Hospete: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು, ಎಲ್ಇಡಿ ಪರದೆಗೆ ಕಲ್ಲೆಸೆತ

 

ಹೊಸಪೇಟೆ : ವಿಶ್ವಕಪ್​ 2023 ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಆತಿಥೇಯ ತಂಡ ಭಾರತ ಸೋಲು ಅನುಭವಿಸಿತು. ಈ ಸೋಲನ್ನು ಅರಗಿಸಿಕೊಳ್ಳಲಾಗದೆ ಎಲ್​ಇಡಿ ಪರದೆಗೆ ಕಲ್ಲು ಎಸೆದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ (Hospet) ನಡೆದಿದೆ.

ಭಾರತ ತಂಡ ಮಾತ್ರವಲ್ಲ ಇಡೀ ಭಾರತೀಯರು ಕೂಡ ಮೂರನೇ ಬಾರಿ ವಿಶ್ವಕಪ್ ಅನ್ನು ತನ್ನದಾಗಿಸಿಕೊಳ್ಳುವ ಕನಸನ್ನು ಕಂಡಿದ್ದರು. ಇದೇ ಕಾರಣಕ್ಕೆ ಕರ್ನಾಟಕ ಕ್ರೀಡಾ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್​ಇಡಿ ಪರದೆಗಳನ್ನು ಅಳವಡಿಸಿ ಕ್ರಿಕೆಟ್ ನೇರಪ್ರಸಾರ ಮಾಡುವಂತೆ ಸೂಚಿಸಿತ್ತು.

ಅದರಂತೆ ಎಲ್ಲಾ ಜಿಲ್ಲಾಕ್ರೀಡಾಂಗಣಗಳಲ್ಲಿ ಎಲ್​ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಹೊಸಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನೆರೆದಿದ್ದ ನೂರಾರು ಮಂದಿ ಎಂಜಾಯ್ ಮಾಡುತ್ತಾ, ಚೀರುತ್ತಾ ಖುಷಿಪಡುತ್ತಿದ್ದಾರೆ. ಆದರೆ ಭಾರತಕ್ಕೆ ಸೋಲಾಗಿರುವುದು ಕೋಟ್ಯಾಂತರ ದೇಶವಾಸಿಗಳ ಕನಸು ನುಚ್ಚು ನೂರಾಗಿದೆ. ಈ ಸೋಲನ್ನು ಸಹಿಸಿಕೊಳ್ಳದೇ‌ ಕೊನೆಯ ಓವರ್ ವೇಳೆ ಕಿಡಿಗೇಡಿಗಳು ಎಲ್​ಇಡಿ ಪರದೆಗೆ​ ಕಲ್ಲು ಎಸೆದಿದ್ದಾರೆ.


Previous Post Next Post

Contact Form

f="https://unpkg.com/video.js/dist/video-js.css" rel="stylesheet">