Crime : ಸುಮಾರು ಎರಡು ವರ್ಷ ಹಳೆಯ ಕೊಲೆ ಪ್ರಕರಣ ಪತ್ತೆ

 ಸುಮಾರು ಎರಡು ವರ್ಷ ಹಳೆಯ ಕೊಲೆ ಪ್ರಕರಣ ಪತ್ತೆ

ಜಮಖಂಡಿ : ದಿನಾಂಕ 17-02-2022 ರಂದು ಜಮಖಂಡಿ ತಾಲೂಕಿನ ಜಂಬಗಿ ರಸ್ತೆಗೆ ಇರುವ ನಗರಸಭೆಯ ಕಸ ಸಂಗ್ರಹ ಘಟಕದ ಹತ್ತಿರ ರಸ್ತೆ ಮಗ್ಗಲು ಒಂದು ಅನಾಮದೇಯ ಗಂಡಸು ವಯಾ 15-41 ವರ್ಷ ಈತನ ಶವ ದೊರೆತಿದ್ದು ಮೃತನ ಕುತ್ತಿಗೆಯ ಮೇಲೆ ಕಂದುಗಟ್ಟಿದ ಮಾರ್ಕ ಇರುವದರಿಂದ ಜಮಖಂಡಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ: 148/2023 ಕಲಂ: 302, 201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 ಅಮರನಾಥ ರೆಡ್ಡಿ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಬಾಗಲಕೋಟಿ, ಶ್ರೀ ಪ್ರಸನ್ ದೇಸಾಯಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಾಗಲಕೋಟಿ ಹಾಗೂ ಶ್ರೀ ಶಾಂತವೀರ ಈ. ಪೊಲೀಸ ಉಪವಿಭಾಗಾಧಿಕಾರಿಗಳು ಜಮಖಂಡಿ ರವರ ಮಾರ್ಗದರ್ಶನದಲ್ಲಿ ಶ್ರೀ ಎಮ್.ಡಿ.ಮಡ್ಡಿ ಸಿಪಿಐ ಜಮಖಂಡಿ ರವರು ಈ ಪ್ರಕರಣದಲ್ಲಿಯ ಅನಾಮದೇಯ ಶವದ ವಾರಸುದಾರರ ಪತ್ತೆ ಕುರಿತು ವಿವಿದ ಆಯಾಮಗಳಲ್ಲಿ ತನಿಖೆ ಮಾಡಿ ಪತ್ತೆಯಾಗದೇ ಇರುವ ಕಾಣೆಯಾದ ಪ್ರಕರಣಗಳನ್ನು ಪರಿಶೀಲಿಸುತ್ತಿರುವಾಗ ಬನಹಟ್ಟಿ ಪೊಲೀಸ ಠಾಣೆ ಗುನ್ನೆ ನಂ: 116/2022 ಕಲಂ: ಮನುಷ್ಯ ಕಾಣೆ ಪ್ರಕರಣದಲ್ಲಿ ಕಾಣೆಯಾದ ವ್ಯಕ್ತಿಗೆ ಸ್ವಲ್ಪ ಹೋಲಿಕೆ ಆದಂತೆ ಕಂಡುಬಂದಿದ್ದರಿಂದ ಕಾಣೆಯಾದ ವ್ಯಕ್ತಿಯ ಸಹೋದರನಿಗೆ ಕರೆಯಿಸಿ ಇದರಲ್ಲಿಯ ಮೃತನ ಫೋಟೊಗಳನ್ನು ತೋರಿಸಿದಾಗ ಮೃತನು ತನ್ನ ಸಹೋದರ ರವಿ ಮಹಾದೇವ ಚುನಮುರಿ ವಯಾ 41 ವರ್ಷ ಸಾ।। ರಾಂಪೂರ ತಾ।। ರಬಕವಿ-ಬನಹಟ್ಟಿ ಅಂತಾ ಗುರುತಿಸಿ, ರವಿ ಈತನು ಸನ್ 2022 ಫೆಬ್ರುವರಿ 16 ನೇ ತಾರಿಖಿನಂದು ಜಮಖಂಡಿ ಚೌಡಯ್ಯ ನಗರದಲ್ಲಿರುವ ತನ್ನ ಸೈಟನ್ನು ಮಾರಾಟಕ್ಕೆ ತೆಗೆದಿದ್ದು ಅದನ್ನು ತೋರಿಸಿ ಬರುವದಾಗಿ ಹೇಳಿ ಸಂಜೆವೇಳೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರಲಿಲ್ಲ. ಅತ್ತಿತ್ತ ಹುಡುಕಾಡಿ ಸನ್ 2022 ಡಿಸೆಂಬರ 4 ನೇ ತಾರಿಕಿನಂದು ಫಿರ್ಯಾದಿ ಕೊಟ್ಟಿದ್ದು ಇರುತ್ತದೆ. ರವಿ ಚುನಮುರಿ ಈತನ ಹೆಂಡತಿ ಗೌರಿ ಇವಳು ಗೋಕಾಕ ತಾಲೂಕಿನ ಈರನಟ್ಟಿ ಗ್ರಾಮದ ತನ್ನ ಮಾವ ಸತೀಶ ರಾಯಪ್ಪ ಮೂಶವ್ವಗೋಳ ಈತನೊಂದಿಗೆ ಹೆಚ್ಚಾಗಿ ಫೋನಿನಲ್ಲಿ ಮಾತನಾಡುತ್ತಿದ್ದು ಇದೇ ವಿಚಾರಕ್ಕಾಗಿ ತನ್ನ ಅಣ್ಣ ಮೇಲಿಂದ ಮೇಲೆ ತನ್ನ ಹೆಂಡತಿಯೊಂದಿಗೆ ಜಗಳಾ ಮಾಡಿಕೊಂಡಿದ್ದು ಇವರೇ ತನ್ನ ಅಣ್ಣನಿಗೆ ಕೊಲೆ ಮಾಡಿರುವದಾಗಿ ಸಂಶಯ ವ್ಯಕ್ತಪಡಿಸಿದ್ದರಿಂದ ಇಂದು ದಿನಾಂಕ 02-12-2023 ರಂದು ಸತೀಶ ಮೂಶವ್ಯಗೋಳ ಈತನಿಗೆ ಹಿಡಿದು ವಿಚಾರಣೆಗೆ ಗುರಿಪಡಿಸಿದಾಗ ತಾನು ಗೌರಿ ಇವಳೊಂದಿಗೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದು ಇದೇ ವಿಚಾರಕ್ಕಾಗಿ ರವಿ ಚುನಮುರಿ ಈತನು ಆಗಾಗಾ ತನ್ನ ಹೆಂಡತಿಯೊಂದಿಗೆ ಜಗಳಾ ಮಾಡುತ್ತಿದ್ದನು. ಗೌರಿ ಇವಳು ಆಗಾಗ ಫೋನ ಮಾಡಿ ತನ್ನ ಗಂಡ ತುಂಬಾ ತೊಂದರೆ ಕೊಡುತ್ತಿದ್ದಾನೆ ಅವನಿಗೆ ಏನಾದರು ಮಾಡಿ ಮುಗಿಸಿಬಿಡು ಅಂತಾ ಹೇಳಿದ್ದರಿಂದ ತನ್ನ ಹತ್ತಿರ ಪೆಂಡಾಲ ಕೆಲಸ ಮಾಡುವ 1) ಬಸವರಾಜ ಬಸವಣ್ಣೆಪ್ಪ ವಾಲಿ ಸಾ॥ ಈರನಟ್ಟಿ 2) ಪಾಂಡುರಂಗ ಕಲ್ಲಪ್ಪ ಖಾನಾಪೂರಿ ಸಾ|| ಈರನಟ್ಟಿ 3) ದೇವರಾಜ ಬಸವರಾಜ ಸನದಿ ಸಾ|| ಕಬಲಾಪೂರ ಇವರೊಂದಿಗೆ ಕೂಡಿ ರವಿ ಚುನಮುರಿ ಈತನಿಗೆ ಕೊಲೆ ಮಾಡಬೇಕು ಅಂತಾ ನಿರ್ದರಿಸಿ ದಿನಾಂಕ 16-02-2022 ರಂದು ಸಾಯಂಕಾಲ ತಾವು ನಾಲ್ಕೂ ಜನರು ಕೂಡಿ ರವಿ ಚುನಮುರಿ ಈತನಿಗೆ ಪ್ಲಾಟಿ ತೋರಿಸಬಾ ಅಂತಾ ತಮ್ಮ ಕಾರಿನಲ್ಲಿ ಕೂಡ್ರಿಸಿಕೊಂಡು ಜಮಖಂಡಿಗೆ ಬರುವಾಗ ರಾತ್ರಿ 9 ಗಂಟೆ ಸುಮಾರಿಗೆ ಮದರಖಂಡಿ ಗ್ರಾಮದ ಕೆಂಪುಕೆರೆಯ ಹತ್ತಿರ ಕಾರನಿಲ್ಲಿಸಿ ಅವನಿಗೆ  ಕೊಲೆ ಮಾಡಿ ಶವವನ್ನು ಜಂಬಗಿ ರಸ್ತೆ ಮಗ್ಗಲು ಒಗೆದು ಹೋಗಿರುವದಾಗಿ ಒಪ್ಪಿಕೊಂಡಿರುತ್ತಾನೆ. ಆರೋಪಿತರಾದ 1) ಸತೀಶ ರಾಯಪ್ಪ ಮೂಕವ್ವಗೋಳ ವಯಾ 31 ವರ್ಷ ಸಾ|| ಈರನಟ್ಟಿ ತಾ।। ಗೋಕಾಕ

