Kampli : ಹೊಸ ವರ್ಷಾಚರಣೆಗೆ ಆಕರ್ಷಿಸುತ್ತಿರುವ ವಿಭಿನ್ನ ಕೇಕ್ ಗಳು : ಕೇಕ್ ಖರೀದಿಗೆ ಮುಗಿ ಬಿದ್ದ ಸಾರ್ವಜನಿಕರು

ಹೊಸ ವರ್ಷಾಚರಣೆಗೆ ಆಕರ್ಷಿಸುತ್ತಿರುವ ವಿಭಿನ್ನ ಕೇಕ್ ಗಳು : ಕೇಕ್ ಖರೀದಿಗೆ ಮುಗಿ ಬಿದ್ದ ಸಾರ್ವಜನಿಕರು

 ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನತೆ ಹೊಸ ವರ್ಷವನ್ನು ಸಂಭ್ರಮದಿಂದಲೇ ಆಚರಿಸಲು ಮುಂದಾಗಿದ್ದಾರೆ. ಯುವಕರು, ಮಕ್ಕಳು, ಮಹಿಳೆಯರು ತಮ್ಮ ವಯೋಮಾನದ ಗುಂಪಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿಕೊಂಡು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲು ಸನ್ನದ್ದರಾಗಿದ್ದಾರೆ. ಈತನ್ ಮಧ್ಯೆ  ಸಂಭ್ರಮದ ಹೊಸ ವರ್ಷ ಆಚರಣೆಗೆ ಮುಖ್ಯವಾಗಿ ಬೇಕಾಗುವ ಕೇಕ್ ನ ಖರೀದಿಗೆ ಜನರು ಎಲ್ಲೆಡೆ ಬೇಕರಿಗಳ ಮುಂದೆ ಮುಗಿಬಿದಿದ್ದಾರೆ.

ಹೊಸ ವರ್ಷದ ಕೇಕ್ ಗಳ ಕಲರವ : ಪಟ್ಟಣದ ಶ್ರೀ ಉದ್ಭವ ಮಹಾಗಣಪತಿ ದೇವಸ್ಥಾನದ ಬಳಿಯ  ಗಜಾನನ ಬೇಕರಿಯಲ್ಲಿ ಚಿಟ್ಟೆ ಕೇಕ್, ಗೊಂಬೆ ಕೇಕ್, ಮಿಕಿ ಮೌಸ್ ಕೇಕ್, ಮೊಲದ ಅಕೃತಿಯ ಕೇಕ್, 2024 ವರ್ಷದ ಸಂಖ್ಯೆಯ ಕೇಕ್, ಹನಿ ಕೇಕ್, ಚಾಕಲೇಟ್ ಕೇಕ್, ಪೇಸ್ಟ್ ಕೇಕ್, ಸೇರಿದಂತೆ ಭಿನ್ನ ವಿಭಿನ್ನ ರೀತಿಯ ಕೇಕ್ ಗಳನ್ನು ಅಂಗಡಿಯ ಮಾಲೀಕರಾದ ರಾಮಸಾಗರ ಶರಣಪ್ಪ ಅವರು ತಯಾರಿಸಿದ್ದು, ಕಲರ್ ಫುಲ್ ಆಗಿ ಆಕರ್ಷಿಸುತ್ತಿರುವಂತಹ ಕೇಕ್ ಗಳಿಗೆ ಜನರು ಫಿದಾ ಆಗಿದ್ದಾರೆ ಅಲ್ಲದೇ ಕೇಕ್ ಗಳ ಖರೀದಿಗೆ ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವು ಹೊಸ ವರ್ಷದ ಕೇಕ್ ಗಳ ತಯಾರಿಗೆ ಕೆಲಸಗಾರರನ್ನು ನಿಯೋಜಿಸಿ ಶುದ್ಧ, ರುಚಿಯಾದ ಹಾಗೂ ಅರೋಗ್ಯಕರ ಕೇಕ್ ಗಳನ್ನು ತಯಾರಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು ಅದರಂತೆಯೇ, ಪೇಸ್ಟ್ ಕೇಕ್, ಕ್ರೀಮ್ ಕೇಕ್, ಹನಿ ಕೇಕ್, ಚಾಕಲೇಟ್ ಕೇಕ್ ಸೇರಿದಂತೆ ವಿವಿಧ ರೀತಿಯ ವಿಭಿನ್ನ ಆಕೃತಿಗಳ ಕೇಕ್ ಗಳನ್ನು ತಯಾರಿಸಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಹಾಗೂ ವಿಭಿನ್ನ ರೀತಿಯ ಕೇಕ್ ಗಳನ್ನು ತಯಾರಿಸಿ ಗ್ರಾಹಕರಿಗೆ ಉತ್ತಮ ರೀತಿಯ ರುಚಿಯಾದ ತಿನಿಸನ್ನು ನೀಡುತ್ತಿದ್ದೇವೆ ಎಂದು ಗಜಾನನ ಬೇಕರಿಯ ಮಾಲೀಕರು ಹಾಗೂ ಕೇಕ್ ತಯಾರಕರಾದ ಶರಣಪ್ಪ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೇಕ್ ತಯಾರಕರಾದ ರವಿ, ವಿನಾಯಕ, ಮಲ್ಲಿಕಾರ್ಜುನ್, ಅಶೋಕ್ ಸೇರಿದಂತೆ ಇತರರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">