ಕಂಪ್ಲಿ :
ನಗರದ ಸಣಾಪುರ ರಸ್ತೆಯ ಸ್ಮಶಾನದ ಬಳಿ ಕೊಳೆತ ಸ್ಥಿತಿಯಲ್ಲಿನ ಅನಾಮದೇಯ ಶವ ಪತ್ತೆಯಾಗಿದೆ. ಶನಿವಾರ ರಾತ್ರಿ 9 ಗಂಟೆಯ ಸುಮಾರಿಗೆ ಸ್ಥಳೀಯರು ಬಹಿರ್ದೆಸೆಗೆಂದು ತೆರಳಿದ್ದಾಗ ನಾಯಿಗಳ ಅರೆಚಾಟ ಹಾಗೂ ಏನೋ ಕೆಟ್ಟ ವಾಸನೆ ಬರುತ್ತಿದ್ದರಿಂದ ಒಳಗಡೆ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿನ ಅನಾಮಧೇಯ ಹೆಂಗಸಿನ ಶವಪತ್ತಿಯಾಗಿದೆ. ಮೃತ ದೇಹಕ್ಕೆ ನೇರಳೆ ಬಣ್ಣದ ಸೀರೆಇದ್ದು ತಲೆ ಮುಖ ಬೆನ್ನು ಎರಡು ಕೈಗಳು ಎಡಗಾಲಿನ ಸಂಪೂರ್ಣ ಮಾಂಸಖಂಡವನ್ನು ನಾಯಿಗಳು ತಿಂದಿದ್ದು ತಲೆ ಬುರುಡೆ ಮೂಳೆಗಳು ಕಾಣುತ್ತಿದ್ದು ನಡುವಿನ ಭಾಗದಲ್ಲಿ ನೇರಳೆ ಬಣ್ಣದ ಸೀರೆ ಹುಟ್ಟಿದ್ದು ಕಂಡುಬಂದಿದೆ. ಅಂದಾಜು 30 ರಿಂದ 35 ವರ್ಷದ, 4.2 ಅಡಿ ಎತ್ತರದ, ನೇರಳೆ ಬಣ್ಣದ ಸೀರೆ ಹಳದಿ ಬಣ್ಣದ ಕುಪ್ಪಸ ಮತ್ತು ಕೆಂಪು ಬಣ್ಣದ ಲಂಗ ಧರಿಸಿರುತ್ತಾರೆ, ಮತ್ತು ಹಿತ್ತಾಳೆಯಂತಹ ಎರಡು ಕೈ ಬಳೆಗಳನ್ನು ಧರಿಸಿರುವುದು ಕಂಡು ಬಂದಿದೆ.
ಮೇಲ್ನೋಟಕ್ಕೆ :
ಸುಮಾರು ಆರರಿಂದ ಏಳು ದಿನಗಳ ಹಿಂದೆ ಅರೆಬರೆ ಹೂತಿರುವ ಮೃತ ದೇಹವನ್ನು ನಾಯಿಗಳು ಅಥವಾ ಇನ್ನು ಯಾವುದೋ ಪ್ರಾಣಿಗಳು ಹೊರತೆಗೆದು ತಿನ್ನಲು ಎಳೆದಾಡಿಕೊಂಡು ಬಂದಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಆದರೆ ಮೃತಳ ಸಾವಿನ ನಿಖರತೆ ತಿಳಿಯದ ಕಾರಣ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಈ ಚಹರೆಯುಳ್ಳ ವ್ಯಕ್ತಿಯ ಕುರಿತು ಮಾಹಿತಿ ದೊರೆತಲ್ಲಿ ಕಂಪ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮೊ ಸ 9480803038, ಕಂಪ್ಲಿ ಪೊಲೀಸ್ ಠಾಣೆ ಮೊ ಸ 827797722 ಗೆ ಸಂಪರ್ಕಿಸಲು ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.