2) ಗರಿ ಗಂಡ ರವಿ ಕುನಮುರಿ ವಯ 35 ವಣಿ ನಾ॥ ರಾಂಡೂರ್ ರಕ್ತಕವಿ ಬನೆಟ್ಸ್ ಗೋಕಾಕ್


1) ಬಸವರಾಜ ಬಸವಣ್ಣೆಪ್ಪ ವಾಲೆ ವಯ 14 ವರ್ಷ ಸಾ॥ ಈರನಟ್ಟಿ, ತಾ. ೪) ಪಾಂಡುರಂಗ ತಳ್ಳಪ್ಪ ಚೆನ್ನಾಗಿಮರಿ ವಯ ೫೫ ನ ನಿ ಈರಬೆಟ್ಟಿ ಈ ನಾಲ್ಕೂ ಜನ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ.

ಸುಮಾರು ಎರಡು ವರ್ಷ ಹಳೆಯದಾದ ಅನಾಮದೇಯ ಕೊಲೆ ಪ್ರಕರಣದಲ್ಲಿ ಮೃತನ ವಾರಸುದಾರರಿಗೆ ಹಾಗೂ ಆರೋಪಿತರಿಗೆ ಪತ್ತೆ ಮಾಡುವಲ್ಲಿ ಅತ್ಯಂತ ಚಾಣಾಕ್ಷತನದಿಂದ ಕರ್ತವ್ಯ ನಿರ್ವಹಿಸಿದ ಶ್ರೀ ಎಮ್.ಡಿ.ಮಡ್ಡಿ ಸಿಪಿಐ ಜಮಖಂಡಿ, ಶ್ರೀ ಮಹೇಶ ಸಂಖ ಪಿ.ಎಸ್.ಐ (ಕಾ&ಸೂ), ಶ್ರೀ ಎಚ್.ಎಮ್.ಹೊಸಮನಿ ಪಿ.ಎಸ್.ಐ (ಕ್ರೈಂ), ಶ್ರೀ ಬಿ.ಎಮ್.ಕುಂಬಾರ ಎ.ಎಸ್.ಐ ಹಾಗೂ ಸಿಬ್ಬಂದಿ ಜನರಾದ ಎಸ್.ಎಸ್.ಗಾಣಗೇರ ಸಿಪಿಸಿ 1104, ಪಿ.ಎಚ್.ಘಾಟಗೆ ಸಿಪಿಸಿ 1594, ಎಸ್.ಬಿ.ಹನಗಂಡಿ ಸಿಪಿಸಿ 981, ಎಸ್.ಎಚ್.ಕೋಟಿ ಸಿ.ಎಚ್.ಸಿ 1318, ಬಿ.ಪಿ.ಕುಸನಾಳೆ ಸಿ.ಎಚ್.ಸಿ 412, ಆರ್.ಎಚ್.ಪೂಜಾರಿ ಸಿಪಿಸಿ 918, ಪಿ.ಎಮ್.ಹೊಸಮನಿ ಸಿಪಿಸಿ 921. ಎಸ್.ಪಿ.ತುಪ್ಪದ ಸಿ.ಎಚ್.ಸಿ 424, ಬಿ.ಡಿ.ಕಾಂಬಳೆ ಸಿ.ಎಚ್.ಸಿ 419, ಐ.ಕೆ.ಕೋಕಳೆ ಸಿಪಿಸಿ 1658, ಎಸ್.ಐ.ಹುದ್ದಾರ ಎ.ಎಚ್.ಸಿ 184 ಇವರೆಲ್ಲರ ಕಾರ್ಯವೈಕರಿಯನ್ನು ಮಾನ್ಯ ಎಸ್.ಪಿ ಸಾಹೇಬರು ಬಾಗಲಕೋಟ ರವರು ಪ್ರಶಂಶಿಸಿದ್ದು ಇರುತ್ತದೆ.

Reported By :  Praveen, Siddi TV, Bagalkote

Previous Post Next Post

Contact Form

f="https://unpkg.com/video.js/dist/video-js.css" rel="stylesheet">