ಮದ್ರಾಸ್ ಐ ನಿಮ್ಮ ಮಕ್ಕಳನ್ನು ರಕ್ಷಿಸಿ ಡಾ ಮಂಜುನಾಥ ಅಣಗೌಡರ.
ಕೆಂಗಡಿಸಿದ ಮದ್ರಾಸ್ ಐ ನಿರಂತರ 10 ದಿನಗಳಿಂದ ಸುರಿಯುತ್ತಿರುವ ಮಳೆ, ಜೊತೆಗೆ ಮದ್ರಾಸ್ ಐ,ಸಮಸ್ಯೆ ಹೆಚ್ಚಾಗುತ್ತಿದೆ ಇದರಿಂದ ಹಲವು ಮಕ್ಕಳಲ್ಲಿ ತೊಂದರೆ ಕಂಡು ಬಂದಿದ್ದು ಪೋಷಕರು ಆತಂಕಗೊಂಡಿದ್ದಾರೆ.
ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಹೆಚ್ಚಾಗಿ ಕಾಯಿಲೆ ಕಾಣಿಸಿಕೊಂಡಿದೆ
*ರೋಗದ ಲಕ್ಷಣಗಳು:*
1) ಕಣ್ಣಿನ ಬಿಳಿ ಭಾಗವು ಕೆಂಪಾಗುತ್ತದೆ
2) ಕಣ್ಣುಗಳಲ್ಲಿ ಉರಿ ಮತ್ತು ನೋವು ಕಂಡು ಬರುತ್ತದೆ
3) ಕಣ್ಣುಗಳಿಂದ ನಿರಂತರವಾಗಿ ನೀರು ಹೊರಬರುತ್ತದೆ
4) ಕಣ್ಣುಗಳಲ್ಲಿ ಉರಿ ಕಂಡು ಬರುತ್ತದೆ
*ಚಿಕಿತ್ಸೆ:*
1)ಆಯುರ್ವೇದ ಗ್ರಂಥಗಳಲ್ಲಿ ಹೇಳಲಾದ ತ್ರಿಫಲಾ ಶೇಕ ಅತ್ಯಂತ ಲಾಭದಾಯಕ
2)ನೋವು ನಿವಾರಕ ಮಾತ್ರೆ, ಕಣ್ಣಿನ ಡ್ರಾಪ್ಸ್ ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು
3) ಮೂಗಿನ ಮತ್ತು ಗಂಟಲಿನ ಸೋಂಕಿದ್ದಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು
*ಮುನ್ನೆಚ್ಚರಿಕೆ ಕ್ರಮಗಳು*
1)ಹೆಚ್ಚಿನ ಜನ ಇರುವ ಪ್ರದೇಶದಲ್ಲಿ ಹೋಗುವುದನ್ನು ಕಡಿಮೆ ಮಾಡಬೇಕು
2)ಪದೇ ಪದೇ ಕಣ್ಣುಗಳನ್ನು ಉಜ್ಜಬಾರದು
3)ಸೋಪಿನಿಂದ ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವ ಅಭ್ಯಾಸ ಮಾಡಬೇಕು
4) ಕಣ್ಣಿನ ಉರಿ ಬಂದ ವ್ಯಕ್ತಿ ಬೇರೆಯವರ ಜೊತೆಗೆ ಸಂಪರ್ಕ ಹೊಂದುವುದನ್ನು ತಪ್ಪಿಸಬೇಕು
5) ಸೊಂಕಿತ ಉಪಯೋಗಿಸಿದ ಹಾಸಿಗೆ,ಟಾವೆಲ್,ತೆಲೆ ದಿಂಬು, ಉಪಯೋಗಿಸಬಾರದು
ಎಂದು ತುರುವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ
ಡಾ ಮಂಜುನಾಥ ಅಣಗೌಡರ ಹಿರಿಯ ಆಯುರ್ವೇದ ತಜ್ಞ ಸಾರ್ವಜನಿಕರಿಗೆ ಈ ಮೂಲಕ ಹೇಳಿದರು.
ವರದಿ : ಮೆಹಬೂಬ ಮೊಮೀನ.

