ಕುರುಗೋಡು :
ಸಾಮಾನ್ಯರ ಬದುಕಿಗೆ ಸ್ಪಂಧಿಸುವ ಹಾಗೂ ಸಮಾಜದ ಅಂಕುಡೊಂಕು ತಿದ್ದುವ ಪತ್ರಕರ್ತರು ಅನೇಕ ತೊಂದರೆಯಲ್ಲಿದ್ದಾರೆ. ಸರಕಾರದಿಂದ ಪ್ರತ್ರಕರ್ತರಿಗೆ ಸಮರ್ಪಕ ಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಜೆಎನ್.ಗಣೇಶ್ ತಿಳಿಸಿದರು.
ಅವರು ಪಟ್ಟಣದ ರೈತ ಸಮುದಾಯ ಭವನದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಗುರುವಾರ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾರಂಗ ಪ್ರಜಾಪ್ರಭುತ್ವದ ರಕ್ಷಣೆ ಮಾಡುತ್ತಿದೆ. ಆದರೆ ಸ್ಥಳೀಯ ಪತ್ರಕರ್ತರು ಉತ್ತಮ ವರಿದಿಗಾರಿಕೆ ಮೂಲಕ ಸಮಾಜದ ಸ್ವಾಥ ರಕ್ಷಿಸುತ್ತಿದ್ದಾರೆ. ಕುರುಗೋಡು ಮತ್ತು ಕಂಪ್ಲಿ ಪತ್ರಕರ್ತರಿಗೆ ನಿವೇಶನ ಕಲ್ಪಿಸಲು ಮುಂದಾಗುತ್ತೇನೆ ಎಂಬ ಭರವಸೆ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿಎಸ್.ಶಿವಶಂಕರ್ ಮಾತನಾಡಿ, ವರದಿಗಾರಿಕೆಯಲ್ಲಿ ವಿಷಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು, ಕೆಲವರು ವ್ಯಕ್ತಿ ಕೇಂದ್ರಿತ ವರಿದಯಿಂದ ಸಮಾಜಕ್ಕೆ ಯಾವ ಲಾಭವೂ ಇಲ್ಲ. ವಾಸ್ತವ ಸಾಮಾಜಿಕ ಸಂಕಟ ಹಾಗೂ ಪರಿಹಾರ ಮಾರ್ಗ ಅರಿತವರು ನಿಜವಾದ ಪತ್ರಕರ್ತ ಆಗುತ್ತಾನೆ. ಆದರೆ ಇಂದಿನ ದೃಶ್ಯ ಮಾದ್ಯಮದಲ್ಲಿ ಅಪರಾಧದ ಮೂಲ ಕಾರಣ ವಿಜೃಂಬಿಸುವ ಬದಲು ಕೃತ್ಯವನ್ನೇ ವಿಜೃಂಬಿಸುತ್ತಿರುವುದು ಆತಂಕದ ವಿಷಯವಾಗಿದೆ. ಮಠ ಮಾನ್ಯಗಳೂ ಸಹ ಅಳುವ ವರ್ಗದ ಅಭಿವೃದ್ಧಿ ಪರಿಕಲ್ಪನೆಗಳನ್ನು ಹಿಂಬಾಲಿಸುತ್ತಿರುವುದು. ಸಮಾಜದ ಸ್ವಾತ್ಯಕ್ಕೆ ಅತಂಕಾರಿಯಾಗಿದೆ. ಸಂಸ್ಕೃತಿ, ಶಿಕ್ಷಣ, ಕೈಗಾರಿಕೆ ಹಾಗು ಕೃಷಿ ವಲಯದ ಅವಘಢವನ್ನು ಯಥಾವತ್ತಾಗಿ ಬೆಂಬಲಿಸುತ್ತಲೆ ಸಮಸ್ಯೆಯ ಮೂಲವನ್ನು ಸಮಾಜಕ್ಕೆ ಪರಿಚಯಿಸುವುದು ವರಿದಿಗಾರಿಕೆಯ ಪ್ರಮುಖ ಕರ್ತವ್ಯವಾಗಿದೆ ಎಂದರು.
ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಲಗಿ ಸುರೇಶ್ ಮಾತನಾಡಿ, ಸಮಾಜಕ್ಕೆ ನಿತ್ಯ ವಿಷಯ ತಿಳಿಸುವ ಪತ್ರಕರ್ತರ ಬುದಕು ಅತಂತ್ರ ಸ್ಥಿಯಲ್ಲಿದೆ. ಸಂವಿಧಾನದ ನಾಲ್ಕನೇ ಅಂಗ ಎನ್ನುವ ಪತ್ರಕರ್ತರ ಬದುಕೇ ಅತಂತ್ರ ಸ್ಥಿತಿಯಲ್ಲಿದ್ದಾಗ ಸಮಾಜದ ಸ್ಥಿತಿ ಎಂತಿರಬಹುದು ಎಂಬುದನ್ನು ಊಹಿಸಬೇಕಿದೆ. ಪತ್ರಿಕೆ ಇಲ್ಲವೆ ಪತ್ರಕರ್ತರು ಇಲ್ಲದಿದ್ದರೆ ಸಮಾಜದ ಸ್ಥಿತಿ ಏನಾಗಬಹುದು ಎಂಬುವುದನ್ನು ನೆನಪಿಸಿಕೊಳ್ಳಲೂ ಸಾದ್ಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ತಾಲೂಕು ಅಧ್ಯಕ್ಷ ಎನ್.ಬಸವರಾಜ್ ಮಾತನಾಡಿ, ಪ್ರತಿಯೊಬ್ಬ ಪತ್ರಕರ್ತರು ಅನ್ಯಾಯದ ವಿರುದ್ಧ ಧೈರ್ಯದಿಂದ ಹಾಗೂ ನಿಷ್ಪಕ್ಷಪಾತವಾಗಿ ಸುದ್ದಿ ಮಾಡಲು ಮುಂದಾಗಬೇಕು. ಆಗ ಸಮಾಜದ ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದರು.
ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ತಹಶೀಲ್ದಾರ್ ಕೆ.ರಾಘವೇಂದ್ರ ರಾವ್, ವೈದ್ಯ ಡಾ.ಮಂಜುನಾಥ ಜವಳಿ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಪರಮೇಶ್ವರಪ್ಪ, ಕಸಾಪ ಅಧ್ಯಕ್ಷ ನಾಗರಾಜ ಮಸೂತಿ, ಪೊಲೀಸ್ ಮುಖ್ಯಪೇದೆ ಶಿವರಾಯಪ್ಪ, ಸಾಹಿತಿ ಹುಲಿಗೇಶ್ ಹಾಗೂ ಪತ್ರಿಕಾ ವಿತರಕ ಕುಂಬಾರ ದೊಡ್ಡಪ್ಪ ರವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್-೨ ತಹಶೀಲ್ದಾರ್ ಮಲ್ಲೇಶಪ್ಪ, ಕೆಪಿಸಿಸಿ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ಸಿರಿಗೇರಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ, ನೋದಣಿ ಅಧಿಕಾರಿ ತೇಜಾಶ್ವಿನಿ ಎಲ್.ನಾಯಕ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೂಪ ಎಸ್.ಜಾಲಿಹಾಳ್, ಬಸ್ ಡಿಪೋ ವ್ಯವಸ್ಥಾಪಕ ಹರಿಕೃಷ್ಣ, ಸರಕಾರಿ ಬಾಲಕಿಯರ ಶಾಲೆಯ ಮುಖ್ಯಗುರು ಲಕ್ಷö್ಮಯ್ಯ, ಗಾಂಧಿ ತತ್ವ ಆಧಾರಿತ ಶಾಲೆಯ ಪ್ರಾಂಶುಪಾಲ ವಿಶ್ವನಾಥ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸದಶಿವಪ್ಪ, ಸಿರಿಗನ್ನಡ ಯುವಕ ಸಂಘ ಅಧ್ಯಕ್ಷ ಎನ್.ಕೊಮಾರೆಪ್ಪ, ಕರವೇ ಅಧ್ಯಕ್ಷ ಜಿಎಸ್.ಮೃತ್ಯುಂಜಯ್ಯ, ಗುಡಿಸಿಲಿ ರಾಜ, ವಿ.ದುರ್ಗಾಪ್ರಸಾದ್, ಹನುಮಂತ, ಅಂಬರೇಶ್, ಪ್ರೆಸ್ ಕೌನ್ಸಿಲ್ ಜಿಲ್ಲಾ ಗೌರವ ಅಧ್ಯಕ್ಷ ಶಣ್ಮುಖ ಭಂಡಾರಿ, ಜಿಲ್ಲಾ ಉಪಧ್ಯಕ್ಷ ಕೆ.ವೀರಭದ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ಲಾಂ ಭಾಷಾ, ಹಡಗಲಿ ಅಧ್ಯಕ್ಷ ಕೆ.ಬಸವರಾಜ, ಕಂಪ್ಲಿ ಅಧ್ಯಕ್ಷ ಮರಿಯಪ್ಪ, ಎಲ್ಲಾ ಸ್ಥಳಿಯ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪ್ರೆಸ್ ಕ್ಲಬ್ ಕೌನ್ಸಿಲ್ ಸಂಘದ ಪತ್ರಕರ್ತರು ಹಾಗೂ ಇತರರು ಇದ್ದರು. ಶಿಕ್ಷಕ ಪುನೀತ್ ಕಾರ್ಯಕ್ರಮ ನಿರ್ವಹಿಸಿದರು.
----------------------------------
ಕುರುಗೋಡು ಪಟ್ಟಣದ ರೈತ ಸಮುದಾಯ ಭವನದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಿದರು.ಚಿತ್ರ:
ಬಿಎಲ್‌ವೈ೧೦ಕೆಜಿಡಿ೦೨ : ಕುರುಗೋಡು ಪಟ್ಟಣದ ರೈತ ಸಮುದಾಯ ಭವನದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶಾಸಕ ಜೆಎನ್.ಗಣೇಶ್ ಉದ್ಘಾಟಿಸಿದರು.
-----------------------------
ವರದಿ : ಚನ್ನಕೇಶವ