜಗದೀಶ್, ಕೃಷ್ಣಯ್ಯ, ನಿಂಗಮ್ಮ, ಕಾಮಾಕ್ಷಮ್ಮ, ಮಂಗಳ, ಕಾವೇರಿ, ರೇಖಾ, ಮುಖಂಡರಾದ ಜಾನೇಗೌಡ್ರು, ಲೋಕೇಶ್, ಚಿಕ್ಕಮಂದರೆ ರಮೇಶ್ ಸೇರಿದಂತೆ ಮತ್ತಿತ್ತರರು ಇದ್ದರು ..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

