Sindhanuru : ಅನ್ನದಾತರ ಕಣ್ಣಿರು ವರೇಸದ ನೀರಾವರಿ ಅಧಿಕಾರಿ ಹನುಮಂತಪ್ಪ AEE

 

ಅನ್ನದಾತರ ಕಣ್ಣಿರು ವರೇಸದ ನೀರಾವರಿ ಅಧಿಕಾರಿ ಹನುಮಂತಪ್ಪ ಎಇಇ..

ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದ ನಂ.1 ಕಾಲುವೆಯ ಉಪಕಾಲುವೆ 40 ಮತ್ತು 42ರ ರಾಘವೇಂದ್ರ ಕ್ಯಾಂಪ, ಗುಂಜ್ಜಳ್ಳಿ,ಗುಂಜ್ಜಳ್ಳಿ ಕ್ಯಾಂಪ್, ಶ್ರೀನಿವಾಸಕ್ಯಾಂಪ, ಮ್ಯಾಗಡೆ  ಕ್ಯಾಂಪ್ ಮತ್ತು ಮಾಟೂರ, ಕೆಳ ಭಾಗದ ರೈತರಿಂದ ಮಂಗಳವಾರ ಸಾಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಮನವಿ ಪತ್ರ ಸಲ್ಲಿಸಿದರು

40ನೇ ಉಪಕಾಲುವೆಯ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಅಡ್ಡಗಟ್ಟಿರು ತಾತ್ಕಾಲಿಕ ರಸ್ತೆ ಕೂಡಲೆ ತೆರವುಗೊಳಿಸಿ ನೀರು ಸರಬರಾಜು ಮಾಡುಬೇಕು ಎಂದು ಕೆಳಭಾಗದ ರೈತರು ಅಧಿಕಾರಿಗಳಿಗೆ ಮನವಿ ಮಾಡಿದರು.

ನಂತರ ಉಪಕಾಲುವೆ 42ರ ಸೀಳು ಕಾಲುವೆ ಸಣ್ಣ ಪೈಪ್ ಇದರಿಂದ ಕೆಳ ಭಾಗದ ರೈತರ ಜಮೀನಿಗೆ ನೀರು ಪೂರೈಕೆಯಿಲ್ಲದೆ ಭತ್ತದ ಬೆಳೆಯಲು ಭಾರಿ ಸಂಕಷ್ಟ ಸೃಷ್ಟಿಯಾಗಿದೆ ಅಧಿಕೃತ ಸುಮಾರು 1200 ಅನಧಿಕೃತ ಸುಮಾರು 600 ಎಕ್ಕರೆ ಜಮೀನುಗಳಿಗೆ ಅಕ್ರಮವಾಗಿ ನೀರಾವರಿ ಮಾಡಿಕೊಂಡಿದ್ದು ದೊಡ್ಡ,ದೊಡ್ಡ ಪೈಪಗಳನ್ನು ತೆರವುಗೊಳಿಸಲು ಹಲವಾರು ಬಾರಿ ಅಧಿಕಾರಿಗಳಿ ಮನವಿ ಮಾಡಿದರೂ ಪ್ರಸ್ತುತ ದಿನದವರೆಗೆ ಯಾವುದೇ ಪ್ರತಿಕ್ರಿಯೆ ನಡುತ್ತಿಲ್ಲ.

ಹಲವು ಬಾರಿ ಸಮಸ್ಯೆಗಳಿಗೆ ಮನವಿ ಪತ್ರನೀಡಿದರೂ   ಹನುಮಂತಪ್ಪ ಎಇಇ ಹಾಗೂ ಶಿವಶಂಕ್ರಪ್ಪ ಎಇ ಯವರು  ಬರೀ ಹಾರಿಕೆ ಉತ್ತರ ನೀಡಿ ರೈತರ ಸಮಸ್ಯೆ ನೀಗಿಸದೆ ಸಮಸ್ಯೆಗಳ ಸುರಿಮಳೆ ಸುರಿಸುತ್ತಿದ್ದಾರೆ ಈಗಲಾದರೂ ಮೆಲಾಧಿಕಾರಿಗಳು ಕುಡಲೆ ಗಮನ ಹರಿಸಿ ಅಕ್ರಮವಾಗಿ ಹಾಕಿರುವ ದೋಡ್ಡ ಪೈಪಗಳನ್ನು ತೆರವು ಗೊಳಿಸಿ ರೈತರಿಗೆ ಸಹಕರಿಸುವ ಕಾರ್ಯ ಆರಂಭಿಸಿ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಲಯದ ಮುಂದೆ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಬಸವರಾಜ ಡಣಾಪುರ ಹೇಳಿದರು.

ನಮ್ಮಲ್ಲಿ 2005 ರಿಂದ ಇಲ್ಲಿಯವರೆಗೂ ಯಾವುದೇ ಗ್ರಾಂಟ್ ಬಂದಿಲ್ಲ. ಹಾಗಾಗಿ ನಾವು ಸುತ್ತಮುತ್ತಲಿನ ಹಳ್ಳಿಗಳಿಂದ ಹಿಡಿದು ಎಲ್ಲವನ್ನು ಎಸ್ಟಿಮೇಟ್ ಮಾಡಿ ಮೇಲಾಧಿಕಾರಿಗೆ ನೀಡಿದ್ದೇವು. ನಾವು ಆದಷ್ಟು ಕೆಲಸ ಮಾಡುತ್ತೆವೆ, ಸ್ವಲ್ಪ ಸಮಯ ಕೊಡಿ ಎಂದು ಹನುಂತಪ್ಪ ಎಇಇ ನೀರಾವರಿ ಅಧಿಕಾರಿ ತುರ್ವಿಹಾಳ ಹೇಳಿದರು.

ಈ ಸಂದರ್ಭದಲ್ಲಿ ಬಾಪುಗೌಡ ದೇವರಮನಿ ಶಿವರಾಜ ಉಪ್ಪಳ,ಬಸವರಾಜ, ದೋಡ್ಡಪ್ಪ,ಹುಸೇನಪ್ಪ, ಬೂಜ್ಜಪ್ಪ,ಮಲ್ಲಯ್ಯ, ಹುಲುಗಪ್ಪ,ನೀರುಪಾದಿ, ಬಸವರಾಜ,ಗುರಪ್ಪ, ಚಿದಾನಂದ,ನೀರುಪಾದೆಪ್ಪ, ಸಣಪ್ಪ,ಕೆಳ ಭಾಗದ ರೈತರು,ಇನಿತರರು ಇದ್ದರು.

ವರದಿ :  ಮೆಹಬೂಬ ಮೊಮೀನ

Previous Post Next Post

Contact Form

f="https://unpkg.com/video.js/dist/video-js.css" rel="stylesheet">