Kampli : ಕಂಪ್ಲಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ಕಾರ್ಯಕ್ರಮ : ಶಾಸಕ ಗಣೇಶ್ ಭಾಗಿ

ಕಂಪ್ಲಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ಕಾರ್ಯಕ್ರಮ

ಕಂಪ್ಲಿಯಲ್ಲಿ ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಜೆ.ಎನ್.ಗಣೇಶ್ ರವರು, ಕ್ರಿಸ್‌ಮಸ್ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಯೇಸುವಿನ ಜನ್ಮದಿನದಂದು ಈ ಪವಿತ್ರ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ದೇವರ ಮಗ ಮತ್ತು ಮಾನವೀಯತೆಯ ವಿಮೋಚಕ ಎಂದು ಪೂಜಿಸಲ್ಪಟ್ಟ ಯೇಸುವಿನ ಜನ್ಮವನ್ನು ಆಚರಿಸುವ, ಗೌರವಿಸುವ ಪವಿತ್ರ ದಿನವಾಗಿದೆ. ಈ ದಿನದಂದು ಜನರು ಚರ್ಚ್‌ಗಳಿಗೆ ಭೇಟಿ ನೀಡಿ, ಪ್ರಾರ್ಥನೆ

ಮಾಡುತ್ತಾರೆ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಹೇಳಲಾಯಿತು ಹಾಗೂ ನಾನು ಸ್ವತಂತ್ರ ಅಭ್ಯರ್ಥಿಯಾಗಿನಿಂದಲೂ ನನ್ನನ್ನು ಇಲ್ಲಿಯವರೆಗೂ ನಿಮ್ಮ ಸಹಕಾರ ಬೆಂಬಲ ನೀಡಿದ್ದೀರಿ ಮುಂದೆ ನಿಮ್ಮ ಬೆಂಬಲ ಸಹಕಾರ ಇದೇ ರೀತಿಯಾಗಿರಲಿ ನಾನು ನಿಮ್ಮೊಂದಿಗೆ ನಿಮ್ಮಸಮಾಜದೊಂದಿಗೆ ನಾನು ಸದಾ ಇದ್ದೇನೆ ಎಂದು ಶಾಸಕ ಗಣೇಶ್ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಚರ್ಚ್ ಫಾಥೆರ್ಸ್ ಕಂಪ್ಲಿ ಬ್ಲಾಕ್ ಅಧ್ಯಕ್ಷರು ಶ್ರೀನಿವಾಸ್ ಪುರಸಭೆ ಸದಸ್ಯರು ಮಾಜಿ ತಾಲೂಕು ಪಂಚಾಯತಿ ಸದಸ್ಯರು ಷಣ್ಮುಖಪ್ಪ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">