Kampli : ಗ್ರಂಥಾಲಯಗಳಲ್ಲಿ ಉತ್ತಮ ಪುಸ್ತಕಗಳ ಸೌಲಭ್ಯ ಒದಗಿಸಿ


 ಗ್ರಂಥಾಲಯಗಳಲ್ಲಿ ಉತ್ತಮ ಪುಸ್ತಕಗಳ ಸೌಲಭ್ಯ ಒದಗಿಸಿ.

ಕಂಪ್ಲಿ : 

     ಕರ್ನಾಟಕ ರಾಜ್ಯ ಶ್ರೀ ಮಾದಾರ ಚೆನ್ನಯ್ಯ ಸಂಘಟನೆ, ಕಂಪ್ಲಿ ಘಟಕದ ವತಿಯಿಂದ ತಾಲೂಕು ಪಂಚಾಯಿತಿ ಕಂಪ್ಲಿಯ ಸಹಾಯಕ ನಿರ್ದೇಶಕರಾದ ಶ್ರೀ ಮಲ್ಲನಗೌಡ ರವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

 ಕರ್ನಾಟಕ ರಾಜ್ಯ ಶ್ರೀ ಮಾದಾರ ಚನ್ನಯ್ಯ ಸಂಘಟನೆ, ಕಂಪ್ಲಿ ಘಟಕದ ಅಧ್ಯಕ್ಷರಾದ ಹೆಚ್ ತಿಪ್ಪೇಸ್ವಾಮಿ ರವರು ಮಾತಾನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ದಾರ್ಶನಿಕರು ಮತ್ತು ಮಹಾನ್ ನಾಯಕರುಗಳಾದ ಗೌತಮಬುದ್ಧ, ಭಕ್ತಿ ಬಂಡಾರಿ ಬಸವಣ್ಣ, ಕನಕದಾಸರು, ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕ‌ರವರ ಸಮಗ್ರ ಬರಹಗಳು ಮತ್ತು ಭಾಷಣಗಳ 22 ಪುಸ್ತಕಗಳು, ಸಂಪಾದಕ ಪ್ರೋ.ಎನ್.ಆರ್.ಶಿವರಾಮ, ಪೆರಿಯಾರ್ ರಾಮಸ್ವಾಮಿ, ಶ್ರೀ ವಾಲ್ಮೀಕಿ, ಮಾಕ್ಸ್‌ವಾದ, ಲೆನಿನ್, ಲೋಹಿಯಾ ದೇವನೂರು ಮಹಾದೇವಪ್ಪ, ಅಕ್ಕಮಹಾದೇವಿಯ ವಚನಗಳು, ಸ್ವಾಮಿವಿವೇಕಾನಂದ, ದಲಿತಕವಿ ಸಿದ್ದಲಿಂಗಯ್ಯ, ಅಶೋಕ ಸಾಮ್ರಾಟ್, ಪ್ರೋ.ಬಿ.ಕೃಷ್ಣಪ್ಪ, ರಾಷ್ಟ್ರಕವಿ ಕುವೆಂಪು, ಬಾಬು ಜಗಜೀವನ್‌ರಾವ್, ಎ.ಪಿ.ಜಿ.ಅಬ್ದುಲ್ ಕಲಾಂ, ಜ್ಯೋತಿ ಬಾಪುಲೆ, ಅಕ್ಷರದ ಅವ್ವ ಸಾವಿತ್ರಿ ಬಾಪುಲೆ, ಮಧರ್‌ ಥೆರಿಸಾ ಇನ್ನೂ ಅನೇಕ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಮತ್ತು ಅವರು ಬರೆದಿರುವ ವಚನಗಳು, ಕಾವ್ಯಗಳ ಪುಸ್ತಕಗಳನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐ.ಎ.ಎಸ್. ಯು.ಪಿ.ಎಸ್, ಕೆ.ಎ.ಎಸ್ ಪುಸ್ತಕಗಳು, ಮತ್ತು ಮುರಾರ್ಜಿ ವಸತಿ ಶಾಲೆಗಳ 6ನೇ ತರಗತಿ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಗಳಿಗೆ ಪುಸ್ತಕಗಳನ್ನು ಎಲ್ಲಾ ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಒದಗಿಸಿಕೊಡವ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ನಂತರ ಗೌರವ ಅಧ್ಯಕ್ಷ ಹೆಚ್ ಪಂಪಾಪತಿ ಮಾತಾನಾಡಿ, ಗ್ರಾಮೀಣ ಭಾಗದ ಗ್ರಂಥಾಲಯಗಳಲ್ಲಿ ಓದುಗರ ಸಂಖ್ಯೆ ಹೆಚ್ಚಾಗಿರುವುದರಿಂದ ಅತ್ಯತ್ತಮ ಪುಸ್ತಕಗಳನ್ನು ಓದುವುದರಿಂದ ಓದುಗರಿಗೆ, ಸಂಪತ್ತು ಜ್ಞಾನ ಬಂಡಾರ, ಏಕಾಗ್ರತೆ, ಆಲೋಚನಾ ಶಕ್ತಿ, ಗ್ರಹಿಕ ಶಕ್ತಿ, ಕಲ್ಪನಾ ಶಕ್ತಿ, ಶಬ್ದ ಕೋಶದ ಸಂಪನ್ನ ಓದುಗರರಲ್ಲಿ ಹೆಚ್ಚಿಸಲು ಈ ಪುಸ್ತಕಗಳು ಸಹಾಯಕವಾಗಿವೆ. ಆದ್ದರಿಂದ ತಾವುಗಳು ನಮ್ಮ ಮನವಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಹಾಗೂ ಪರಿಶೀಲಿಸಿ ಕಂಪ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮೀಣ ಪ್ರದೇಶದ ಸಾರ್ವಜನಿಕ ಗ್ರಂಥಾಲಯಗಳಿಗೆ ಈ ಮಹಾನ್ ನಾಯಕರಗಳ ಪುಸ್ತಕಗಳನ್ನು ತಮ್ಮ ಇಲಾಖೆಯಿಂದ ಅನುಕೂಲ ಮಾಡಿಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಶ್ರೀ ಮಲ್ಲನ ಗೌಡ, ಶ್ರೀ ಮಾದಾರ ಚೆನ್ನಯ್ಯ ಸಂಘದ ತಾಲೂಕು ಘಟಕದ ಉಪಾಧ್ಯಕ್ಷ ಹೆಚ್. ಮರಿಯಪ್ಪ ಮತ್ತು ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹೆಚ್ ಗೋಪಿನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">