Koppal :;ಶಾಲೆಗಳನ್ನು ಮುಚ್ಚುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ ಮನವಿ ಸಲ್ಲಿಕೆ

 

ಶಾಲೆಗಳನ್ನು ಮುಚ್ಚುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ ಮನವಿ ಸಲ್ಲಿಕೆ

ಕರ್ನಾಟಕ ನವ ನಿರ್ಮಾಣ ಸೇನೆಯಿಂದ 
ಮನವಿ ಸಲ್ಲಿಕೆ

ಕೊಪ್ಪಳ,: ದಾಖಲಾತಿಯ ನೆಪ ಮಾಡಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಮುಚ್ಚುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಸೋಮವಾರ ದಂದು ಜಿಲ್ಲಾಡಳಿತ ಭವನದಲ್ಲಿ
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.  
ಮನವಿ ಸಲ್ಲಿಸಿದ ನಂತರ ಮಾತನಾಡಿದ 
ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು ಅವರು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸುಮಾರು 100ಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ದಾಖಲಾತಿಯ ನೆಪ ನೀಡಿ ವಿಲಿನದ ಹೆಸರಿನಲ್ಲಿ ಶಾಶ್ವತವಾಗಿ ಮುಚ್ಚಿರುವ ಸರಕಾರವು, ಮಕ್ಕಳ ಹಾಜರಾತಿ ಕಡಿಮೆಯ ಕಾರಣವನ್ನಿಟ್ಡುಕೊಂಡು ಸರಕಾರ ಮಾತೃಭಾಷೆ ಕಲಿಕೆಯ ಕೇಂದ್ರಗಳಾಗಿರುವ ಪ್ರಾಥಮಿಕ ಶಾಲೆಗಳನ್ನು ಮುಚ್ಚಿರುವ ಕ್ರಮ ನಿಜಕ್ಕೂ ಖಂಡನಿಯ. ರಾಜ್ಯದ ಬಹುತೇಕ ಗಡಿ ಭಾಗದ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ರಾಯಚೂರ, ಕಲಬುರಗಿ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪೂರ, ಚಾಮರಾಜನಗರ ದಂಥಹ ಗಡಿ ಸೂಕ್ಷ್ಮತೆ ಹೊಂದಿರುವ ಜಿಲ್ಲೆಗಳಲ್ಲಿಯೇ ಅತಿ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ. ಗಡಿ ಭಾಗಗಳು ಭಾಷಾವಾರು ಪ್ರಾಂತ್ಯಗಳ ರಚನೆ ಆದಾಗಿನಿಂದಲೂ ಒಂದಿಲ್ಲ ಒಂದು ಕಾರಣಗಳಿಗಾಗಿ ಭಾಷಾ ಸಂಘರ್ಷ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇಂತಹ ಸೂಕ್ಷ್ಮತೆಯನ್ನು ಸರಕಾರ ಅರ್ಥ ಮಾಡಿಕೊಳ್ಳದೆ ಮುಚ್ಚುತ್ತಿರುವುದು ನಿಜಕ್ಕೂ ಅಪಾಯಕಾರಿ. ಶಿಕ್ಷಣ ಇಲಾಖೆಯ ಒಂದು ಮಾಹಿತಿಯ ಪ್ರಕಾರ ಕಿತ್ತೂರು ಕರ್ನಾಟಕದ ಶೈಕ್ಷಣಿಕ ವಿಭಾಗ ಒಂದರಲ್ಲೇ ಈಗಾಗಲೇ 64 ಶಾಲೆಗಳನ್ನು ಮುಚ್ಚಲಾಗಿದೆ. 584 ಶಾಲೆಗಳು ಮುಚ್ಚುವ ಹಂತದಲ್ಲಿವೆ. ಇದೇ ಪರಿಸ್ಥಿತಿ ಇನ್ನುಳಿದ ಶೈಕ್ಷಣಿಕ ವಿಭಾಗಗಳಲ್ಲೂ ಇದೆ. ಶಾಲಾ ದಾಖಲಾತಿ ಎನ್ನುವಂತಹ ಅವೈಜ್ಞಾನಿಕ ನಿಯಮ ಸೇರಿದಂತೆ ಸರಕಾರದ ಕೆಲ ಅಪ್ರಬುದ್ಧ ನಿಯಮಗಳು ಇಂತಹ ಪರಿಸ್ಥಿತಿಗೆ ಕಾರಣವಾಗುತ್ತಿವೆ. ಇದು ಮಾತೃಭಾಷೆ ಶಿಕ್ಷಣಕ್ಕೆ ಬಲವಾದ ಕೊಡಲಿ ಪೆಟ್ಟು ನೀಡಿದಂತೆ. ಸರಕಾರ ತಕ್ಷಣ ಎಚ್ಚೆತ್ತುಕೊಂಡು ಶಿಕ್ಷಣ ಇಲಾಖೆಯ ಕೆಲ ಅವೈಜ್ಞಾನಿಕ ನಿಯಮಗಳನ್ನು ಮಾರ್ಪಡಿಸಿ ಗಡಿ ಭಾಗಗಳಲ್ಲಿ ಶಾಲಾ ದಾಖಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 
ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಈ ನಾಡಿನ ಭಾಷೆ, ಸಂಸ್ಕೃತಿ ಉಳಿಸಿ, ಬೆಳಸುವ ತಾಯಿ ಬೇರುಗಳು ಅವುಗಳನ್ನು ಕತ್ತರಿಸಲು ಹೊರಟರೆ ನವನಿರ್ಮಾಣ ಸೇನೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ. ಸರಕಾರ ಈ ಕೂಡಲೇ ವಿಲಿನದ ಹೆಸರಿನಲ್ಲಿ ಮುಚ್ಚಿರುವ ಶಾಲೆಗಳನ್ನು ಮರು ಪ್ರಾರಂಭಿಸಿ ದಾಖಲಾತಿ ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸೇನೆಯ ಬಸವರಾಜ್ ಕೊಪ್ಪಳ, ಶ್ಯಾಮ್ ಬೆನಗಿ, ಮಹಾಂತೇಶ್ ಅದಿಸಿರಿ, ಮರಿಯಪ್ಪ ಮಂಗಳೂರ, ವಿರೇಶ್ ಅಂಗಡಿ, ರಫಿ ಲೋಹರ್, ಸುರೇಶ ರೇವಡಿ ಇದ್ದರು.

ವರದಿ : ಶಿವಕುಮಾರ್ ಹಿರೇಮಠ

Previous Post Next Post

Contact Form

f="https://unpkg.com/video.js/dist/video-js.css" rel="stylesheet">