ಕಂಪ್ಲಿ :- ಸುರಪುರ ಶಾಸಕ ರಾಜ ವೆಂಕಟ್ಟಪ್ಪ ನಾಯಕ ನಿಧನಕ್ಕೆ ಕಂಪ್ಲಿ ಶಾಸಕ ಹಾಗೂ ಕೈ ಮಗ್ಗದ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಜೆಎನ್ ಗಣೇಶ್ ಅವರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿದ್ದ ವಾಲ್ಮೀಕಿ ಸಮುದಾಯದ ಹಿರಿಯ ನಾಯಕ ಸುರಪುರ ಕ್ಷೇತ್ರದ ಶಾಸಕರಾದ ರಾಜ ವೆಂಕಟಪ್ಪ ನಾಯಕನವರು ಹೃದಯಾಘಾತದಿಂದ ಇಂದು ಮೃತ ಪಟ್ಟಿದ್ದಾರೆ.
ಇವರ ಅಕಾಲಿಕ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಪ್ಲಿ ಶಾಸಕ ಹಾಗೂ ಕೈ ಮಗ್ಗದ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಜೆಎನ್ ಗಣೇಶ್ ವಿಷಾದ ವ್ಯಕ್ತಪಡಿಸಿದರು.