ಕಂಪ್ಲಿ ವ್ಯಾಪ್ತಿಯಲ್ಲಿ ಸೆ.9ರಂದು ವಿದ್ಯುತ್ ವ್ಯತ್ಯಯ
ಕಂಪ್ಲಿ, ಸೆ.6: ಕಂಪ್ಲಿಯ 110/11 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ
2ನೇ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ
ಸೆಪ್ಟೆಂಬರ್ 9ರಂದು ಬೆಳಗ್ಗೆ 11ರಿಂದ ಸಂಜೆ 5ರವರೆಗೆ
ಕಂಪ್ಲಿ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು
ನಗರ ಹಾಗೂ ಎನ್.ಜೆ.ವೈ (NJY)ಫೀಡರ್‌ಗಳು
ಕಂಪ್ಲಿ ಟೌನ್ (U), ಇಂಡಸ್ಟ್ರಿಯಲ್ ಫೀಡರ್, ಕಂಪ್ಲಿ ಕೊಟ್ಟಾಲ್ (U), ವಿದ್ಯಾಪೀಠ (NJY), ಎಚ್.ಡಿ. ಹಳ್ಳಿ (NJY), ಬಸವೇಶ್ವರ ನಗರ (U), ಪ್ರಭುದೇವ ನಗರ ಫೀಡರ್, 33 ಕೆ.ವಿ ಇಟ್ಟಿಗಿ ಮಾರ್ಗ, 33 ಕೆ.ವಿ ಕಂಪ್ಲಿ ಮಾರ್ಗ ಹಾಗೂ 11 ಕೆ.ವಿ ಸೋಲಾರ್ ಐಪಿಪಿ ಫೀಡರ್.
ಕೃಷಿ ನೀರಾವರಿ (IP) ಫೀಡರ್‌ಗಳು
ದೇವಸಮುದ್ರ, ಜಾನೂರು, ಸಾನಾಪುರ, ಕೆ.ಟಿ.ಪುರ, ಮುಸ್ತೂರುಘಾಟ್ ಹಾಗೂ ಕೆ.ಎನ್. ಕ್ಯಾಂಪ್ ವ್ಯಾಪ್ತಿಯ ಪ್ರದೇಶಗಳು.
ವಿದ್ಯುತ್ ಪುನರಾರಂಭ:
ನಿರ್ವಹಣಾ ಕಾಮಗಾರಿ ಪೂರ್ಣಗೊಂಡ ತಕ್ಷಣ,
ಸಂಜೆ 5 ಗಂಟೆಯ ನಂತರ ವಿದ್ಯುತ್ ಸರಬರಾಜನ್ನು ಎಂದಿನಂತೆ ಪುನರಾರಂಭಿಸಲಾಗುವುದು.
ವಿದ್ಯುತ್ ವ್ಯತ್ಯಯದ ಅವಧಿಯಲ್ಲಿ ಸಾರ್ವಜನಿಕರು ಹಾಗೂ ರೈತರು ಸಹಕರಿಸುವಂತೆ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ಪ್ರಕಟಣೆ : ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ.),ಉಪ-ವಿಭಾಗ, ಜೆಸ್ಕಾಂ, ಕಂಪ್ಲಿ.
ವರದಿ : ಸಿದ್ದಿ ಟಿವಿ ರಘುವೀರ್, ಕಂಪ್ಲಿ
Tags
ಟಾಪ್ ನ್ಯೂಸ್
