ಬ್ರೇಕಿಂಗ್ ನ್ಯೂಸ್
ಗಂಗಾವತಿ : ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಿಕ್ಕ ಜಂತಕಲ್ ಬಳಿ ಕಾಲುವೆಯ ಸೇತುವೆ ಮೇಲೆ ಏರಿದ ಬೃಹತ್ ಲಾರಿ.
ಕಂಪ್ಲಿ- ಗಂಗಾವತಿ ಮಾರ್ಗವಾಗಿ ಹೋಗುತ್ತಿದ್ದ ಲಾರಿ ಸಂಜೆ ಸುಮಾರು 7:30ಕ್ಕೆ ಕೆಎಸ್ ಆರ್ ಟಿಸಿ ಬಸ್ ಗೆ ದಾರಿ ನೀಡುವಲ್ಲಿ ಕಾಲುವೆಯ ಸೇತುವೆ ಮೇಲೆ ಏರಿಸಿದ್ದು ಕೊಂಚ ಕಾಲ ಫುಲ್ ಟ್ರಾಫಿಕ್ ಆಗಿತ್ತು. ಇನ್ನೂ ಬಸ್ ನಲ್ಲಿದ್ದ ಪ್ರಯಾಣಿಕರು ಆಟೋಗಳಲ್ಲಿ ಕಂಪ್ಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಸ್ಥಳೀಯರು ತಿಳಿಸಿದ್ದಾರೆ .
ಲಾರಿಯ ಅಪಘಾತವಾಗಿದ್ದು ಹೇಗೆ ..?
ಸ್ಥಳೀಯರು ತಿಳಿಸಿದ ಪ್ರಕಾರ : ಕೆಆರ್ ಟಿಸಿ ಬಸ್ ಮತ್ತು ಲಾರಿ ಮುಖಾಮುಖಿಯಾಗಿ ಸೇತುವೆ ಮೇಲೆ ಬಂದ ಕಾರಣ ಲಾರಿ ಡ್ರೈವರ್ ಬಸ್ ಗೆ ದಾರಿ ಬಿಡಲು ಹೋಗಿ ಸೇತುವೆ ಮೇಲೆ ಹಾರಿಸಿದ್ದಾನೆ ಎಂದು ಚಿಕ್ಕ ಜಂತಕಲ್ ಸ್ಥಳೀಯರು ತಿಳಿಸಿದರು.
ಕಂಪ್ಲಿ ಮತ್ತು ಗಂಗಾವತಿ ಮಾರ್ಗದ ರಸ್ತೆಗಳು ಫುಲ್ ಟ್ರಾಫಿಕ್..!
ಲಾರಿ ಮತ್ತು ಬಸ್ ಘಟನೆ ನಡೆದು ಚಿಕ್ಕ ಜಂತಕಲ್ ನಲ್ಲಿ ಕಂಪ್ಲಿ ಮತ್ತು ಗಂಗಾವತಿ ಮಾರ್ಗದ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು, ಎಲ್ಲೆಡೆ ಟ್ರಾಫಿಕ್ ಆಗಿದ್ದು, ರಸ್ತೆಯ ಮೇಲೆ ವಾಹನಗಳು ನಿಂತು ಪ್ರಯಾಣಿಕರಿಗೆ ರಸ್ತೆ ದಾಟುವುದು ಅಸಾಧ್ಯವಾಗಿತ್ತು.
ಇನ್ನೂ ಘಟನೆ ಸ್ಥಳಕ್ಕೆ ಗಂಗಾವತಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬ್ಯೀರೋ ರೀಪೋರ್ಟ್, ಸಿದ್ದಿ ಟಿವಿ