ಲಕ್ಷ್ಮೇಶ್ವರದ ಹಿರಿಯ ದಿವಾಣಿ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸುಮಾರು 34 ಸಿವಿಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಯಿತು. ಅದರಲ್ಲಿ ಸಣ್ಣ ಪುಟ್ಟ ಕಾರಣಗಳಿಂದ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಎರಡು ಜೋಡಿಗಳನ್ನು ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಸರ್ವಮಂಗಳ ಕೆ.ಎಂ. ಹಾಗೂ ಸಂಧಾನಕಾರರಾದ ಶ್ರೀಮತಿ ಆರ್.ಎಂ.ಕುರಿ.ರವರು ಹಾಗೂ ವಿವಾಹ ವಿಚ್ಛೇದನಕ್ಕೆ ಅರ್ಜಿಸಲ್ಲಿಸಿದ್ದವರ ಪರವಾಗಿ ವಕೀಲರಾಗಿದ್ದ (ಕ್ರಮವಾಗಿ) ಎನ್.ಐ.ಬೆಲ್ಲದ್ ಮತ್ತು ಎಸ್.ಕೆ. ಪುರ್ತಗೇರಿ ಹಾಗೂ ಬಿ.ಎಸ್. ಪಾಟೀಲ್ ಮತ್ತು ಪಿ.ಎಂ.ನಾವಿ ವಕೀಲರುಗಳು ಅವರಿಗೆ ತಿಳಿ ಹೇಳಿ ಅವರ ವಿವಾಹ ಜೀವನವನ್ನು ಸರಿಪಡಿಸಿ, ಮತ್ತೆ ಉತ್ತಮವಾಗಿ ಜೀವನ ನಡೆಸಲು ಅರಸಿದರು. ಎರಡೂ ಜೋಡಿಗಳಿಗೆ ಮಾಲೆ ಬದಲಾಯಿಸಿ, ಸಿಹಿ ನೀಡಿ ನ್ಯಾಯಾಲಯದಲ್ಲಿ ಅವರ ಹೊಸ ಜೀವನಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅದ್ಯಕ್ಷರಾದ ಬಿ.ಎಸ್. ಬಾಳೇಶ್ವರಮಠ, ಉಪಾಧ್ಯಕ್ಷರಾದ ಎ.ಟಿ. ಕಟ್ಟಿಮನಿ, ಕಾರ್ಯದರ್ಶಿಗಳಾದ ವಿ.ಕೆ. ನಾಯಕ್ ಸೇರಿದಂತೆ ವಕೀಲರು ಬಿ ವಿ ನೇಕಾರ, ಎಸ್.ಹೆಚ್. ಮುಳಗುಂದ, ಕಮತದ್ ಸೇರಿದಂತೆ ಹಲವಾರು ಹಿರಿಯ, ಕಿರಿಯ ವಕೀಲರುಗಳು ಹಾಗೂ ನ್ಯಾಯಾಲಯ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ವೀರೇಶ್ ಗುಗ್ಗರಿ