ಇಂದು ಗಂಗಾವತಿ ನಗರದ ಡಾ.ದೇವರಾಜ್ ಅರಸು ನರ್ಸಿಂಗ್ ಹಾಸ್ಟೆಲ್ ಗಂಗಾವತಿ ಹೊಸಳ್ಳಿ ರೋಡ್ ವಸತಿ ನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ,ಸ್ವಚ್ಛತೆ ಸಮಸ್ಯೆ, ಗುಣಾತ್ಮಕ ಉಪಹಾರವನ್ನು ನೀಡುತ್ತಿಲ್ಲವೆಂದು ವಿದ್ಯಾರ್ಥಿಗಳು ಆಗ್ರಾಹ ಮಾಡಿದರು ಇದಕ್ಕೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಗಂಗಾವತಿ ನಗರದ ವತಿಯಿಂದ ಹೋಗಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ ಕೂಡಲೇ ತಾಲೂಕು ಅಧಿಕಾರಿಗಳು ಹಾಗೂ ತಹಸಿಲ್ದಾರರಿಗೆ ಮಾತನಾಡಿ ಬೇಗನೆ ಬಗೆಹರಿಸುವಂತೆ ಆಗ್ರಾಹ ಮಾಡಲಾಯಿತು ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಸಹ ಸಂಚಾಲಕರು ಅಭಿಷೇಕ್ ಹಿರೇಮಠ,ರಾಜ್ಯ ಕಾರ್ಯಕರಿಣಿ ಸದಸ್ಯೆ ಸುಧಾ ಗೌಡ, ದೀಪ, ಕಿರಣ್ ಕುಮಾರ್, ಗೌತಮ್ ಕಾರ್ಯಕರ್ತರು ಉಪಸ್ಥಿತರಿದ್ದರು.
Tags
ಟಾಪ್ ನ್ಯೂಸ್