ಸಿದ್ದಿ ಬುಡಕಟ್ಟು ಜನಾಂಗದ ಯುವಕನ ಕೊಲೆ ಹುನಶೆಟ್ಟಿಕೊಪ್ಪ :
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕ ಹುನಶೆಟ್ಟಿಕೊಪ್ಪ ಗ್ರಾಮದಲ್ಲಿ ದಿನಾಂಕ :24-02-2024 ರಂದು ಪ್ರಜ್ಜಲ್ಲ ಪ್ರಕಾಶ ಕಕ್ಕೇರಿಕರ (ಸಿದ್ದಿ ) S.T. ಈ ಯುವಕನನ್ನು ರಾತ್ರಿ ಹೊಡೆದು ಕೊಲೆ ಮಾಡಿದ್ದಾರೆ ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ ಕೊಲೆ ಮಾಡಿದ ಈ ಹೇಯ ಕೃತ್ಯವನ್ನು DSS ಕಟ್ಟೋರವಾದ ಶಬ್ದಗಳಿಂದ ಖಂಡಿಸುತ್ತದೆ ಕೊಲೆ ಆರೋಪಿಗಳಿಗೆ ಸರ್ಕಾರ ಕಠಿಣ ಶಿಕ್ಷೆಗೆ ಒಳಪಡಿಸಲು ಒತ್ತಾಯಿಸಿದರು.
ಆದರೆ ಕೆಲವು ಆರೋಪಿತರನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ ಆದರೆ ಮುಖ್ಯ ಆರೋಪಿ ಅನಿಕೇತ ವಿಜಯ ಮೀರಾಶಿ ಎಂಭ ಆರೋಪಿಯ ಬಂಧನ ಈ ವರೆಗೂ ಆಗಿರುವುದಿಲ್ಲ ಅನಿಕೇತ ಮೀರಾಶಿಯನ್ನು ಬಂದಿಸದಂತೆ ಪೊಲೀಸರ ಮೇಲೆ ರಾಜಕೀಯ ಪ್ರಭಾವ ಮತ್ತು ಒತ್ತಡವಿರುವುದರಿಂದ ಪೊಲೀಸರು ಅನಿಕೇತನನ್ನು ಬಂದಿಸುತ್ತಿಲ್ಲ ಅನಿಕೇತನನ್ನು ಬಂದಿಸುವಂತೆ ಒತ್ತಾಯಿಸಿ ಸಿದ್ದಿ ಬುಡಕಟ್ಟು ಸಮುದಾಯದ ಜನರು ತಹಸೀಲ್ದಾರ್ ಯಲ್ಲಾಪುರ ಮತ್ತು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡುತ್ತಿರುವುದು ತಿಳಿದು ಬಂದಿದೆ ನಮ್ಮ ಯಲ್ಲಾಪುರ ತಾಲೂಕ DSS ಬೆಂಬಲವನ್ನು ಕೊಟ್ಟಿರುತ್ತದೆ.