ಗದಗ :
ಪ್ರಾಣ ಬಲೆಗಾಗಿ ಕಾಯುತ್ತಿರುವ ಟಿ ಸಿ ಕಂಬ ಕ್ಯಾರೆ ಎನ್ನದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು
ಲಕ್ಷ್ಮೇಶ್ವರ: ಶಿರಹಟ್ಟಿಮತಕ್ಷೇತ್ರದ ಲಕ್ಷ್ಮೇಶ್ವರ ತಾಲೂಕಿನ ಸೌಲಭ್ಯ ವಂಚಿತ ಕಡೆ ಹಳ್ಳಿಯಾದ ಯತ್ತಿನಹಳ್ಳಿ ಗ್ರಾಮದಲ್ಲಿ ಬಾಗಿ ಬೀಳುವ ಟಿ ಸಿ ಕಂಬ ಬೇರೆಡೆ ಸ್ಥಳಾಂತರಸದೆ ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಹೆಸ್ಕಾಂ ಅಧಿಕಾರಿಗಳು
ಗ್ರಾಮಾಂತರ ಸೆಕ್ಷನ್ ಅಧಿಕಾರಿ ಜಾಣ ಕುರುಡತನದಲ್ಲಿದ್ದಾರೆ ವಿದ್ಯುತ್ ಟಿಸಿ ಕಂಬಗಳನ್ನು ಬೇರೆ ಸ್ಥಳಅಂತರಿಸಲು ಮೇಲಧಿಕಾರಿಗಳನ್ನು ಪ್ರಶ್ನೆ ಮಾಡಿದಾಗ ಎಸ್ಟಿಮೆಂಟ ಮಾಡಿ ಕಳಿಸಿದ್ದೇವೆ
ಇನ್ನು ಅಫ್ರು ಲಾಗಿ ಬಂದಿಲ್ಲ ಸ್ಯಾಂಕ್ಷನ್ ಆಗಿ ಬಂದ ತಕ್ಷಣ ಬೇರೆ ಕಡೆ ಶಿಫ್ಟ್ ಮಾಡುತ್ತೇವೆ ಎಂದು ಕುಂಟುನೆಪದಿಂದ ಜಾರಿಕೊಳ್ಳುತ್ತಿದ್ದ ಅಧಿಕಾರಿಗಳು ಹೆಸ್ಕಾಂ ಅಧಿಕಾರಿಗೆ ಫೋನ್ ಮಾಡಿ ಕೇಳಿದಾಗ ಇದುವರೆಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಿರುವುದು ಎದ್ದು ಕಾಣುತ್ತಿದೆ ಪದೇ ಪದೇ ಪ್ರಶ್ನೆ ಮಾಡಿದಾಗ ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದು ಹೇಳಿ ಸರಿಪಡಿಸದೆ ಹಾಗೆ ಉಳಿದಿರುವ ಟಿಸಿ ಕಂಬ ಅಪಾಯದ ಮಟ್ಟ ಮೀರಿ ನಿಂತಿದೆ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ
ಸಂಬಂಧ ಪಟ್ಟ ಅಧಿಕಾರಿಗಳ ನಿರ್ಲಕ್ಷ ಏನಾದರೂ ಅನಾಹುತ ಆದಲ್ಲಿ ನೇರ ಹೊಣೆಗಾರಿಕೆ ಹೆಸ್ಕಾಂ ಅಧಿಕಾರಿಗಳು ಎಂದು ಸಾರ್ವಜನಿಕರು ಆಕ್ರೋಶದಿಂದ ಮಾತನಾಡುತ್ತಿದ್ದರು.
ಈ ಹಿಂದೆ ದೃಶ್ಯ ಮಾಧ್ಯಮಗಳಲ್ಲಿ ಬಂದರು ಸಹ ಕ್ಯಾರೆ ಎನ್ನದ ಅಧಿಕಾರಿಗಳು
ಶಾಸಕರ ಗಮನಕ್ಕೆ ತಂದರು ಸಹಇದುವರೆಗೆ ಯಾವುದೇ ಪ್ರಯೋಜನವೂ ಆಗಿಲ್ಲ
ಶಾಸಕರೇ ಇನ್ನಾದರೂ ಈ ಕಡೆಗೆ ಗಮನ ಹರಿಸಿ ಈ ಒಂದು ಅಪಾಯದ ಮಟ್ಟ ಮೀರಿ ನಿಂತಿರುವ ಟಿ ಸಿ ಕಂಬವನ್ನು ಸರಿಪಡಿಸಿ ಜನರ ವಿಶ್ವಾಸ ಉಳಿಸಿಕೊಳ್ಳುತ್ತಾರೋ ಎಂದು ಕಾದು ನೋಡಬೇಕಾಗಿದೆ
ವರದಿ: ವೀರೇಶ್ ಗುಗ್ಗರಿ
Tags
ರಾಜಕೀಯ
.jpeg)
