ತುರ್ವಿಹಾಳ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಮ್.ಸಿ. ಅಧ್ಯಕ್ಷರಾಗಿ ನವಾಬ್ ಶರೀಫ್ ಮಕಾಂದಾರ್, ಉಪಾಧ್ಯಕ್ಷರಾಗಿ ಲಾಲ್ ಬೀ ಅವರನ್ನು ಆಯ್ಕೆಮಾಡಲಾಯಿತು.
ನಂತರ ಮಾತನಾಡಿದ ನೂತನ ಅಧ್ಯಕ್ಷ ನವಾಬ್ ಶರೀಫ್ ಮಕಾಂದಾರ್ ಶಾಲೆಯ ಎಸ್‌ಡಿಎಮ್‌ಸಿ ಸದಸ್ಯರ ಸಹಕಾರ ದೋಂದಿಗೆ ಆಯ್ಕೆಯಾಗಿದ್ದೇನೆ ಶಾಲಾ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೆನೆ ಹಾಗೂ ನನಗೆ ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಬೆಂಬಲ ನಿಡಿದ ನನ್ನ ಎಲ್ಲಾ ಸಮಾಜದ ಹಿರಿಯ ಮುಖಂಡರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಎಂ.ಡಿ. ಫಾರೂಖ್ ಸಾಬ್ ಖಾಜಿ, ಸಿರಾಜ್ ಪಾಷಾ ದಳಪತಿ, ಶಾಮೀದ ಅಲಿ ಅರಬ್, ಸಿಆರ್‌ಪಿ ಹನುಮೇಶ್ ಭಂಗಿ, ಅನ್ವರ್ ಪಾಷಾ ದಳಪತಿ, ಮಹ್ಮದ್ ಉಸ್ಮಾನ್ ಚೌದ್ರಿ, ಮೈಮುದ್ ಅತ್ತಾರ್, ಮೈಬುಬ್ ದಳಪತಿ ಯುನೂಸ ಖಾಜಿ, ಹಸೇನ್ ಸಾಬ, ಶಾಲೆಯ ಪ್ರ.ಮುಖ್ಯಶಿಕ್ಷಕಿ ನಫೀಸಾ ಸುಲ್ತಾನ್, ಶಿಕ್ಷಕಿಯಾರಾದ ಶಂಶಾದ ಬೇಗಂ,ನೇಹಾ ಮತ್ತು ಅಯಿಶಾ,ಹಾಗೂ ಪಾಲಕರು ಮತ್ತು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಿಪೋರ್ಟರ್ ಮೆಹಬೂಬ ಮೊಮೀನ.