ನೆಚ್ಚಿನ ಗುರುಗಳಿಗೆ ಮಕ್ಕಳ ಅಳುವಿನ ವಿದಾಯ
"ಸರ್.. ಹೋಗ್ಬೇಡಿ ಸರ್ ಪ್ಲೀಸ್.."
ಮಕ್ಕಳ ಅಳುವಿನ ಆಕ್ರಂದನ ಮುಗಿಲು ಮುಟ್ಟಿದೆ
ಬೀಳ್ಕೊಡುವ ಮನಸಿಲ್ಲದಿದ್ದರೂ ಅನಿವಾರ್ಯತೆಯಿಂದ ಬೀಳ್ಕೊಡುವ ಗಳಿಗೆ ಇದು
ಮೂಲತಃ ಬಿಜಾಪುರ್ ಜಿಲ್ಲೆ ಯವರಾದ ಸಂಜು ಕುಮಾರ ರಾಠೋಡ್ ಅವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಅಡವಿಭಾವಿ ಗ್ರಾಮದಲ್ಲಿ ತಮ್ಮ ಮೊದಲ ಸರಕಾರಿ ವೃತ್ತಿ ಜೀವನ ಪ್ರಾರಂಭ ಮಾಡಿದರು. ಉತ್ತಮ ಶಿಕ್ಷಣ, ಶೇಕ್ಷಣಿಕ ಮನೋಭಾವ, ಚಿತ್ರಕಲೆ, ಕ್ರೀಡೆ, ಕಲಿಸುವುದರ ಮೂಲಕ ಮಕ್ಕಳ ಪ್ರೀತಿಗೆ ತುಂಬಾ ಹತ್ತಿರವಾಗಿದ್ದರು.
ಹಲವಾರು ವಿದ್ಯಾರ್ಥಿಗಳಿಗೆ ಪೆನ್ನು ಕಾಫಿ ಕೊಡುವುದು ಅಭ್ಯಾಸ ಮಾಡುವುದಕ್ಕೆ ಸಹಾಯ ಮಾಡುವುದರ ಜೊತೆಗೆ ಎಲ್ಲರ ಪ್ರೀತಿ ಪಾತ್ರರಾಗಿದ್ದರು.
ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡವಿಭಾವಿಯಲ್ಲಿ ಸತತವಾಗಿ 16 ವರ್ಷಗಳ ಕಾಲ ಯಾವದೇ ಕಪ್ಪು ಚುಕ್ಕೆ ಇಲ್ಲದೆ ತಮ್ಮ ವೃತ್ತಿ ಸೇವೆ ಸಲ್ಲಿಸಿ ಎರಡನೇ ಅವಧಿಯ ಸೇವೆಯನ್ನು ಬೇರೊಂದು ಶಾಲೆಯಲ್ಲಿ ಸಲ್ಲಿಸುವುದಕ್ಕೆ ಈ ಶಾಲೆ ಇಂದ ಬೇರೊಂದು ಶಾಲೆಗೆ ವರ್ಗಾವಣೆಗೊಂಡಿದ್ದು ಅತ್ಯಂತ ದುಃಖಕರವಾದ ವಿಷಯ.
ಇವರನ್ನ ಬೀಳ್ಕೊಡುಗೆ ನೀಡುವುದಕ್ಕೆ ಯಾವದೇ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಊರಿನವರಿಗೆ ಇಷ್ಟವಿಲ್ಲ ಅನಿವಾರ್ಯ ಕಾರಣದಿಂದ ಬೀಳ್ಕೊಟ್ಟರು.
ಶಾಲೆಯ ಮುಖ್ಯ ಶಿಕ್ಷಕರಾದ ಶಂಕ್ರಪ್ಪ ರಾಠೋಡ್ ಅವರು ರಿವಿವ್ ಪತ್ರ ನೀಡುವ ಮೂಲಕ ದುಃಖದ ವಿಧಾಯ ಹೇಳಿದರು.
ವಿಡಿಯೋ ನೋಡಿ : ಮಕ್ಕಳಿಂದ ಗುರುವಿಗೆ ವಿದಾಯ
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಉಮಾಪತಿ ಸರ್, ಮಂಜುನಾಥ್ ಹಿರೇಮಠ್. ಬಸಪ್ಪ ಕುಮಟಗಿ, ಮೌನೇಶ್ ಬಡಿಗೇರ್, ಶೀಲಾವತಿ ML, ದಾನೇಶ್ ಪೂಜಾರ್, ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶಗೌಡ ಮಾಲಿಪಾಟೀಲ್, ಭೀಮಪ್ಪ ಕುಮಟಗಿ, SDMC ಅಧ್ಯಕ್ಷರಾದ ಸತ್ಯಪ್ಪ ಹಿರೇಮನಿ, ಕಳಕಪ್ಪ ಹಡಪದ, ಹಳೆಯ ವಿದ್ಯಾರ್ಥಿಗಳಾದ ಲಕ್ಷ್ಮಣ ಮಾದರ, ಮಹಾಂತೇಶ್ ಶಡ್ಲಿಗೇರಿ, ಮಂಜುನಾಥ್ ಕುಮಟಗಿ ಮುಂತಾದವರು ಉಪಸ್ಥಿತರಿದ್ದರು.
ಶ್ರವಣ ಅಂಗಡಿ, ಸಿದ್ದಿ ಟಿವಿ , ಕುಷ್ಟಗಿ



