ಜೆ ಸಿ ಐ ವಲಯ 24ರ ಉಪಾಧ್ಯಕ್ಷರಾಗಿ ಸಂತೋಷ್ ಕೊಟ್ರಪ್ಪ ಸೋಗಿ ಪ್ರಚಂಡ ಗೆಲುವು
ಸಿದ್ದಿ ಟಿವಿ, ಕಂಪ್ಲಿ :
ಜೆ ಸಿ ಐ ವಲಯ 24ರ ಉಪಾಧ್ಯಕ್ಷರಾಗಿ ಕಂಪ್ಲಿ ಸೋನಾದ ಪೂರ್ವ ಅಧ್ಯಕ್ಷರಾದ ಸಂತೋಷ್ ಕೊಟ್ರಪ್ಪ ಸೋಗಿ ಅವರು ಪ್ರಚಂಡ ಗೆಲುವಿನ ಮೂಲಕ ಆಯ್ಕೆಯಾಗಿದ್ದಾರೆ.
ಶಿವಮೊಗ್ಗದ ವೀರಶೈವ ಸಂಸ್ಕೃತಿಕ ಭವನದಲ್ಲಿ ನ.4 ಹಾಗೂ 5 ರಂದು ಹಮ್ಮಿಕೊಳ್ಳಲಾಗಿದ್ದ ಜೆಸಿಐ ವಲಯ 24ರ ವಾರ್ಷಿಕ ಸಮ್ಮೇಳನ ಕಾರ್ಯಕ್ರಮ ಜರುಗಿತು. ಇನ್ನು ಭಾನುವಾರ ಜೆಸಿಐ ವಲಯ 24ರ ಅಧ್ಯಕ್ಷ ಹಾಗೂ 4 ಸ್ಥಾನಗಳ ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆ ಚುನಾವಣೆ ನಡೆಯಿತು. ಈ ವೇಳೆ ಸಂತೋಷ್ ಕೊಟ್ರಪ್ಪ ಸೋಗಿ ಅವರು 157 ಮತಗಳನ್ನು ಪಡೆಯುವ ಮೂಲಕ ಪ್ರಥಮ ಹಂತದಲ್ಲಿ ಅಧಿಕ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಇನ್ನು ವಲಯ 24 ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಚೆನ್ನ ವಿರೇಶ್, ಉಳಿದ ಸ್ಥಾನಗಳಿಗೆ ಉಪಾಧ್ಯಕ್ಷರಾಗಿ ಸುಷ್ಮಾ ಬಿ. ಹಿರೇಮಠ್ ಶಿವಮೊಗ್ಗ, ಮುರುಳಿ ಬಿ. ಸುಳಿಬಾವಿ ರಾಮದುರ್ಗ, ಹಾಗೂ ರವಿ ಕುಮಾರ್ ಬಳ್ಳಾರಿ ಅವರು ಆಯ್ಕೆಗೊಂಡರು. ಬಳಿಕ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಪ್ರಮಾಣ ಪ್ರವಚನ ಬೋಧಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಜೆ ಸಿ ಐ ಕಂಪ್ಲಿ ಸೋನಾ ಘಟಕವು ವರ್ಷವಿಡೀ ನಡೆಸಿದ ಕಾರ್ಯಕ್ರಮದ ವಿವಿಧ ವಿಭಾಗಗಳಾದ ನಿರ್ವಹಣೆ, ತರಬೇತಿ, ಬೆಳವಣಿಗೆ ಹಾಗೂ ಅಭಿವೃದ್ಧಿ, ಪಬ್ಲಿಕ್ ರಿಲೇಷನ್ ಅಂಡ್ ಮಾರ್ಕೆಟಿಂಗ್, ವ್ಯವಹಾರಿಕ , ಮಹಿಳಾ ಮತ್ತು ಮತ್ತು ಮಕ್ಕಳು ವಿಭಾಗ ಸೇರಿದಂತೆ ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸಿ ತನ್ನದೇ ಆದ ಚಾಪನ್ನು ಮೂಡಿಸುವ ಮೂಲಕ ವಲಯದ ಪ್ರತಿಷ್ಟಿತ ಗೌರವ ಪುರಸ್ಕಾರವಾದ ಗೋಲ್ಡನ್ ಲೋಕಲ್ ಆರ್ಗನೈಸೇಷನ್ ಅವಾರ್ಡ್ ಮೂಡಿಗೆರಿಸಿಕೊಂಡಿತು. ಅಲ್ಲದೆ ವರ್ಷದ ಅತ್ಯುತ್ತಮ ನೂತನ ಜೆಸಿ ಸದಸ್ಯರಾಗಿ ಕೆ.ಎಂ.ಸಿದ್ದರಾಮೇಶ್ವರ್ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಟ್ರೋಫಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜೆಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ರಜಿತಾ ಮೇಡಂ ಚುನಾವಣಾ ಅಧಿಕಾರಿಯಾಗಿ ಹಾಗೂ ಚುನಾವಣೆ ಸಮಿತಿಯ ಅಧ್ಯಕ್ಷರಾಗಿ ಜೆಸಿ ಶಿವಕುಮಾರ್ ನಾಯಕ್ ಚುನಾವಣಾ ಸಮಿತಿ ಸದಸ್ಯರಾಗಿ ಜೆಸಿಐ ವಲಯ 24ರ ಪೂರ್ವ ಅಧ್ಯಕ್ಷರುಗಳಾದ ಸವಿತಾ ರಮೇಶ್, ವಿನಾಯಕ ಅರಮನೆ ಪ್ರಶಾಂತ್ ದೊಡ್ಮನೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ನಿಕಟಪೂರ್ವ ವಲಯ ಅಧ್ಯಕ್ಷರಾದ ಅನುಷ್ ಗೌಡ, ಜೆಸಿಐ ಅಂತರಾಷ್ಟ್ರೀಯ ಅಧಿಕಾರಿ ಸೆನೇಟರ್ ಅರವಿಂದ್ ಬುರೆಡ್ಡಿ, ವಲಯ ಪೂರ್ವ ಉಪಾಧ್ಯಕ್ಷರಾದ ಪ್ರಸಾದ್ ಗಡದ್, ಜೆಸಿಐ ಕಂಪ್ಲಿ ಸೋನಾದ ನಿಕಟ ಪೂರ್ವ ಅಧ್ಯಕ್ಷ ಮಂಜೇಶ್, ಕಾರ್ಯದರ್ಶಿ ಬಿ.ಎಚ್.ಎಂ.ಅಮರನಾಥ ಶಾಸ್ತ್ರಿ, ಪ್ರಮುಖರಾದ ಸಿದ್ದರಾಮೇಶ್ವರ ಶಾಸ್ತ್ರಿ ಸೇರಿದಂತೆ ಇತರರಿದ್ದರು.
ವಾರ್ಷಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಜೆಸಿಐ ಕಂಪ್ಲಿ ಸೋನಾದ ಕಾರ್ಯದರ್ಶಿ ಅಮರನಾಥ ಶಾಸ್ತ್ರಿ ಹಾಗೂ ಸದಸ್ಯ ಸಿದ್ದರಾಮೇಶ್ವರ್ ಅವರ ತಂಡದ ವತಿಯಿಂದ ಹಿರಣ್ಯ ಕಶ್ಯಪ ಸಂಹಾರ ಸನ್ನಿವೇಶದ ಕಿರು ನಾಟಕ ಪ್ರದರ್ಶನ ಜರುಗಿತು.
