ಎಸ್ಸೆಸ್ಸೆಲ್ಸಿ ಪರೀಕ್ಷೆ 8 ವಿದ್ಯಾರ್ಥಿಗಳು ಗೈರು-Siddi TV


ಎಸ್ಸೆಸ್ಸೆಲ್ಸಿ ಪರೀಕ್ಷೆ 8  ವಿದ್ಯಾರ್ಥಿಗಳು ಗೈರು

ಇಂದು ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಂಡಿವೆ.   ಪಟ್ಟಣದಲ್ಲಿ ಸೋಮವಾರ ಪ್ರಥಮ ಭಾಷೆಗೆ ಒಟ್ಟು 411 ವಿದ್ಯಾರ್ಥಿಗಳ ಪೈಕಿ 403 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,ಶಾಂತಿಯುತ ಪರೀಕ್ಷೆ ನಡೆದಿದೆ. ಪಟ್ಟಣದ ಸರಕಾರಿ ಪ್ರೌಢ ಶಾಲೆಯ ಕೇಂದ್ರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಿಕ್ಷಣ ಇಲಾಖೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಟ್ಟೆಚ್ಚರ ವಹಿಸಿದ್ದರು.

ಪ್ರಥಮ ಭಾಷೆ ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಗಳೂ ನಕಲು ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಡಿಬಾರ್ ಆಗಿಲ್ಲ.191 ವಿದ್ಯಾರ್ಥಿಗಳು, 212 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 403 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, 8  ವಿದ್ಯಾರ್ಥಿಗಳು ಗೈರಾಗಿದ್ದಾರೆ, 

18 ಪರೀಕ್ಷಾ ಕೋಠಡಿಗಳಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲಾಗಿತ್ತು. ತುರ್ವಿಹಾಳ ಪರೀಕ್ಷಾ ಕೇಂದ್ರವನ್ನು ಸಿಂಧನೂರು ಪೌರಾಯುಕ್ತ ಮಂಜುನಾಥ ಗುಂಡುರ ವಿಕ್ಷಣೆ ಮಾಡಿದರು ಎಂದು ಮೇಲ್ವಿಚಾರಕಿ ರಮಾದೇವಿ ತಿಳಿಸಿದರು .

*ರಿಪೋರ್ಟರ್ ಮೆಹಬೂಬ ಮೊಮೀನ.*

Previous Post Next Post

Contact Form

f="https://unpkg.com/video.js/dist/video-js.css" rel="stylesheet">