ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಜಾಗೃತಿ ಕಾರ್ಯಕ್ರಮ
ಕಂಪ್ಲಿ :
ಕಂಪ್ಲಿ ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಶ್ರೀ ವಿರುಪಾಕ್ಷಪ್ಪ ಮೇಲ್ವಿಚಾರಕರು ಸರಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯ ಕಂಪ್ಲಿ ಇವರ ಅಧ್ಯಕ್ಷತೆಯಲ್ಲಿ ಹಾಗೂ ಡಾಕ್ಟರ್ ಶ್ರೀನಿವಾಸ್ ದಂತ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಕಂಪ್ಲಿ ಇವರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡು ಕಾರ್ಯಕ್ರಮಕ್ಕೆ ಸಸಿಗೆ ನೀರೆಯುವ ಮುಖಾಂತರ ಚಾಲನೆ ನೀಡಿದರು.
ನಂತರ ಡಾಕ್ಟರ್ ಶ್ರೀನಿವಾಸ್ ದಂತ ವೈದ್ಯಾಧಿಕಾರಿಗಳು ಬಾಯಿಯ ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
"ಸಂತೋಷದ ಬಾಯಿ ಸಂತೋಷದ ದೇಹ" ಘೋಷಣೆಯೊಂದಿಗೆ ದೇಹದ ಆರೋಗ್ಯಕ್ಕೆ ಬಾಯಿಯ ಆರೋಗ್ಯ ಅತ್ಯಂತ ಪ್ರಮುಖವಾದುದ್ದು ,ಬೀಡಿ ಸಿಗರೇಟ್ ,ತಂಬಾಕು ಉತ್ಪನ್ನಗಳ ಸೇವನೆಯನ್ನು ತ್ಯಜಿಸಿ, ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು. ಜೊತೆಗೆ ಹಲ್ಲನ್ನು ಉಜ್ಜುವ ವಿಧಾನವನ್ನು ಪ್ರಾತ್ಯಕ್ಷಿಕೆ ಮಾಡಿ ಬಾಲಕಿಯರಿಗೆ ತೋರಿಸಿ ಕೊಟ್ಟರು.
ಇದೇ ವೇಳೆ ವಿದ್ಯಾರ್ಥಿನಿಯರಿಗೆ ಬಾಯಿಯ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಯನ್ನು ನೀಡಿ, ಕೆ ಶೋಭಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಸ್ವಚ್ಛತೆ, ಮನಸ್ಸಿನ ಖಿನ್ನತೆಗಾಗಿ ಯೋಗ ,ಧ್ಯಾನ, ವ್ಯಾಯಾಮ ಮಾಡುವ ಪ್ರಾಮುಖ್ಯತೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎನ್ ಉಮಾದೇವಿ PHCO, ಮಂಜುನಾಥ್RKSK ಆಪ್ತ ಸಮಾಲೋಚಕರು, ಈರಣ್ಣ STS,ಕವಿತಾ ವಸತಿ ನಿಲಯ ಪಾಲಕರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.