Koppal : ನಾಳೆ PDO ಉಚಿತ ಕಾರ್ಯಾಗಾರ

 

ನಾಳೆ PDO ಉಚಿತ ಕಾರ್ಯಾಗಾರ 

ಕೊಪ್ಪಳ,: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಭೂಮಿ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ಇವರ ಸಹಯೋಗದಲ್ಲಿ PDO ಉಚಿತ ಕಾರ್ಯಾಗಾರ ನಗರದ ಕಿನ್ನಾಳ ರಸ್ತೆಯ ಕಣ್ಣಿನ ಆಸ್ಪತ್ರೆಯ ಮಳಿಗೆಯಲ್ಲಿರುವ ಸ್ಟಡಿ ಸೆಂಟರನಲ್ಲಿ ಆಗಸ್ಟ್ 4 ಶುಕ್ರವಾರ ರಂದು ಸಂಜೆ 4 ರಿಂದ 6 ವರೆಗೆ ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಭೂಮಿ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ಕೊಪ್ಪಳ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು,ಇಲ್ಲಿಯವರೆಗೂ1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಚಿಂಗ್ ತರಬೇತಿ ಮುಗಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾದ ಪ್ರಾಣೇಶ ಎಸ್, ಜಿಲ್ಲಾ ಕೌಶಲ್ಯಾಭಿವೃದ್ಧಿ  ಅಧಿಕಾರಿ, ಭೀಮಪ್ಪ ಗೊಲ್ಲರ, ರಾಜ್ಯಶಾಸ್ತ್ರ ಉಪನ್ಯಾಸಕರು ಸ.ಪ.ಪೂ.ಕಾ. ಮಂಗಳೂರು ಹಾಗೂ ವಿರೇಶ್ ಜಿ. ಪಂಚಾಯತಿ ಅಭಿವೃದ್ಧಿ ಅಧಿಕಾರಿ  ಭಾಗವಹಿಸಲಿದ್ದಾರೆ. ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಂಡು ಕಾರ್ಯಾಗಾರ ಸದ್ಬಳಕೆ ಮಾಡಿಕೊಳ್ಳಲು ಸಂಸ್ಥೆಯ ನಿರ್ದೇಶಕರು ರಮೇಶ ಕುಶೇಕಾಳ ತಿಳಿಸಿದ್ದಾರೆ.

ವರದಿ : ಶಿವಕುಮಾರ್ ಹಿರೇಮಠ

Previous Post Next Post

Contact Form

f="https://unpkg.com/video.js/dist/video-js.css" rel="stylesheet">