Shirahatti:ದ್ಯಾಮವ್ವ ದೇವಿಯ ಜಾತ್ರೆ ಅದ್ದೂರಿ ಆಚರಣೆಗೆ ನಿರ್ಧಾರ


ದ್ಯಾಮವ್ವ ದೇವಿಯ ಜಾತ್ರೆ ಅದ್ದೂರಿ ಆಚರಣೆಗೆ ನಿರ್ಧಾರ: ಪಟ್ಟಣದಲ್ಲಿ ಜಾತ್ರಾ ಕಮಿಟಿಯ ಮುಖಂಡ ಎನ್.ಆರ್ ಕುಲಕರ್ಣಿ

ಪ್ರತಿ ಮೂರು ವರ್ಷಗಳಿಗೊಮ್ಮೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವ ಬರುವ 2024ರ ಜನವರಿ 23 ರಿಂದ 25 ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು ಸದ್ಭಕ್ತರು ಸಹಕರಿಸಬೇಕೆಂದು ಜಾತ್ರಾ ಕಮಿಟಿಯ ಮುಖಂಡ ಎನ್ ಆರ್ ಕುಲಕರ್ಣಿ ಹೇಳಿದರು.


ಅವರು ಪಟ್ಟಣದ ದ್ಯಾಮವದೇವಿ ದೇವಸ್ಥಾನದಲ್ಲಿ ಜರುಗಿದ ಭಕ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು ಜನವರಿ 17ರಂದು ರಾತ್ರಿ 12:30 ಗಂಟೆಗೆ ಚೌತಮನಿಗೆ ದೇವಿಯನ್ನು ಕರೆದುಕೊಂಡು ಹೋಗುವುದು ಜನವರಿ 20ರಂದು ಪಟ್ಟಣದ ಎಲ್ಲ ದೇವರುಗಳಿಗೆ ಉಡಿ ತುಂಬ ಕಾರ್ಯಕ್ರಮ ಹಾಗೂ 22ರಂದು ದೇವಿಗೆ ನೆದರು ಬರೆಯುವ ಕಾರ್ಯಕ್ರಮ ಜರುಗಲಿದೆ

23 ರಂದು ಮೊದಲನೆಯ ದಿನ ಹಾಗೂ ಎರಡನೇ ದಿನ ದೇವಿಯು ನಗರದ ತುಂಬೆಲ್ಲ ಗ್ರಾಮ ಸಂಚಾರ ಮಾಡಲಿದ್ದು ಜನವರಿ 25ರಂದು ದೇವಿಯ ಮೆರವಣಿಗೆ ಹಾಗು ಉಡಿತುಂಬುವ ಕಾರ್ಯಕ್ರಮ ಜರಗುವುದು ಅಂದು ರಾತ್ರಿ ಕೆಲ ಧಾರ್ಮಿಕ ಕಾರ್ಯಕ್ರಮಗಳ ನಂತರ ಮಹಾಮಂಗಳಾರತಿ ನಡೆಯಲಿದೆ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯಲಿರುವ ದ್ಯಾಮವ್ವದೇವಿ ಜಾತ್ರೆ ಮಹೋತ್ಸವಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳು ಸಾರ್ವಜನಿಕರ ಸಹಕಾರದೊಂದಿಗೆ ನಡೆಯಲಿದ್ದು ಕಾರಣ ಎಲ್ಲ ಭಕ್ತ ಸಹೋದರ ಅಗತ್ಯವಿದೆ ಎಂದು ಭಕ್ತರಲ್ಲಿ ತಿಳಿಸಿದರು ಈ ದ್ಯಾಮವದೇವಿ ಜಾತ್ರಾ ಮಹೋತ್ಸವಕ್ಕೆ ಶಿರಹಟ್ಟಿ ಪಟ್ಟಣವನ್ನು ತೋರಣಗಳಿಂದ ಸಿಂಗರಿಸಿ ತಮ್ಮ ತಮ್ಮ ಮನೆಯ ಅಂಗಳವನ್ನು ಸ್ವಚ್ಛವಾಗಿಡಬೇಕು ಪಟ್ಟಣ ಪಂಚಾಯಿತಿ ಪರ್ವ ಕಾರ್ಮಿಕರಿಗೆ ಸಾರ್ವಜನಿಕರು ಸಹಕರಿಸಿ ಪಟ್ಟಣವನ್ನು ಶುಚಿಯಾಗಿಟ್ಟುಕೊಳ್ಳಲು ಈ ಸಭೆಯಲ್ಲಿ ತಿಳಿಸಲಾಯಿತು


ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಫಕೀರೇಶ ರಟ್ಟಿಹಳ್ಳಿ,  ಹೊನ್ನಪ್ಪ ಶಿರಹಟ್ಟಿ, ಮಂಜುನಾಥ ಗಂಟೆ, ಸುರೇಶ ವರವಿ, ಬಸವಣ್ಣಪ್ಪ ತುಳಿ, ಚಂದ್ರಕಾಂತ ನೂರ ಶೆಟ್ಟರೆ, ರಂಗಪ್ಪ ಗುಡಿಮನಿ, ಉಡುಚಪ್ಪ ನೀಲಣ್ಣನವರ, ಬಸವರಾಜ ಹೊಸೂರ, ಅಜ್ಜು ಪಾಟೀಲ, ಉಮೇಶ ಗಾಣಿಗೆರೆ, ಸುರೇಶ್ ವರವಿ, ಎಲ್ಲಪ್ಪ ಇಂಗಳಗಿ, ಬಸವರಾಜ ಚಿಕ್ಕ ತೋಟದ, ಹೆಚ್ಎಂ ದೇವಗಿರಿ, ಎಂ ಕೆ ಲಮಾಣಿ, ಸುರೇಶ ಕಪ್ಪತ್ತನವರ, ಬಸವರಾಜ ಬೋರಶೆಟ್ಟರ, ಎಂ ಸಿ ಹಿರೇಮಠ, ಚಂದ್ರಕಾಂತ ಅಕ್ಕಿ, ಬಸವರಾಜ ಒಡವಿ, ಅಕ್ಬರ ಸಾಬಿ ಯಾದಗಿರಿ, ಈರಣ್ಣ ಮಣಕವಾಡ, ಚನ್ನವೀರಪ್ಪ ಕಲ್ಯಾಣಿ, ಸುರೇಶ ವರವಿ, ಮುತ್ತು ಬಡಿಗೇರ, ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.


 ವರದಿ: ವೀರೇಶ್ ಗುಗ್ಗರಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">