ಪ್ರಧಾನಿ ನರೇಂದ್ರ ಮೋದಿಜಿಯವರ ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದವರಿಗೆ ತಲುಪಿಸುವ ಉದ್ದೇಶದಿಂದ ವಿಕಸಿತ್ ಭಾರತ ಸಂಕಲ್ಪ ಯಾತ್ರೆ ದೇಶಾದ್ಯಂತ ಮೋದಿ ಗ್ಯಾರಂಟಿ ಲಾಭವನ್ನು ಜನರು ಪಡೆಯಬೇಕೆಂದು , ಗಿಡಕ್ಕೆ ನೀರು ಉಣಿಸುವ ಮೂಲಕ ಜನಪ್ರಿಯ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಚಾಲನೆ ನೀಡಿದರು.
ಹುಬ್ಬಳ್ಳಿಯ ಮಂಟೂರ ರೋಡಿನ ಡಾ ಬಾಬಾಸಾಹೇಬ ಅಂಬೇಡ್ಕರ್ ಕಾಲನಿ ಹತ್ತಿರದಲ್ಲಿ ಇಂದು ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದ ಮೂಲೆ ಮೂಲೆಗೆ ಯೋಜನೆ ತಲುಪಿಸಲು ಮೋದಿ ಗ್ಯಾರಂಟಿ ಗಾಡಿ ಸಂಚರಿಸಲಿದ್ದು , ಸ್ಥಳದಲ್ಲಿಯೇ ಯೋಜನೆ ಗಳ ಲಾಭಕ್ಕೆ ನೊಂದಾಯಿಸಿ ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪ್ರಭು ನವಲಗುಂದಮಠ, ಡಾ ರವೀಂದ್ರ ಎಲಖಾನ , ಭಾರತಿ ಎಲಖಾನ, ಅರುಣ ಹುದಲಿ , ಶಶಿಕಾಂತ ಬಿಜವಾಡ , ರಾಜು ಜರತಾರಘರ, ಜಗದೀಶ ಬುಳ್ಳಾನವರ, ಅನೂಪ್ ಬಿಜವಾಡ, ಉದಯ ಕೊಟ್ನಿ , ಸುನೀಲಕುಮಾರ ಮಂಡಾಡಿ ಸ್ಟೇಟ್ ಬ್ಯಾಂಕ್ ಮ್ಯಾನೇಜರ್ ನೂರಾರು ಶಿಬಿರಾರ್ಥಿಗಳು ಹಾಗೂ ಯೋಜನೆಗಳ ಸಿಬ್ಬಂದಿಗಳು ಭಾಗವಹಿಸಿದ್ದರು.