:- ಕಾಳಿದಾಸ ನಗರಕ್ಕೆ ವೈಜ್ಞಾನಿಕ ಚರಂಡಿ ವ್ಯವಸ್ಥೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳಿಗಾಗಿ ಒತ್ತಾಯಿಸಿ ಪ್ರತಿಭಟನೆ..
ಈ ಹೋರಾಟವನ್ನು ಉದ್ದೇಶಿಸಿ ಮಾತನಾಡಿದ SUCI(ಕಮ್ಯುನಿಸ್ಟ್ ) ಪಕ್ಷದ ಮುಖಂಡರಾದ ಶರಣು ಗಡ್ಡಿ, ಕೊಪ್ಪಳದ ಕಾಳಿದಾಸ ನಗರದಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ವಿಲ್ಲದೆ ನಿವಾಸಿಗಳು ದಿನನಿತ್ಯ ನಾನಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ಚರಂಡಿ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ನಿರ್ಮಿಸಿಲ್ಲ , ನೀರು ಸಂಗ್ರಹವಾಗದಂತೆ ಹರಿಯಲು ಚರಂಡಿ ನಿರ್ಮಾಣ ಮಾಡಬೇಕೆಂದು ಈ ಹಿಂದೆ ಕಾಳಿದಾಸ ನಗರದ ನಿವಾಸಿಗಳೊಂದಿಗೆ ಕೊಪ್ಪಳ ನಗರ ಸಭೆ ಆಯುಕ್ತರಿಗೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗಿತ್ತು. ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಸರಿಯಾದ ಕ್ರಮ ಕೈಗೊಂಡಿಲ್ಲ, ಇದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಕನಿಷ್ಠ ಅವಶ್ಯಕತೆಗಳಾದ ಚರಂಡಿ, ಬೀದಿ ದೀಪ,ರಸ್ತೆ,ಸ್ವಚ್ಛತೆ, ಕುಡಿಯುವ ನೀರಿನಲ್ಲಿ ಚರಂಡಿ ನೀರು ಬರದಂತೆ, ಹಾಗೂ ಸೊಳ್ಳೆಗಳು ನಿಯಂತ್ರಣ ಮಾಡಬೇಕಾಗಿತ್ತು. ಸಂಜೆಯಾದರೆ ಸಾಕು ಸೊಳ್ಳೆಗಳು ಮನೆ ಒಳಗೆ ಜೇನು ನೊಣಗಳಂತೆ ಬರುತ್ತೆ,ಚರಂಡಿ ನೀರು ರಸ್ತೆ ಮೇಲೆ ಬಂದು ದುರ್ವಾಸನೆಯಿಂದ ಮನೆಯ ಬಾಗಿಲು ಹಾಕಲೇಬೇಕು. ಸೊಳ್ಳೆ ಹಾವಳಿಯಿಂದ ಮಕ್ಕಳು, ಮಹಿಳೆಯರು, ವೃದ್ಧರು,ಈಗಾಗಲೇ ಡೆಂಗಿ, ಟೈಪಾಡ್, ನಂತಹ ರೋಗಗಳಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ಕಾಳಿದಾಸ ನಗರ ಜನರ ಆರೋಗ್ಯ ಕಾಪಾಡಿ ಸ್ವಚ್ಛತೆ ಕಾಪಾಡಬೇಕು. ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಕೂಡಲೇ ನಿರ್ಮಿಸಬೇಕು,ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ, ಶುದ್ಧ ಕುಡಿಯುವ ನೀರು, ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.