PSI ಮರುಪರೀಕ್ಷೆಯನ್ನ ಮುಂದೂಡಿ ನಿರುಪಾದಿ ಕೆ ಗೋಮರ್ಸಿ ಆಗ್ರಹ


PSI ಮರುಪರೀಕ್ಷೆಯನ್ನ ಮುಂದೂಡಿ ನಿರುಪಾದಿ ಕೆ ಗೋಮರ್ಸಿ ಆಗ್ರಹ

545 ಪಿ ಎಸ್ ಐ ಪರೀಕ್ಷಾ ದಿನಾಂಕ ಮುಂದೂಡಿ ನಿರುಪಾದಿ ಕೆ ಗೋಮರ್ಸಿ ಆಗ್ರಹ. ಅಕ್ಟೋಬರ್ 2021 ರಂದು 545 ಪಿ ಎಸ್ ಐ ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ನ್ಯಾಯಾಲಯವು ವಿಚಾರಣೆ ನಡೆಸಿ 54000 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಿದೆ ಕರ್ನಾಟಕ ಸರ್ಕಾರವು  KEA ಗೆ ಪರೀಕ್ಷೆ ನಡೆಸುವ ಹೊಣೆಯನ್ನು ನೀಡಿರುತ್ತದೆ.KEA ತರಾತುರಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದು 2023 ಡಿಸೆಂಬರ್ 23 ರಂದು ಪರೀಕ್ಷೆ ನಡೆಸುವುದಾಗಿ ಪ್ರಕಟಣೆ ಹೊರಡಿಸಿದೆ. ಬಹುತೇಕ ವಿದ್ಯಾರ್ಥಿಗಳು ಬಡ ಹಾಗೂ ಗ್ರಾಮೀಣ ಭಾಗದವರರಾಗಿದ್ದು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಜೀವನೋಪಾಯಕ್ಕಾಗಿ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿದ್ದು ತರಾತುರಿಯಲ್ಲಿ ಪರೀಕ್ಷೆಗೆ ಸಿದ್ದರಾಗಲು ಕಷ್ಟವಾಗುತ್ತದೆ. ಆ ಕಾರಣದಿಂದಾಗಿ ತಾವುಗಳು KEA ಗೆ ಪರೀಕ್ಷೆಯನ್ನು ಮುಂದೂಡುವಂತೆ ತಿಳಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ,ಗೃಹ ಮಂತ್ರಿಗಳು ಹಾಗೂ ನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರಿಗೆ  ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರಿ ನಿರುಪಾದಿ ಕೆ ಗೋಮರ್ಸಿ ಅವರು ತಿಳಿಸಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">