ಕಂಪ್ಲಿ :
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ಬೌದ್ಧ ಸಮಾಜ ಬಳ್ಳಾರಿ ಜಿಲ್ಲಾ ಘಟಕ ಕಂಪ್ಲಿ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯಲ್ಲಿ ಹಲವಾರು ಸಮಾಜಮುಖಿ ಹಾಗೂ ಶೋಷಣೆ, ದೌರ್ಜನ್ಯಗಳ ವಿರುದ್ದ ಧ್ವನಿ ಎತ್ತುವ ಮೂಲಕ ದಲಿತರಿಗೆ ನ್ಯಾಯ ಒದಗಿಸುತ್ತ ಬಂದಿರುವ ಕರ್ನಾಟಕ ಬೌದ್ಧ ಸಮಾಜ ಬುಧವಾರ ಕಂಪ್ಲಿ ತಾಲೂಕಿನಲ್ಲಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ,ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ , ಪತ್ರಿಕಾ , ಮಾಧ್ಯಮ, ನ್ಯಾಯಾಂಗ ಕ್ಷೇತ್ರದಲ್ಲಿ ಸಾಧನೆಯ ಹಾದಿ ತುಳಿದಿರುವ ಸಾಧಕರನ್ನು ಗುರುತಿಸಿ ಕರ್ನಾಟಕ ಬೌದ್ಧ ಸಮಾಜ ಸನ್ಮಾನಿಸಿದರು.
ಸಾಧಕರನ್ನು ಸನ್ಮಾನಿಸಿ ಗೌರವಿಸುವುದರ ಮುಖೇನ ಅವರ ಕಾರ್ಯದಲ್ಲಿ ಇನಷ್ಟು ಮುಂದೆ ಸಾಗಲಿ ಎಂದು ಕೆಬಿಸ್ ಜಿಲ್ಲಾ ಅಧ್ಯಕ್ಷ ರಮೇಶ್ ಸುಗ್ಗೇನಳ್ಳಿ ರವರು ಹೇಳಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ರಮೇಶ್ ಸುಗ್ಗೇನಳ್ಳಿ, ಪಿ.ಸಿ.ಅಂಜಿನಪ್ಪ, ಬಿ. ಚನ್ನಬಸಪ್ಪ, ವಕೀಲರಾದ ಶಿವಪ್ಪ, ಉಮೇಶ್, ಮಂಜು ಮತ್ತು ಕರ್ನಾಟಕ ಬೌದ್ದ ಸಮಾಜದ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು, ಯುವಕರು ಭಾಗಿಯಾಗಿದ್ದರು.