ಎಸ್.ಎಸ್.ಎಲ್.ಸಿ ಮಕ್ಕಳು ಪರೀಕ್ಷೆ ಬರೆಯಲು ಉಚಿತ ಪ್ಯಾಡ್ ವಿತರಣೆ.
ಕಂಪ್ಲಿ :
ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರಕಾರಿ ಪ್ರೌಢಶಾಲೆ ಮತ್ತು ಶರಣಮ್ಮ ದೊಡ್ಡಯ್ಯ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ಯಾಡ ಪೂರಕ ಪರಿಕರಗಳನ್ನು ಕೊಡುಗೆಯಾಗಿ ಗುರುವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಭಯ ಬೇಡ ಸುಲಭವಾಗಿ ಪರೀಕ್ಷೆ ಎದುರಿಸಲು ಮುಂದಾಗಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರಕಾರಿ ಪ್ರೌಢಶಾಲೆ ಮತ್ತು ಶರಣಮ್ಮ ದೊಡ್ಡಯ್ಯ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ಯಾಡ ಪೂರಕ ಪರಿಕರಗಳನ್ನು ಕೊಡುಗೆಯಾಗಿ ಗುರುವಾರ ವಿತರಿಸಿ ಮಾತನಾಡಿ ಸಮಾಜದಲ್ಲಿ ಶಿಕ್ಷಣಕ್ಕೆ ಉನ್ನತ ಸ್ಥಾನವಿದೆ ತಪ್ಪದೇ ಮಕ್ಕಳನ್ನು ಶಾಲೆಗೆ ಕಳುಹಿಸಸುವುದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆಯಬೇಕು.
ಪ್ರತಿ ವರ್ಷವೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲೇಖನ ಪರಿಕರ ವಿತರಿಸಲಾಗುತ್ತಿದ್ದು, ಶಿಕ್ಷಣ ಪ್ರೇಮಿಗಳಾದ ಮೌನೇಶ, ಸುರೇಶ ಸೇರಿ ಜತೆಗೂಡಿ 100 ವಿದ್ಯಾರ್ಥಿಗಳಿಗೆ ಪರೀಕ್ಷೆ ಪರಿಕರಗಳಾದ ಪ್ಯಾಡ್. ಪೆನ್ನು ಇತರೆ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿಲಾಗಿದೆ.
ಆರ್ಥಿಕವಾಗಿ ಸದೃಢರಾದವರು ಸರಕಾರಿ ಶಾಲೆ ಮಕ್ಕಳ ಶೈಕಣಿಕ ಅಭಿವೃದ್ಧಿಗೆ ಸಹಾಯ, ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಎಚ್.ಜಗದೀಶ, ಶಿಕ್ಷಕರಾದ ಮಡಿವಾಳಪ್ಪ, ನಿರ್ಮಲಾ, ಚಂದ್ರಪ್ಪ, ರೆಡಿ ಸರ್ವಮಂಗಳಮ್ಮ, ವಿದ್ಯಾವತಿ, ಯಶೋದಾ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.