ನೀರನ್ನು ಪ್ರತಿಯೊಬ್ಬರೂ ಮಿತವಾಗಿಬಳಸಿ :- ಶಾಂತಮುತ್ತಯ್ಯ ಗುರುವಿನ್.
ಜಿಲ್ಲಾ ಪಂಚಾಯತ್ ರಾಯಚೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ರಾಯಚೂರ ಸಹಭಾಗಿತ್ವದಲ್ಲಿ ಸಿಂಧನೂರು ನಗರದ ವಿವೆರಾ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಜಿಲ್ಲಾ ಯೋಜನಾ ವ್ಯವಸ್ಥಾಪಕ ಬಸವರಾಜ್ ಗಲಿಗಿನ ಸರಕಾರ ಹಲವಾರು ಯೋಜನೆಗಳನ್ನು ಸಾರ್ವಜನಿಕರಿಗೆ ತಂದಿದೆ ಅದರಲ್ಲೂ ಮುಖ್ಯವಾಗಿ ಜಲಜೀವನ್ ಮಿಷನ್ ಯೋಜನೆಯ ಮನೆ ಮನೆಗೂ ಗಂಗೆ ಎನ್ನುವ ಘೋಷವಾಕ್ಯದಡಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ ಪ್ರಸ್ತುತ ಜಿಲ್ಲೆಯಲ್ಲಿ ಬರಗಾಲ ಎದುರಿಸುತ್ತಿದ್ದು ನೀರಿನ ವ್ಯಥೆಯ ಉಂಟಾಗಿರುವುದರಿಂದ ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ 24/7 ಕಂಟ್ರೋಲ್ ರೂಮ್ ಸಹಾಯವಾಣಿ ಸ್ಥಾಪಿಸಲಾಗಿದೆ. ಅದನ್ನು ನಾವೆಲ್ಲರೂ ಉಪಯೋಗಿಸಬಹುದು ಮಾಹಿತಿ ಪಡೆಯಬಹುದು. ಹಾಗೂ ನಾವೆಲ್ಲರೂ ಮುಂದಿನ ದಿನಗಳಲ್ಲಿ ಯೋಜನೆಯನ್ನು ಸದ್ಬಳಕೆ ಮತ್ತು ಅನುಷ್ಠಾನಕ್ಕೆ ಮುಂದಾಗಬೇಕಿದೆ, ಅದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಶಾಂತಮುತ್ತಯ್ಯ ಗುರುವಿನ್ ಮಾತನಾಡಿ ನೀರು ಎನ್ನುವದು ಎಲ್ಲಾ ಜೀವರಾಶಿಗಳಿಗೂ ಜೀವಾಮೃತವಿದ್ದಂತೆ ಅದರ ಮೌಲ್ಯವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ನೀರನ್ನು ಪ್ರತಿಯೊಬ್ಬರೂ ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ನೀರನ್ನೇ ಆಸ್ತಿಯನ್ನಾಗಿ ಕೊಡಬೇಕಾಗಿದೆ. ಯೋಜನೆಗಳಾದ ಮಳೆ ನೀರು ಕೊಯ್ಲು ಮತ್ತು ಇಂಗು ಗುಂಡಿಗಳನ್ನು ಮಾಡಿಕೊಂಡು, ಗಿಡ-ಮರಗಳನ್ನು ನೆಟ್ಟು ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ಮುಂದಾಗಬೇಕಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಇಂತಹ ಯೋಜನೆಗಳನ್ನು ರೂಪಿಸಲಾಗಿದೆ ಫಲಾನುಭವಿಗಳು ಸದ್ಬಳಕೆ ಮಾಡಿಕೊಂಡು ನೀರಿನ ಮೌಲ್ಯವನ್ನು ಅರಿತು ಸಂರಕ್ಷಿಸುವಲ್ಲಿ ನಮ್ಮ ಪಾತ್ರ ಮಹತ್ವದ್ದಾಗಿದೆ. ನೀರನ್ನು ವ್ಯರ್ಥ ಮಾಡದಂತೆ ಅರಿವು ಮೂಡಿಸುವಲ್ಲಿ ಮತ್ತು ಸಂರಕ್ಷಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಆದ್ದರಿಂದ ಎಲ್ಲರೂ ಜಾಗೃತರಾಗಿ, ಜೀವ ಜಲದ ಮಹತ್ವದ ಬಗ್ಗೆ ಇನ್ನೂ ಹೆಚ್ಚೇಚ್ಚು ಅರಿವು ಮೂಡಿಸಬೇಕಾಗಿದೆ ಎಂದರು.
ರಿಪೋರ್ಟರ್ ಮೆಹಬೂಬ ಮೊಮೀನ.