ಶ್ರೀ ವೀರಭದ್ರೇಶ್ವರ ಸ್ವಾಮಿ ದೇವರ ಗಂಗೆಸ್ಥಳ ಕಾರ್ಯಕ್ರಮ
ಕಂಪ್ಲಿ :
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಗಂಡುಗಲಿ ಕುಮಾರರಾಮನ ಕೋಟೆಯಲ್ಲಿ ಪ್ರತಿವರ್ಷದಂತೆ ಈ ವರ್ಷವು ಕೂಡ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವರ ಗಂಗೆಸ್ಥಳ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಹೌದು ವೀಕ್ಷಕರೇ, ಇಂದು ಶ್ರಾವಣ ಗರುವಾರದಂದು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವರ ಗಂಗೆಸ್ಥಳ ಕಾರ್ಯಕ್ರಮ ಮತ್ತು ವೀರಭದ್ರನ ವೀರಗಾಸೆ ಹಾಗೂ ಮೂರ್ತಿಯನ್ನು ಕೋಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಇನ್ನೂ ದೇವರ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ವೀರಗಾಸೆ ಹಾಗೂ ಒಡಕು ಹೇಳುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತಾನಾಡಿದ ದೇವಸ್ಥಾನ ಕಮಿಟಿಯ ಪದಾಧಿಕಾರಿ ಮಹೇಶ್ ರೆಡ್ಡಿ, ಈ ದೇವಸ್ಥಾನ ಗಂಡುಗಲಿ ಕುಮಾರರಾಮನ ಕಾಲದ್ದು, ಈ ದೇವಸ್ಥಾನಕ್ಕೂ ಸುಮಾರು ವರ್ಷದ ಇತಿಹಾಸವಿದೆ ಆದರೂ ಪುರಾತತ್ವ ಇಲಾಖೆಯವರು ಇತ್ತ ಕಣ್ಣು ಹಾಯಿಸಿಲ್ಲ, ಇನ್ನಾದರೂ ದೇವಸ್ಥಾನ ಅಭಿವೃದ್ಧಿ ಮಾಡಿ ಎಂದು ತಾಲೂಕ ಆಡಳಿತಕ್ಕೆ ಸಿದ್ದಿ ಟಿವಿ ವಾಹಿನಿಯ ಮೂಲಕ ಒತ್ತಾಯಿಸಿದರು.
ಇನ್ನೂ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಮಾಹಾಂತಿನಮಠದ ಭರತೇಶ,
ಉಪಾಧ್ಯಕ್ಷ ಕಾಮರೆಡ್ಡಿ ತಿಮ್ಮಪ್ಪ,ಕಾರ್ಯದರ್ಶಿ ಮತ್ತು ಸದಸ್ಯರು ಹಾಗೂ
ಕೆ.ವಿರುಪಾಕ್ಷಪ್ಪ, ಟಿ ಸುರೇಶ್ ರೆಡ್ಡಿ, ಕೆ.ಲಕ್ಷ್ಮಣರೆಡ್ಡಿ, ಹಳ್ಳಿ ನಾಗಪ್ಪ, ಕೆ.ರಾಕೇಶ್ ರೆಡ್ಡಿ, ಪಿ ಶರಣ ಬಸವ,ಸಿ. ಮಂಜಪ್ಪ, ಹಾಗೂ ಕೋಟೆಯ ಜನರು
ಉಪಸ್ಥಿತರಿದ್ದರು.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ ( Cell: 6360633266 )
Tags
ಟಾಪ್ ನ್ಯೂಸ್