ಅವಹೇಳನಕಾರಿ ಮಾತನಾಡಿದ ಅರಗ ಜ್ಞಾನೇಂದ್ರನನ್ನು ಬಂಧಿಸಲು ಡಾ ನಾಗವೇಣಿ ಆಗ್ರಹ.
ಕರ್ನಾಟಕದ ನವರತ್ನಗಳಾದ ಎಐಸಿಸಿ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ವಿರುದ್ಧ ಅವಹೇಳನಕಾರಿ ಮಾತನಾಡಿದ ಮಾಜಿ ಮಂತ್ರಿ ಅರಗ ಜ್ಞಾನೇಂದ್ರನನ್ನು ಕೂಡಲೇ ಬಂಧಿಸಬೇಕೆಂದು ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ನಾಗವೇಣಿ ಎಸ್ ಪಾಟೀಲ್ ಅವರು ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ್ ಖಂಡ್ರೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು ಅದರಿಂದ ಅರಗ ಜ್ಞಾನೇಂದ್ರ ನನ್ನ ತಕ್ಷಣವೇ ಬಂಧಿಸಬೇಕು ನಂತರ ಗಡಿ ಪಾರು ಮಾಡಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆಯವರು ದೇಶ ಕಂಡ ಅಪ್ರತಿಮ ಹಾಗೂ ಮಹಾನ್ ನಾಯಕ, ಮುತ್ಸದಿ ರಾಜಕಾರಣಿ ಮತ್ತು ಈಶ್ವರ್ ಖಂಡ್ರೆ ಅವರು ಕರ್ನಾಟಕ ರಾಜ್ಯದ ಬುದ್ಧಿವಂತ ರಾಜಕಾರಣಿ ಅವರ ಶಿಸ್ತು ನಮ್ಮೆಲ್ಲರಿಗೂ ಇಂದಿಗೂ ಸ್ಪೂರ್ತಿ ಅಂತವರ ಬಗ್ಗೆ ಅರಗ ಜ್ಞಾನೇಂದ್ರ ಅವರು ಮಾತನಾಡಿದ್ದು ಅವರಿಗೆ ಬುದ್ಧಿ ಬ್ರಮಣೆಯಾಗಿದೆ ತಕ್ಷಣವೇ ಅವರನ್ನು ಬಂಧಿಸಿ ಸರಿಯಾದ ಚಿಕಿತ್ಸೆಗೊಳಿಸಬೇಕೆಂದು ಡಾಕ್ಟರ್ ನಾಗವೇಣಿ ಅವರು ಆಗ್ರಹಿಸಿದರು.
*ರಿಪೋರ್ಟರ್ ಮೆಹಬೂಬ ಮೊಮೀನ.*
