ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಕಿಸಿ ಕತ್ತರಿಸಿ ಹಣ ಕದ್ದ ಕಳ್ಳನ ಬಂಧನ
ಗದಗ ಜಿಲ್ಲೆಯ ಲಕ್ಷೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಕಿಸೆ ಕತ್ತರಿಸಿ ಹಣ ಕದ್ದ ಕಳ್ಳನನ್ನು ಬಂಧಿಸುವಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಐಪಿಸಿ 379 ಕಲಂ ಪ್ರಕರಣದಲ್ಲಿ ದಿನಾಂಕ 27 ,10 ,2023 ರಂದು ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದ ವ್ಯಕ್ತಿಯ ಒಳ ಕಿಸೆಯನ್ನು ಕತ್ತರಿಸಿ ಸುಮಾರು 1 ಲಕ್ಷ ಹಣವನ್ನು ಕದ್ದು ಪರಾರಿಯಾಗಿದ್ದ ಹುಬ್ಬಳ್ಳಿಯ ಸೆಟ್ಲಮೆಂಟ್ನ ಏರಿಯಾದ ಬಸವರಾಜ್ ತಂದೆ ತಿರುಕಪ್ಪ ಕ್ಯಾರೆಕಟ್ಟಿ ಎಂಬ 70 ವರ್ಷದ ಆರೋಪಿಯನ್ನು ಹುಬ್ಬಳ್ಳಿಯಿಂದ ಕರೆತಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಆರೋಪಿಯು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಾಗೂ ಆತನಿಂದ 61,000 ಸಾವಿರ ನಗದು ವಶ ಪಡಿಸಿಕೊಂಡು ,ಆರೋಪಿಯನ್ನು ಬಂಧಿಸುವಲ್ಲಿ ಪಿಎಸ್ಐ ಯೂಸುಫ್ ಜುಮೂಲಾ ಕ್ರೈಂ ಪಿಎಸ್ಐ ವಿ.ಜಿ ಪವಾರ, ಮತ್ತು ಅವರ ಸಂಗಡಿಗರಾದ ಎ.ಎಸ್.ಐ ಎನ್.ಎ.ಮೌಲ್ಯ ಡಿ.ಎಸ್ ನದಾಫ, ಜಿ.ಆರ್ ಗ್ರಾಮಪುರೋಹಿತ್ ಜಿ.ಎಂ.ಬೂದಿಹಾಳ, ಪಿ.ಡಿ ಮ್ಯಾಗೇರಿ, ಎಮ್.ಎ ಶೇಖ, ಎಮ್.ಡಿ ಲಮಾಣಿ, ಎಮ್.ಬಿ ತಳಗೇರಿ, ಎಮ್.ಎಸ್ ಬಳ್ಳಾರಿ. ಎ.ಆರ್ ಕಮ್ಮಾರ, ಸಿ.ಎಸ್ ಮಠಪತಿ, ಡಿ.ಎಸ್ ನದಾಫ, ಜಿ ಸಂಜೀವ ಕೊರಡೂರ, ಪಾಂಡುರಂಗರಾವ್, ಹೆಚ್.ಐ. ಕಲ್ಲಣ್ಣವರ, ಎನ್.ಎಚ್ ಮಠಪತಿ, ಮಧುಚಂದ್ರ ಧಾರವಾಡ, ಪಿ.ಎಮ್ ತೋರಾಥ, ಮಂಜು ಲಮಾಣಿ. ಚಾಲಕರಾದ ಅಪ್ಪಣ್ಣ ಲಮಾಣಿ, ತಾರಿಕೊಪ್ಪ ಇವರು ಉತ್ತಮ ಕಾರ್ಯಕ್ಕೆ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರದಿ : ವೀರೇಶ್ ಗುಗ್ಗರಿ