Doddaballapura : ೬ ತಿಂಗಳಲ್ಲಿ ೩೪ ಮಂದಿಗೆ ರೌಡಿ ಪಟ್ಟದಿಂದ ಬಿಡುಗಡೆ

 

೬ ತಿಂಗಳಲ್ಲಿ ೩೪ ಮಂದಿಗೆ ರೌಡಿ ಪಟ್ಟದಿಂದ ಬಿಡುಗಡೆ.
ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಸಿಗಲ್ಲ.
ರೌಡಿಶೀಟರ್ ಗಳಿಗೆ ಡಿವೈಎಸ್ಪಿ ಪಿ. ರವಿ ಖಡಕ್ ಎಚ್ಚರಿಕೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪರೇಡ್

ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ. ನೆಮ್ಮದಿ ಕಳೆದುಕೊಂಡು, ಕುಟಂಬದಿಂದ ದೂರಾವಾಗಿ ಭಯಭೀತಿಯಲ್ಲಿ ಜೀವನ ಮಾಡಬೇಕಷ್ಟೇ. ಹೀಗಾಗಿ ಅಕ್ರಮ, ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣವಾಗಿ ತ್ಯಜೀಸಬೇಕು ಎಂದು ಡಿವೈಎಸ್ಪಿ ಪಿ.ರವಿ ತಿಳಿಸಿದರು.

ನಗರದ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೌಡಿ ಶೀಟರ್ ಗಳ ಪರೇಡ್ ನಲ್ಲಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ರೌಡಿಯಿಸಂ ಜೀವನವನ್ನು ಹಾಳು ಮಾಡುವುದಲ್ಲದೆ ಜೀವನ ಪರ್ಯಂತ ರೌಡಿಶೀಟರ್ ಪಟ್ಟ ಕಟ್ಟಿಕೊಂಡು ಬದುಕಬೇಕಾಗುತ್ತದೆ. ಆದರೆ ನೆಮ್ಮದಿ ಜೀವನಕ್ಕಾಗಿ ಕೂಲಿ ಕೆಲಸ ಮಾಡಿದರೂ ಪರವಾಗಿಲ್ಲ ಕುಟುಂಬದೊಂದಿಗೆ ಖುಷಿಯಿಂದ ಜೀವನ ಸಾಗಿಸಬಹುದು. ರೌಡಿ ಚಟುವಟಿಕೆ, ಕಾನೂನು ಬಾಹಿರ ಕೆಲಸಗಳು
ಹೀಗೆ ಮುಂದುವರೆದರೆ ಜಿಲ್ಲೆಯಿಂದಲೇ ಗಡಿಪಾರು ಮಾಡಲಾಗುವುದು. ಹತ್ತು, ಇಪ್ಪತ್ತು ವರ್ಷಗಳಾದರೂ ರೌಡಿಶೀಟರ್ ಪಟ್ಟ ಹೋಗುವುದಿಲ್ಲ. ಕಳ್ಳತನ, ಕೊಲೆ, ದೌರ್ಜನ್ಯ ಮಾಡಿದರೆ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕಾನೂನು ಬಿಗಿಯಾಗಿದೆ. ಕುಟುಂಸ್ಥರು ಗೌರವ ನೀಡುವಷ್ಟು ರೀತಿಯಲ್ಲಿಯಾದರೂ ಜೀವನ ಮಾಡಿ. ಪೊಲೀಸರಿಗೆ ತಿಳಿಯದಂತೆ ಸ್ಥಳ, ಫೋನ್ ನಂಬರ್ ಬದಲಾವಣೆ ಮಾಡಬಾರದು. ಕಾನೂನಿಗೆ ಬೆಲೆ ಕೊಟ್ಟು ಸಮಾಜದಲ್ಲಿ ಒಳ್ಳೆಯವರಾಗಿ ಬದುಕಿ. ಮಾದರಿ ಜೀವನ ನಡೆಸಿದರೆ ರೌಡಿ ಶೀಟರ್ ಬಂದ್ ಮಾಡಲಾಗುವುದು ಎಂದರು.
ಗ್ರಾಮಾಂತರ ಠಾಣಾ‌ ಇನ್ಸ್ಪೆಕ್ಟರ್ ಮುನಿಕೃಷ್ಣ ಮಾತನಾಡಿ 
ಕಳೆದ ೬ ತಿಂಗಳಲ್ಲಿ ೭೮ ಮಂದಿ ರೌಡಿಶೀಟರ್ ಗಳಲ್ಲಿ ೩೪ ಮಂದಿಗೆ ರೌಡಿ ಪಟ್ಟದಿಂದ ಬಿಡುಗಡೆಗೊಳಿಸಲಾಗಿದೆ. ಉಳಿದ ೪೪ ಮಂದಿಯ ಜೀವನ ಶೈಲಿಯನ್ನು ಪರಾಮರ್ಶೆ ಮಾಡಲಾಗುತ್ತಿದೆ. ರೌಡಿಶೀಟರ್ ಗಳ ಜೀವನ ಶೈಲಿ ಸರಿ ಹೋದರೆ ಕೇವಲ ಎರಡು ತಿಂಗಳಲ್ಲಿ ರೌಡಿ ಶೀಟರ್ ಪಟ್ಟದಿಂದ ಮುಕ್ತಿಕಾಣಿಸಲಾಗುವುದು. ಮುಂದುವರೆದಿರೆ ಮತ್ತೊಂದು ಕೇಸ್ ಓಪನ್ ಆಗುತ್ತದೆ. ಎರಡ್ಮೂರು ತಿಂಗಳಿಗೆ ಮತ್ತೊಮ್ಮೆ ಪರಾಮರ್ಶೆ ಮಾಡಲಾಗುವುದು ಎಂದರು.

ದೊಡ್ಡಬಳ್ಳಾಪುರದ ಗ್ರಾಮಾಂತರ ಠಾಣಾ ಆವರಣದಲ್ಲಿ 
ಡಿವೈಎಸ್ಪಿ ಪಿ. ರವಿ ನೇತ್ವದಲ್ಲಿ ರೌಡಿಶೀಟರ್ ಗಳ ಪರೇಡ್ ನಡೆಯಿತಿ. ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಮುನಿಕೃಷ್ಣ, ಸಬ್ ಇನ್ಸ್ಪೆಕ್ಟರ್ ಗಳಾದ ಪಂಕಜ, ರೇವಣ್ಣ, ಸಿಬ್ಬಂದಿಗಳಾದ ನಾಗರಾಜಯ್ಯ, ರಂಗನಾಥ, ಅರ್ಜುನ್ ಲಮಾಣಿ, ಸಚಿನ್ ಮತ್ತಿತ್ತರರು ಇದ್ದರು.
Previous Post Next Post

Contact Form

f="https://unpkg.com/video.js/dist/video-js.css" rel="stylesheet">