ಜೆಸಿ ಸಪ್ತಾಹದ ಮೊದಲ ದಿನದ ಕಾರ್ಯಕ್ರಮದ ಪ್ರಯುಕ್ತ ದಂತ ತಪಾಸಣೆ ಶಿಬಿರ ಹಾಗೂ ದಂತ ಆರೋಗ್ಯ ಜಾಗೃತಿ ಕಾರ್ಯಕ್ರಮ
ಕಂಪ್ಲಿ ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜೆಸಿ ಸಪ್ತಾಹದ ಪ್ರಯುಕ್ತ ಜೆಸಿಐ ಕಂಪ್ಲಿ ಸೋನದ ವತಿಯಿಂದ ಹಮ್ಮಿಕೊಂಡಿದ್ದ ದಂತ ತಪಾಸಣೆ ಶಿಬಿರ ಹಾಗೂ ದಂತ ಆರೋಗ್ಯ ಜಾಗೃತಿ ಕಾರ್ಯಕ್ರಮ ಜರುಗಿತು.
ಈ ವೇಳೆ ಪಟ್ಟಣದ ಖ್ಯಾತ ದಂತ ವೈದ್ಯರಾದ ಡಾ.ರಾಮು ಭಟ್ಟ ಮಾತನಾಡಿ ದಂತದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ನಿತ್ಯ ಎರೆಡು ಬಾರಿ ಹಲ್ಲನ್ನು ಉಜ್ಜುವ ಹವ್ಯಾಸ ಬೆಳೆಸಿಕೊಳ್ಳಬೇಕು. ದಂತಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಚಿಕ್ಕದಿದ್ದಾಗಲೇ ವೈದ್ಯರ ಬಳಿ ತೆರಳಿ ಸೂಕ್ತ ಚಿಕೆತ್ಸೆ ಪಡೆಯ ಬೇಕು ಹೊರೆತು ಹೆಚ್ಚಾಗುವ ವರೆಗೂ ಬಿಡಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಕಂಪ್ಲಿ ಸೋನದ ಅಧ್ಯಕ್ಷ ಸಂತೋಷ್ ಕೊಟ್ರಪ್ಪ, ಸೋಗಿ ವಹಿಸಿ ಮಾತನಾಡಿ ಆರೋಗ್ಯವೇ ಮಹಾ ಭಾಗ್ಯ. ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದಿದ್ದರೆ ಮನುಷ್ಯ ಏನನ್ನಾದರೂ ಸಾಧಿಸ ಬಲ್ಲ. ಆರೋಗ್ಯವಂತ ಸಮಾಜದ ನಿರ್ಮಾಣದಿಂದ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ವಿಶ್ವವಿದ್ಯಾಲಯದ ಯೋಗ ಉಪನ್ಯಾಸಕರಾದ ಡಿ.ಮಹೇಶ್ ಬಾಬು, ವಸತಿ ನಿಲಯದ ವಾರ್ಡನ್ ವಿರೂಪಾಕ್ಷಪ್ಪ,ಜೆಸಿಐ ಮಹಿಳಾ ಘಟಕದ ಅಧ್ಯಕ್ಷ್ಯೆ ಅಮೃತ ಸಂತೋಷ್ಜೆ, ಸಿಐ ವಲಯ 24ರ ಪದಾಧಿಕಾರಿಗಳಾದ ಇಂದ್ರಜಿತ್ ಸಿಂಗ್, ಜೆಸಿಐ ಕಂಪ್ಲಿ ಸೋನದ ಕಾರ್ಯದರ್ಶಿ ಅಮರನಾಥ ಶಾಸ್ತ್ರಿ ದಂತ ಆಸ್ಪತ್ರೆಯ ಸಿಬ್ಬಂದಿಗಳಾದ ಅನು, ಸುನಿತಾ, ಸೇರಿದಂತೆ ಜೆಸಿಐ ಪದಾಧಿಕಾರಿಗಳು ಇತರರಿದ್ದರು