Sriramulu : ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ, ದಕ್ಷಿಣದ ಪಪ್ಪು ಉದಯನಿಧಿ ಸ್ಟಾಲಿನ್: ಶ್ರೀರಾಮುಲು


ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ, ದಕ್ಷಿಣದ ಪಪ್ಪು ಉದಯನಿಧಿ ಸ್ಟಾಲಿನ್: ಶ್ರೀರಾಮುಲು

ಆ ಇಬ್ಬರು ನಾಯಕರು ಹೆಚ್ಚು ಕಡಿಮೆ ಒಂದೇ ಬಾರಿ ರಾಜಕೀಯಕ್ಕಿಳಿದವರು. ಒಂದೇ ಪಕ್ಷದಲ್ಲಿದ್ದವರು ಒಂದೇ ಸಮುದಾಯದವರು ಕೂಡ ಹೌದು. ಆದ್ರೇ ರಾಜಕೀಯ ಕಾರಣಗಳಿಂದ ಇಬ್ಬರು ಬೇರೆ ಬೇರೆ ಪಕ್ಷಕ್ಕೆ ಹೋಗದಷ್ಟೇ ಅಲ್ಲದೇ ಪರಸ್ಪರ ಸ್ಪರ್ಧೆ ಮಾಡೋ ಮೂಲಕ ಓರ್ವ ನಾಯಕ ಸೋತ್ರೇ ಮತ್ತೊಬ್ಬ ನಾಯಕ ಗೆದ್ದು, ಇದೀಗ ಮಂತ್ರಿಯಾಗಿದ್ದಾರೆ. 




: ಆ ಇಬ್ಬರು ನಾಯಕರು ಹೆಚ್ಚು ಕಡಿಮೆ ಒಂದೇ ಬಾರಿ ರಾಜಕೀಯಕ್ಕಿಳಿದವರು. ಒಂದೇ ಪಕ್ಷದಲ್ಲಿದ್ದವರು ಒಂದೇ ಸಮುದಾಯದವರು ಕೂಡ ಹೌದು. ಆದ್ರೇ ರಾಜಕೀಯ ಕಾರಣಗಳಿಂದ ಇಬ್ಬರು ಬೇರೆ ಬೇರೆ ಪಕ್ಷಕ್ಕೆ ಹೋಗದಷ್ಟೇ ಅಲ್ಲದೇ ಪರಸ್ಪರ ಸ್ಪರ್ಧೆ ಮಾಡೋ ಮೂಲಕ ಓರ್ವ ನಾಯಕ ಸೋತ್ರೇ ಮತ್ತೊಬ್ಬ ನಾಯಕ ಗೆದ್ದು, ಇದೀಗ ಮಂತ್ರಿಯಾಗಿದ್ದಾರೆ. ಆದ್ರೇ, ಲೋಕಸಭೆ ಚುನಾವಣೆಯ ಹುರುಪಿನಲ್ಲಿರೋ ಗಣಿನಾಡಿನ  ಮಾಜಿ ಸಚಿವ ಶ್ರೀರಾಮುಲು ಮತ್ತು ಹಾಲಿ ಸಚಿವ ನಾಗೇಂದ್ರ ನಡುವೆ ಇದೀಗ ಸನಾತನ ಧರ್ಮ ಮತ್ತು  ಪಪ್ಪು ( ರಾಹುಲ್ ಗಾಂಧಿ ವಿಚಾರದಲ್ಲಿ ) ವಿಚಾರವಾಗಿ ವಾಕ್ಸಮರ ನಡೆಯುತ್ತಿದೆ.  


ಒಂದೇ ಪಕ್ಷದಲ್ಲಿದ್ದವರ ಮಧ್ಯೆ ಇದೀಗ ಪಪ್ಪು ವಿಚಾರದಲ್ಲಿ ವಾಗ್ವಾದ: ಬಳ್ಳಾರಿಯಲ್ಲಿ ಆಂದ್ರ ಶೈಲಿಯ ಬೈದಾಟದ ರಾಜಕೀಯಕ್ಕೆ ನಾಂದಿ ಹಾಡಿದ ಸಚಿವ ನಾಗೇಂದ್ರ ಮತ್ತು ಮಾಜಿ ಶಾಸಕ ಶ್ರೀರಾಮುಲು… ಸನಾತನ ಧರ್ಮ ಮತ್ತು ಪಪ್ಪು ವಿಚಾರವಾಗಿ ಪರಸ್ಪರ ನಿಂದಿಸಿಕೊಂಡ ನಾಯಕರು.. ಹೌದು, ಬಳ್ಳಾರಿ ಅಂದ್ರೇ ಮೊದಲಿನಿಂದಲೂ ಅದೊಂದು ರೀತಿಯಲ್ಲಿ ರೆಬಲ್ ರಾಜಕೀಯ  ಅಂದಿನ ಕಾಲದ ದಿವಾಕರ ಬಾಬು ಅವರಿಂದ ಹಿಡಿದು ಮೊನ್ನೆ ಮೊನ್ನೆ ವರೆಗಿನ ಜನಾರ್ದನ ರೆಡ್ಡಿ ವರೆಗಿನ ರಾಜಕೀಯದಲ್ಲಿ ವಾಕ್ಸಮರಕ್ಕೆ ಇಲ್ಲಿ ಹೆಚ್ಚು ಮಹತ್ವವಿದೆ.


