ಕೊಪ್ಪಳ ಜಿಲ್ಲೆ, ಗಂಗಾವತಿ ನಗರದ ವ್ಯಾಪ್ತಿಗೆ ಬರತಕ್ಕಂತಹ ಜಂಗಮರ ಕಲ್ಗುಡಿ ಗ್ರಾಮದಲ್ಲಿರುವ ಮಲ್ಲಪ್ಪ ಎನ್ನುವರ ಮನೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ 07/12/2023ರಂದು ಸಂಜೆ 4:00 ಗಂಟೆಗೆ ಜಂಗಮರ ಕಲ್ಗುಡಿಯಲ್ಲಿರುವ ಮಲ್ಲಪ್ಪ ಎನ್ನುವರ ಮನೆಗೆ ಅಧಿಕಾರಿಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ರಾಜ್ಯಾಧ್ಯಕ್ಷರು ಭೇಟಿ ನೀಡಿದ್ದರು. ಆದರೆ
ಆ ಸಂದರ್ಭದಲ್ಲಿ ಮನೆಗೆ ಬೀಗ ಹಾಕಿದ್ದರಿಂದ ಮಲ್ಲಪ್ಪ ಎನ್ನುವರ ಮೊಬೈಲ್ ನಂಬರ್ ಗೆ ಅಧಿಕಾರಿಗಳು ಸಂಪರ್ಕಿಸಿದ್ದಾರೆ.
ಆದರೆ ಮಲ್ಲಪ್ಪ ಎನ್ನುವರು ಅಧಿಕಾರಿಗಳ ಕರೆಯನ್ನು ಸ್ವೀಕರಿಸಲಿಲ್ಲ ಆದಕಾರಣ ಅಧಿಕಾರಿಗಳಿಗೆ ಮನೆಯನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ ಸದ್ಯಕ್ಕೆ ಮನೆಯನ್ನು ಅಧಿಕಾರಿಗಳ ನೇತೃತ್ವದಲ್ಲಿ ಸೀಲ್ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಶಿರಸ್ತೇದಾರ್ ಸುಹಾಸ್ ಯೇರ್ರಿಸಿಮಿ. ಎ.ಎಸ್.ಐ ಪ್ರಕಾಶ್.ವಿಲೇಜ್ ಅಕೌಂಟೆಂಟ್ ಮತ್ತು ಸ್ಥಳೀಯರ ಸಮ್ಮುಖದಲ್ಲಿ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಮತ್ತು ಮಲ್ಲಪ್ಪ ಎನ್ನುವವರಿಗೆ ಅಧಿಕಾರಿಗಳ ಸಮಕ್ಷಮದಲ್ಲಿ ಬೀಗ ತೆರೆಯಲು ಸೂಚಿಸಿದ್ದಾರೆ.
ಈ ನೋಟಿಸ್ ನೋಡಿಯೂ ಸಹ ಮನೆಯ ಬೀಗವನ್ನು ತೆರೆಯದಿದ್ದಲ್ಲಿ 48 ಗಂಟೆಯ ನಂತರ ಪಂಚರ ಸಮಕ್ಷಮದಲ್ಲಿ ಮನೆಯ ಬೀಗವನ್ನು ಒಡೆಯಬೇಕಾಗುತ್ತದೆ ಎಂದು ನೋಟಿಸ್ ಮುಖಾಂತರ ಅಧಿಕಾರಿಗಳು. ಮಾಹಿತಿ ತಿಳಿಸಿದ್ದಾರೆ.

