Kampli : ಸಾಹಿತಿ ವಿದ್ಯಾಲಯದಲ್ಲಿ ಗಣಿತ ಪ್ರದರ್ಶನ ಕಾರ್ಯಕ್ರಮ


ಪಟ್ಟಣದ ಸಾಹಿತಿ ವಿದ್ಯಾಲಯದಲ್ಲಿ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗಣಿತ ಪ್ರದರ್ಶನ ಕಾರ್ಯಕ್ರಮ ಗುರುವಾರ ಜರುಗಿತು.

 ಸಾಹಿತಿ ವಿದ್ಯಾಲಯದ ಮುಖ್ಯಸ್ಥರಾದ ಆರ್.ಸ್ವಪ್ನ ಉದಯ ಶಂಕರ್ ಮಾತನಾಡಿ  ಪ್ರತಿನಿತ್ಯ ಮನುಷ್ಯನ ಜೀವನದಲ್ಲಿ ಗಣಿತ ಒಂದಲ್ಲ ಒಂದು ರೂಪದಲ್ಲಿ ಬಳಕೆಯಾಗುತ್ತಲೇ ಇರುತ್ತದೆ, ಅದು ದೊಡ್ಡ ಮಟ್ಟದಲ್ಲಿರಬಹುದು, ಇಲ್ಲವೇ ಸಣ್ಣ ಮಟ್ಟದಲ್ಲಿರಬಹುದು, ಲೆಕ್ಕಕ್ಕೂ-ಮನುಷ್ಯ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ದಿನವು ನಮ್ಮ ಜೀವನದಲ್ಲಿ ಗಣಿತದ ಪ್ರಾಮುಖ್ಯತೆಯನ್ನು ಗುರುತಿಸುವುದು, ಸ್ವಯಂ-ಕಲಿಕೆ ಮತ್ತು ತಾರ್ಕಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಜನರನ್ನು ಪ್ರೋತ್ಸಾಹಿಸುವುದು ಈ ದಿನದ ಮಹತ್ವವಾಗಿದೆ.

ಮಾನವೀಯತೆಯ ಬೆಳವಣಿಗೆ, ಗಣಿತದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸಹ 'ರಾಷ್ಟ್ರೀಯ ಗಣಿತ ದಿನ' ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರದ ಯುವ ಪೀಳಿಗೆಗೆ ಗಣಿತ ಕ್ಷೇತ್ರಕ್ಕೆ ಕೊಡುಗೆ ನೀಡಿದ ನಮ್ಮದೇ ದೇಶದ ಗಣಿತಜ್ಞ ಶ್ರೀನಿವಾಸ ರಾಮಾನುಜನರ್‌ ರವರ ಕೊಡುಗೆಗಳನ್ನು ತಿಳಿಸುವುದು, ಯುವ ಪೀಳಿಗೆಯಲ್ಲಿ ಗಣಿತವನ್ನು ಕಲಿಯಲು ಪ್ರೇರೇಪಿಸಲು, ಯುವಕರಲ್ಲಿ ಗಣಿತ ಕಲಿಕೆಯಿಂದ ಆಗುವ ಉಪಯೋಗಗಳನ್ನು ತಿಳಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವು ಸಹ ಹೌದು. ಹೀಗಾಗಿ ನಮ್ಮ ಶಾಲೆಯಲ್ಲಿ ಗಣಿತ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಕೊಡಿಸುವುದು ಕಲಿಯುವುದು ಗಣಿಸುವುದು ಪೈಥಾಗೋರಸ್ ಪ್ರಮೇಯ ಥೆಲ್ಸ್ನ ಪ್ರಮೇಯ ಬ್ಯಾಂಕ್ ಗೆ ಸಂಬಂಧಿಸಿದ ಯಂತ್ರಗಳು ತರಕಾರಿ ಬಟ್ಟೆಯ ಅಂಗಡಿಗಳ ಮಾದರಿ, ಅಳತೆ ಮಾಪನಗಳು, ವೃತ್ತ ತ್ರಿಭುಜ ಚೌಕ ಆಯತ ಚತುರ್ಭುಜದ ಕುರಿತಾದ ಮಾಹಿತಿ ನೀಡುವ ಮಾದರಿಗಳನ್ನು ಸೇರಿದಂತೆ 130 ಕ್ಕೂ ಹೆಚ್ಚು ಮಾದರಿಗಳನ್ನು ಮಕ್ಕಳು ಸಿದ್ದ ಪಡಿಸಿಕೊಂಡು ಬಂದು ವಿವರಣೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಪಂಪನಗೌಡ, ಶರಣಬಸವ ಅಕ್ಕಿ, ರೋಷನ್ ಜಮೀರ್, ಶಿಲ್ಪ ಚಂದ್ರಿಕಾ, ಶೋಭಾ, ಎ.ಶ್ವೇತಾ, ಪಿ. ಶ್ವೇತಾ, ಸೌಮ್ಯ, ದೇವಿ, ರುಕ್ಸಾನ, ಸಾನಿಯಾ, ಎಚ್.ಎಂ.ಭಾರ್ಗವಿ,  ಸಿಬ್ಬಂದಿಗಳಾದ ತಿಮ್ಮಾರೆಡ್ಡಿ, ಶಂಕರಪ್ಪ, ಜಡೇಶ್, ಗುರಪ್ಪ, ಹನುಮೇಶ್ ಸೇರಿದಂತೆ ವಿದ್ಯಾರ್ಥಿಗಳಿದ್ದರು

Previous Post Next Post

Contact Form

f="https://unpkg.com/video.js/dist/video-js.css" rel="stylesheet">