ಆದ್ರೇ  ಕಳೆದೊಂದು ದಶಕದಿಂದ ವಾಕ್ಸಮರಕ್ಕೆ ಇಲ್ಲಿಯ ನಾಯಕರು ಒಂದಷ್ಟು ಬ್ರೇಕ್ ಹಾಕಿದ್ರು. ಆದ್ರೇ, ಮೊನ್ನೆ ಸನಾತನ ಧರ್ಮದ ವಿಚಾರವಾಗಿ ತಮಿಳುನಾಡಿನ ಸಚಿವ ಉದಯನಿಧಿ  ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಶ್ರೀರಾಮುಲು ಉತ್ತರ ಭಾರತದಲ್ಲಿ ರಾಹುಲ್ ಗಾಂಧಿ ಹೇಗೆ  ಪಪ್ಪು ರೀತಿಯಲ್ಲಿದ್ದಾರೋ ದಕ್ಷಿಣದಲ್ಲಿ ಉದಯನಿಧಿ ಕೂಡ ಒಬ್ಬ ಪಪ್ಪು ಎಂದ್ರು.  ಇವರಿಬ್ಬರಷ್ಟೇ ಅಲ್ಲ ಎಷ್ಟೇ ಜನ ಪಪ್ಪುಗಳು ಬಂದ್ರೂ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲುವ ಮೂಲಕ ಮೋದಿ ಪ್ರಧಾನಿಯಾಗ್ತಾರೆ ಎಂದ್ರು.


ಸೋತು ಸುಣ್ಣವಾಗಿರೋ ಬಿಜೆಪಿ ನಾಯಕರು ಪಾಠ ಹೇಳೋ ಅಗತ್ಯವಿಲ್ಲ: ಇನ್ನೂ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವ ಸಾಧಿಸಿರೋ ಸಚಿವ ನಾಗೇಂದ್ರ ಅವರು ಶ್ರೀರಾಮುಲು ಹೇಳಿಕೆಗೆ ಒಂದಷ್ಟು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀರಾಮುಲು ಅವರು ತಾವಷ್ಟೇ ಸೋತಿರದಲ್ಲದೇ ಅಲ್ಲ. ಇಡೀ ಜಿಲ್ಲೆಯಲ್ಲಿ ಬಿಜೆಪಿಯ ಕ್ಷೇತ್ರಗಳನ್ನು ಕಳೆದುಕೊಂಡಿದ್ದಾರೆ. ಜಿಲ್ಲೆಯ ಐದು ಕ್ಷೇತ್ರದ ಪೈಕಿ ಒಂದರಲ್ಲೂ ಅವರು ಗೆದ್ದಿಲ್ಲ. ಇನ್ನೂ ಲೋಕಸಭೆ ಚುನಾವಣೆಯಲ್ಲೂ ಸೋಲ್ತಾರೆ ಆ ಬಳಿಕ ಯಾರು ಪಪ್ಪು ಎಂದು ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಮೊನ್ನೆ ಚುನಾವಣೆಯಲ್ಲಿ ಅವರ ಡಿಪಾಸಿಟ್ ಕಳೆಯುತ್ತಿದ್ದೇವೆ ಪ್ರಜಾಪ್ರಭುತ್ವದಲ್ಲಿ ನಮಗೂ ವಿರೋಧಿಗಳು ಇರಲಿ ಎಂದು ಬಿಟ್ಡಿದ್ದೇವೆ ಎಂದಿದ್ದಾರೆ

Previous Post Next Post

Contact Form

f="https://unpkg.com/video.js/dist/video-js.css" rel="stylesheet">